Advertisement

ಪಥ ಬದಲಿಸಿದ ವಾಯು ಚಂಡಮಾರುತ ಮತ್ತೆ ಅಪ್ಪಳಿಸಲಿದೆ ಗುಜರಾತ್ ನ ಕಛ್ ಕರಾವಳಿಗೆ!

09:35 AM Jun 18, 2019 | Nagendra Trasi |

ಅಹಮದಾಬಾದ್:ಗುರುವಾರದ ಮಧ್ಯಾಹ್ನದ ವೇಳೆಗೆ ಗುಜರಾತ್ ಕರಾವಳಿಗೆ ಅಪ್ಪಳಿಸುತ್ತದೆ ಎಂದು ಹೇಳಲಾಗಿದ್ದ “ವಾಯು” ಚಂಡಮಾರುತವು ಬುಧವಾರ ರಾತ್ರೋರಾತ್ರಿ ಪಥ ಬದಲಿಸಿದ್ದು, ಇದೀಗ ಮತ್ತೆ ಗುಜರಾತ್ ಕರಾವಳಿಯತ್ತ ಮುಖಮಾಡಿರುವ ವಾಯು ಜೂನ್ 17-18ರಂದು ಕಛ್
ಕರಾವಳಿಗೆ ಅಪ್ಪಳಿಸಲಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Advertisement

ಪ್ರಬಲ ವಾಯು ಚಂಡ ಮಾರುತ ದಿಢೀರ್ ದಿಕ್ಕು ಬದಲಿಸಿದ್ದರಿಂದ ಗುಜರಾತ್ ನಿರಾಳವಾಗಿತ್ತು. ಆದರೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆರವುಗೊಳಿಸಿದ ಬೆನ್ನಲ್ಲೇ ವಾಯು ಚಂಡಮಾರುತ ಜೂನ್ 16ರಂದು ಮತ್ತೆ ಅಬ್ಬರಿಸಲಿದ್ದು, 17,18ರಂದು ಕಛ್ ಕರಾವಳಿಗೆ ಅಪ್ಪಳಿಸಲಿದೆ
ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಪಿಟಿಐಗೆ ತಿಳಿಸಿದ್ದಾರೆ.

ಗಿರ್‌-ಸೋಮನಾಥ, ಜುನಾಗಡ, ಪೋರಬಂದರ್‌, ದೇವ ಭೂಮಿ- ದ್ವಾರಕಾ ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಡಿಯು ಚಂಡಮಾರುತದ ಪ್ರಭಾವಕ್ಕೆ ಸಿಲುಕಲಿವೆ. ಅಲ್ಲದೆ, ಈ ಭಾಗಗಳಲ್ಲಿ ಗಂಟೆಗೆ 155- 165 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ,
ಶುಕ್ರವಾರದವರೆಗೂ ಹೈ ಅಲರ್ಟ್‌ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಇದೇ ವೇಳೆ, ಗುಜರಾತ್‌ನ 560 ಗ್ರಾಮಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಸಮುದ್ರಕ್ಕಿಳಿಯಲು ಮುಂದಾಗಿದ್ದ 8 ಸಾವಿರ ಮೀನುಗಾರರು ಕೊನೇ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ರಾಜ್ಯ ಸರ್ಕಾರವು ಚಂಡಮಾರುತದ ಹಿನ್ನೆಲೆಯಲ್ಲಿ
ತಗ್ಗು ಪ್ರದೇಶದ 3 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿತ್ತು.

ಇದೀಗ ಮತ್ತೆ ವಾಯು ಚಂಡಮಾರುತ ಅಪ್ಪಳಿಸಲಿದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಅಧಿಕಾರಿಗಳು
ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next