Advertisement

ಫೋನ್ ಕದ್ದಾಲಿಕೆಯನ್ನು ಬಿಜೆಪಿ ಮಾಡುವುದಿಲ್ಲ, ಕಾಂಗ್ರೆಸ್ ಮಾಡುತ್ತದೆ : ಅಶ್ವತ್ಥ್ ನಾರಾಯಣ

05:35 PM Jul 20, 2021 | Team Udayavani |

ಬೆಂಗಳೂರು : ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಫೋನ್ ಕದ್ದಾಲಿಕೆ ಆಗಿದೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಆರೊಪ ಮಾಡಿದವರು ಯಾವುದೇ ಸಾಕ್ಷಿ ನೀಡಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ಧವಿದೆ ಎಂದು ಮಂಗಳವಾರ ಡಾ. ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ

Advertisement

ನಮ್ಮ ಪಕ್ಷ ಈ ರೀತಿಯ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಆ ಕೆಲಸ ಮಾಡುತ್ತದೆ.  ಯುಪಿಎ ಸರ್ಕಾರದಲ್ಲಿ ಫೋನ್ ಕದ್ದಾಲಿಕೆಗೆ ಸಾವಿರಾರು ರೂ..ಖರ್ಚು ಮಾಡುತ್ತಿರುವುದಾಗಿ ಅಂದಿನ ಸರ್ಕಾರದಲ್ಲಿ ಮಂತ್ರಿಗಳಾದವರೇ ಹೇಳಿದ್ದರು. ಡಾಟಾ ಲೀಕ್ ಆಗಿದ್ದರೆ ಅದಕ್ಕೆ ಕೇಂದ್ರ ಸರ್ಕಾರ ಹೇಗೆ ಹೊಣೆಯಾಗುತ್ತದೆ ಎಂದು ಕಿಡಿ ಕಾರಿದ್ದಾರೆ.

ವಾಟ್ಸ್ ಆಪ್ ನಿಂದ ಕದ್ದಾಲಿಸಲು ಸಾಧ್ಯವಿಲ್ಲ ಎಂದು ಕಪಿಲ್ ಸಿಬಲ್ ಅವರೇ ಸುಪ್ರೀಂ ಕೋರ್ಟ್ ಗೆ ಹೇಳಿದ್ದಾರೆ. ಪೆಗಾಸಿಸ್ ಸಂಸ್ಥೆ ಹೊರದೇಶಗಳಲ್ಲಿ ಈ ರೀತಿ ಚಟುವಟಿಕೆಗಳನ್ನು ನಡೆಸುತ್ತದೆ.  ದೇಶದ್ರೋಹಿಗಳು ನಮ್ಮ ಸರ್ಕಾರದ ವಿರುದ್ಧ ಅಪ ಪ್ರಚಾರ ಮಾಡುವುದನ್ನು ಖಂಡಿಸುತ್ತೇವೆ ಎಂದು ಡಾ. ಅಶ್ವತ್ಥ್ ನಾರಾಯಣ ಹೇಳಿದರು.

ಪೆಗಾಸಿಸ್ ಮತ್ತು ಅಮ್ನೆಸ್ಟಿ ಸಂಸ್ಥೆಗಳು ನಮ್ಮ ದೇಶದ ಆಂತರಿಕ ವಿಚಾರಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್,  ಎಡ ಪಕ್ಷಗಳು ಸದನ ನಡೆಯದಂತೆ ನಡೆದುಕೊಂಡಿರುವುದು ಖಂಡನೀಯ. ಯುಪಿಎ ಅವಧಿಯಲ್ಲಿ ಪ್ರತಿ ತಿಂಗಳು  9000, ಫೋನ್ ಹಾಗೂ 500 ಇಮೇಲ್ ಕದ್ದಾಲಿಕೆ ನಡೆಸಿರುವ ದಾಖಲೆ ಇದೆ.

ಕೇಂದ್ರ ಸರ್ಕಾರ ಕದ್ದಾಲಿಕೆ ಮಾಡಿರುವ ದಾಖಲೆ ಇಲ್ಲ. ಮಹತ್ವದ ಬಿಲ್ ಗಳು ಬರುತ್ತಿರುವ. ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ನಡೆದಿರುವುದು ಸರಿಯಲ್ಲ. ಕೊವಿಡ್ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಿರುವುದನ್ನು ಕಾಂಗ್ರೆಸ್ ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next