Advertisement

ಮೇಕೆದಾಟು ಪಾದಯಾತ್ರೆ : ಡಿಕೆಶಿಗೆ ರಣೋತ್ಸಾಹ

04:39 PM Dec 30, 2021 | Team Udayavani |

ಕನಕಪುರ: ಮೇಕೆದಾಟು ಪಾದಯಾತ್ರೆಗೆ ಭರದ ಸಿದ್ಧತೆಯಲ್ಲಿ ತೊಡಗಿರುವ ಡಿಕೆಶಿ ಅದರ ಭಾಗವಾಗಿ ಬುಧವಾರ ಸಂಗಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಾಂಗ್ರೆಸ್‌ ನೇತೃತ್ವದಲ್ಲಿ ಜ.9ರಂದು ಮೇಕೆದಾಟು ಯೋಜನೆಗೆ ಒತ್ತಾಯಿಸಿ ನಡೆಯಲಿರುವ ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭರದ ಸಿದ್ಧತೆ ನಡೆಸಿದ್ದಾರೆ. ಪಾದಯಾತ್ರೆ ಬಗ್ಗೆ ಜಾಗೃತಿ ಮೂಡಿಸಲು ಹೆಗ್ಗನೂರಿನ ಬಳಿ ತಂಗುದಾಣಕ್ಕೆ ಮೇಕೆದಾಟುವಿನ ಕಲಾಕೃತಿ ಬಿಡಿಸಿ ನಮ್ಮ ಜಲ, ನಮ್ಮ ನೆಲ, ಮೇಕೆದಾಟು ನಮ್ಮ ಹಕ್ಕು ಎಂದು ಬರೆದಿರುವ ಘೋಷವಾಕ್ಯಗಳನ್ನು ಡಿ.ಕೆ.ಶಿವಕುಮಾರ್‌ ವೀಕ್ಷಿಸಿದರು.

Advertisement

ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಸಂಗಮಕ್ಕೆ ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಕಾವೇರಿ ಮಾತೆಗೆ ಎಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಬೇಕು?
ಎಷ್ಟು ಜನರು ಪಾದಯಾತ್ರೆಯಲ್ಲಿ ಸೇರಬಹುದು? ಹೋರಾಟಗಾರರು ಎಲ್ಲಿ ಜಮಾವಣೆ ಗೊಳ್ಳ ಬೇಕು? ವಿವಿಧ ಭಾಗಗಳಿಂದ ಬರುವವರಿಗೆ ಊಟದ ವ್ಯವಸ್ಥೆ, ವಾಹನದ ನಿಲುಗಡೆ ವ್ಯವಸ್ಥೆ
ಹೇಗಿರಬೇಕು ಎಂಬ ರೂಪುರೇಷುಗಳ ಬಗ್ಗೆ ಲೆಕ್ಕಚಾರದಲ್ಲಿ ತೊಡಗಿದ್ದರು.

ತಾಲೂಕಿನಲ್ಲಿ ಮೂರು ದಿನ ಸಾಗಲಿರುವ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಮಾರ್ಗಮಧ್ಯೆ ಉಳಿದುಕೊಳ್ಳಲು ಸಂಗಮದ ಬಳಿ ಇರುವ ಪಿಡಬ್ಲೂÂಡಿ ಗೆಸ್ಟ್‌ ಹೌಸ್‌, ಬೊಮ್ಮಸಂದ್ರದ
ಬಳಿಯಿರುವ ಜಂಗಲ್‌ ರೆಸಾರ್ಟ್‌. ಮಾರ್ಗಮಧ್ಯೆ ಉಯ್ಯಂಬಳ್ಳಿ ಮತ್ತು ಏಳಗಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೊಠಡಿಗಳಲ್ಲಿ ವಾಸ್ತವ್ಯ ಹೂಡಲು ಸ್ಥಳಪರಿಶೀಲನೆ ನಡೆಸಿದರು. ಬಳಿಕ ಸಂಗಮಕ್ಕೆ ಭೇಟಿ ನೀಡಿದ ಶಾಸಕ ಡಿ.ಕೆ. ಶಿವಕುಮಾರ್‌ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ವಿಹಾರ ನಡೆಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯ ಎಸ್‌.ರವಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಜಯದೇವ್‌, ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ದಿಲೀಪ್‌ ಸೇರಿದಂತೆ ಯುತ್‌ ಕಾಂಗ್ರೆಸ್‌ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next