Advertisement

ತಿರುಪತಿಯಲ್ಲಿ ಮ್ಯಾಂಡಸ್‌ ಹಾವಳಿ; ತಿರುಮಲ ದೇಗುಲದ ಆವರಣ ಜಲಾವೃತ

09:53 PM Dec 10, 2022 | Team Udayavani |

ಚೆನ್ನೈ: ಶುಕ್ರವಾರ ಮಧ್ಯರಾತ್ರಿ ತಮಿಳುನಾಡಿನ ಮಾಮಲ್ಲಪುರಂ ಕರಾವಳಿಯನ್ನು ಹಾದುಹೋದ ಮ್ಯಾಂಡಸ್‌ ಚಂಡಮಾರುತವು 5 ರಾಜ್ಯಗಳನ್ನು ಮಳೆಯಲ್ಲಿ ತೋಯುವಂತೆ ಮಾಡಿದೆ.

Advertisement

ಚಂಡಮಾರುತದ ಎಫೆಕ್ಟ್ ಎಂಬಂತೆ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ ಮಾತ್ರವಲ್ಲದೇ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಶನಿವಾರ ಧಾರಾಕಾರ ಮಳೆಯಾಗಿದೆ.

ಮ್ಯಾಂಡಸ್‌ ಅಬ್ಬರದಿಂದಾಗಿ ಆಂಧ್ರಪ್ರದೇಶದ ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇಗುಲದ ಆವರಣವು ಜಲಾವೃತವಾಗಿದೆ. ಇದರಿಂದಾಗಿ ಶುಕ್ರವಾರ ಮತ್ತು ಶನಿವಾರ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು.

ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಮ್ಸ್‌)ಯ ಕಾರ್ಮಿಕರು ದೇಗುಲದ ಆವರಣದಲ್ಲಿನ ನೀರನ್ನು ಪಂಪ್‌ ಮೂಲಕ ಹೊರಹಾಕಲು ಹರಸಾಹಸ ಪಟ್ಟರು. ಇದೇ ವೇಳೆ, ಘಾಟ್‌ ಪ್ರದೇಶದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯಿದ್ದ ಕಾರಣ, ಜಾಗರೂಕರಾಗಿ ಪ್ರಯಾಣಿಸುವಂತೆ ಭಕ್ತರಿಗೆ ಟಿಟಿಡಿ ಮನವಿ ಮಾಡಿದ್ದೂ ಕಂಡುಬಂತು.

ತಿರುಪತಿಯ ನಾಯ್ಡುಪೇಟಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ರವರೆಗಿನ 24 ಗಂಟೆಗಳ ಅವಧಿಯಲ್ಲಿ 281.5 ಮಿ.ಮೀ. ಮಳೆಯಾಗಿದೆ.

Advertisement

ಬೀಚ್‌ ರ್‍ಯಾಂಪ್‌ಗೆ ಹಾನಿ:
ತಮಿಳುನಾಡಿನ ಮರೀನಾ ಬೀಚ್‌ಗೆ ಬರುವ ದಿವ್ಯಾಂಗರಿಗೆ ನೆರವಾಗುವ ಉದ್ದೇಶದಿಂದ ನ.27ರಂದು ಬೀಚ್‌ ರ್‍ಯಾಂಪ್‌ ಅನ್ನು ಸರ್ಕಾರ ನಿರ್ಮಾಣ ಮಾಡಿತ್ತು. ಆದರೆ, ಶುಕ್ರವಾರ ರಾತ್ರಿ ಮ್ಯಾಂಡಸ್‌ ಅಬ್ಬರದಿಂದ ಗಂಟೆಗೆ 80 ಕಿ.ಮೀ. ವೇಗದಲ್ಲಿ ಬೀಸಿದ ಬಿರುಗಾಳಿಯಿಂದ ಬೀಚ್‌ ರ್‍ಯಾಂಪ್‌ಗೆ ಹಾನಿಯಾಗಿದೆ. ಚೆನ್ನೈನಲ್ಲಿ ಒಂದೇ ದಿನ 115 ಮಿ.ಮೀ. ಮಳೆಯಾಗಿದೆ.

ಚಂಡಮಾರುತದಿಂದ ಮೃತಪಟ್ಟವರು- 4
ಸಾವಿಗೀಡಾದ ಜಾನುವಾರುಗಳು – 100
ಹಾನಿಗೀಡಾದ ಮನೆಗಳು- 181
ಚೆನ್ನೈನಲ್ಲಿ ಧರೆಗುರುಳಿದ ಮರಗಳು- 400

Advertisement

Udayavani is now on Telegram. Click here to join our channel and stay updated with the latest news.

Next