Advertisement

ಡಿ. 13, 14ರಂದು ಜೆಮಿನಿಡ್‌ ಉಲ್ಕಾವೃಷ್ಟಿ: ಗಂಟೆಗೆ 120 ಉಲ್ಕೆ ಗೋಚರ

01:07 AM Dec 12, 2020 | mahesh |

ಉಡುಪಿ: ಜೆಮಿನಿಡ್‌ ಉಲ್ಕಾವೃಷ್ಟಿಯು ಡಿ. 13 ಮತ್ತು 14ರಂದು ಗೋಚರಿಸಲಿದೆ. ಆ ದಿನ ರಾತ್ರಿ 8.30ರ ಹೊತ್ತಿಗೆ ಪೂರ್ವ- ಕ್ಷಿತಿಜದಿಂದ ಮಿಥುನ ರಾಶಿಯು ಉದಯ ವಾಗುತ್ತದೆ. ಇದೇ ದಿಕ್ಕಿನ ಸ್ವಲ್ಪ ಮೇಲ್ಭಾಗದಲ್ಲಿ ಪಂಚಕೋನಾಕೃತಿಯನ್ನು ಗುರುತಿಸಬಹುದು. ಇದೇ ವಿಜಯಸಾರಥಿ ನಕ್ಷತ್ರ ಪುಂಜ. ಈ ನಕ್ಷತ್ರ ಪುಂಜದಲ್ಲಿ ಅತೀ ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರವೇ ಬ್ರಹ್ಮ ಹೃದಯ. ಇದರ ಕೆಳಗಡೆ ಮಿಥುನ ರಾಶಿಯ ಪುನರ್ವಸು ನಕ್ಷತ್ರ (ಕ್ಯಾಸ್ಟರ್‌ ಹಾಗೂ ಪೋಲಕ್ಸ್‌ಗಳ ಜೋಡಿ)ವನ್ನು ಗುರುತಿಸಬಹುದು. ಪುನರ್ವಸುವಿನಲ್ಲಿ ಮೇಲ್ಭಾಗದಲ್ಲಿರುವ ನಕ್ಷತ್ರವು ಕ್ಯಾಸ್ಟರ್‌ ಆಗಿರುತ್ತದೆ.

Advertisement

ಈ ನಕ್ಷತ್ರದ ಮೇಲಿನಿಂದ ಜೆಮಿನಿಡ್‌ ಉಲ್ಕಾ ವೃಷ್ಟಿ ಉದ್ಭವಿಸುವುದನ್ನು ರಾತ್ರಿ 8.30ರಿಂದ ಕಾಣಬಹುದು. ರಾತ್ರಿ 1ರಿಂದ ಮುಂಜಾನೆ 4ರ ವರೆಗೆ ವೀಕ್ಷಣೆಗೆ ಉತ್ತಮ ಸಮಯ. ಈ ಅವಧಿಯಲ್ಲಿ ನಕ್ಷತ್ರ ಪುಂಜವು ಕ್ಷಿತಿಜದಿಂದ ತುಂಬಾ ಮೇಲೆ ಕಾಣುವುದರಿಂದ ಉಲ್ಕೆಗಳನ್ನು ಸ್ಪಷ್ಟವಾಗಿ ವೀಕ್ಷಿಸಿ ಆನಂದಿಸಬಹುದು.

ಮಿಥುನ ರಾಶಿಯಿಂದ ಆರಂಭವಾಗುವ ಜೆಮಿನಿಡ್‌ ಉಲ್ಕಾವೃಷ್ಟಿಯು 3,200 ಫೆಥನ್‌ ಎಂಬ ಒಂದು ಕ್ಷುದ್ರಗ್ರಹದಿಂದ ಉದ್ಭವಿಸುತ್ತದೆ. ಈ ಗ್ರಹದ ಅವಶೇಷಗಳು ತುಂಬಾ ಹೆಚ್ಚಾಗಿರು ವುದರಿಂದ ಜೆಮಿನಿಡ್‌ ಉಲ್ಕಾವೃಷ್ಟಿಯೂ ಒಂದು ಕುತೂಹಲಕಾರಿ ವಿದ್ಯಮಾನವಾಗಿದೆ. ಇದನ್ನು ವೀಕ್ಷಿಸುವವರಿಗೆ ಗಂಟೆಗೆ ಸುಮಾರು 120ರಷ್ಟು ಉಲ್ಕೆಗಳು ಗೋಚರಿಸುತ್ತದೆ. ಪ್ರತಿ 30 ಸೆಕೆಂಡುಗಳಿಗೊಮ್ಮೆ ಕಾಣುವ ಈ ಉಲ್ಕಾಪಾತದ ವಿಸ್ಮಯವನ್ನು ವೀಕ್ಷಿಸಿ ಆನಂದಿಸಬಹುದೆಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next