Advertisement

ಸ್ಮಾರ್ಟ್‌ ನಗರದಲ್ಲಿ ಸ್ಮಾರ್ಟ್‌ “ಸೈಕಲ್‌ ಟ್ರ್ಯಾಕ್ ‘! ಸೈಕಲ್‌ ಸ್ನೇಹಿ ಮಂಗಳೂರು

12:10 PM Feb 22, 2022 | Team Udayavani |

ಎಂ.ಜಿ.ರಸ್ತೆ : ನಗರದ ಪ್ರಮುಖ ರಸ್ತೆಗಳಲ್ಲಿನ ವಾಹನದ ಭರಾಟೆಯಲ್ಲಿ ಸೈಕಲ್‌ ಬಳಸುವವರಿಗೆ ಜಾಗವಿಲ್ಲದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ನಗರದ ಎರಡು ಕಡೆಗಳಲ್ಲಿ ಪ್ರತ್ಯೇಕ ಸುಸಜ್ಜಿತ ಸೈಕಲ್‌ ಟ್ರ್ಯಾಕ್ ನಿರ್ಮಾಣಕ್ಕೆ ಸರ್ವ ಸಿದ್ಧತೆ ನಡೆಸಲಾಗುತ್ತಿದೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಡೈರಕ್ಟರೇಟ್‌ ಆಫ್‌ ಅರ್ಬನ್‌ ಲ್ಯಾಂಡ್‌ ಟ್ರಾನ್ಸ್‌ಪೊàರ್ಟ್‌ ವತಿಯಿಂದ ಮಂಗಳೂರಿನಲ್ಲಿ ಸೈಕಲ್‌ ಟ್ರ್ಯಾಕ್ ನಿರ್ಮಾಣವಾಗಲಿದೆ. ನಗರದ ಓಣಿಗಳು ಮತ್ತು ರಸ್ತೆ ಬದಿಗಳಲ್ಲಿ ಟ್ರ್ಯಾಕ್ ಸಾಗಲಿದೆ. ಬೋಳಾರ ಬೋಟ್‌ ರಿಪೇರಿ ಯಾರ್ಡ್‌ನಿಂದ ಟಿಎಂಎ ಪೈ ಕನ್ವೆನ್ಶನ್‌ ಸಭಾಂಗಣದವರೆಗೆ ಹಾಗೂ ಮಾರ್ನಮಿಕಟ್ಟೆಯಿಂದ ಮತ್ತೂಂದು ಸೈಕಲ್‌ ಟ್ರ್ಯಾಕ್ನಿರ್ಮಾಣವಾಗಲಿದೆ.

ಸದ್ಯ ಈ ಎಲ್ಲ ಭಾಗಗಳಲ್ಲಿ ಒಳಚರಂಡಿ, ರಸ್ತೆ ಕಾಮಗಾರಿ ಹಾಗೂ ಗೈಲ್‌ ಗ್ಯಾಸ್‌ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅದಾದ ಕೂಡಲೇ ಸೈಕಲ್‌ ಟ್ರ್ಯಾಕ್ ನಿರ್ಮಾಣ ಆರಂಭವಾಗಲಿದೆ. ಮೂಲಗಳ ಪ್ರಕಾರ ಮಾರ್ಚ್‌ನ ಬಳಿಕ ಸೈಕಲ್‌ ಟ್ರ್ಯಾಕ್ ಯೋಜನೆ ಅನುಷ್ಠಾನಕ್ಕೆ ಬರುವ ನಿರೀಕ್ಷೆಯಿದೆ.

ನಗರದಲ್ಲಿ ಸೈಕಲ್‌ ಟ್ರ್ಯಾಕ್ ನಿರ್ಮಾಣಕ್ಕೆ ಕೆಂಪು, ಹಳದಿ ಎಂಬ 2 ಪ್ರತ್ಯೇಕ ಪಥದ ಯೋಚನೆಯಿದೆ. ಕೆಂಪು ಪಥ ಸುಮಾರು 8 ಕಿ.ಮೀ. ಇರಲಿದ್ದು, ಇದು ನಗರದ ಓಣಿ ರಸ್ತೆಗಳಲ್ಲಿ ಸಾಗಲಿದೆ. ಹಳದಿ ಪಥ ಸುಮಾರು 4 ಕಿ.ಮೀ. ಇರಲಿದೆ. ಇದು ರಸ್ತೆ ಬದಿಯಲ್ಲಿ ಸಾಗಲಿದೆ.

ಇದನ್ನೂ ಓದಿ : ಡೆಹ್ರಾಡೂನ್: ಮದುವೆ ಸಂಭ್ರಮದಿಂದ ವಾಪಸ್ ಆಗುತ್ತಿದ್ದ ವಾಹನ ಕಂದಕಕ್ಕೆ ಉರುಳಿ 11 ಮಂದಿ ಸಾವು

Advertisement

ವಿದ್ಯಾರ್ಥಿ ಸ್ನೇಹಿ ಯೋಜನೆ
ಸ್ಮಾರ್ಟ್‌ಸಿಟಿ ಯೋಜನೆಯ ಮುಖೇನ ನಿರ್ಮಾಣವಾಗುತ್ತಿರುವ ಸೈಕಲ್‌ ಟ್ರ್ಯಾಕ್‌ ವಿದ್ಯಾರ್ಥಿ ಸ್ನೇಹಿ ಪಥ ಪರಿಕಲ್ಪನೆಯಲ್ಲಿ ರೂಪಿಸಲಾಗುತ್ತದೆ. ನಗರ ಶೈಕ್ಷಣಿಕ ರಂಗದಲ್ಲಿ ಹೆಸರುಗಳಿಸಿದ್ದು, ಇಲ್ಲಿ ಬಹುತೇಕ ಕಾಲೇಜು ಗಳಿವೆ. ರಾಜ್ಯ, ಹೊರ ರಾಜ್ಯ, ವಿದೇಶಿ ವಿದ್ಯಾರ್ಥಿ ಗಳು ಇಲ್ಲಿ ಕಲಿಯುತ್ತಿದ್ದಾರೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಸೈಕಲ್‌ ಪಥ ಯೋಜನೆಗೆ ಆದ್ಯತೆ ನೀಡಲಾಗಿದೆ.

ಸೈಕಲ್‌ ಸ್ನೇಹಿ ಮಂಗಳೂರು
ಮಂಗಳೂರು ನಗರವನ್ನು ಸೈಕಲ್‌ ಸ್ನೇಹಿಯಾಗಿಸುವ ಉದ್ದೇಶದಿಂದ ಸೈಕಲ್‌ ಪಾಥ್‌ ನಿರ್ಮಾಣ ಕಾರ್ಯಕ್ಕೆ ಮುಂದಾಗಿ ದ್ದೇವೆ. ಈಗಾಗಲೇ ಇದರ ಬಗ್ಗೆ ಎಲ್ಲ ಸಿದ್ಧತೆ ನಡೆಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆ ಆಗುತ್ತಿರುವ ನಗರದಲ್ಲಿ ಸೈಕಲ್‌ ಪಾಥ್‌ ಮೂಲಕ ಮತ್ತಷ್ಟು ಹೊಸತನ ನೀಡುವ ಆಶಯವಿದೆ. ಕೆಲವೇ ದಿನಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು.
-ಡಿ. ವೇದವ್ಯಾಸ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ

ಉದ್ದೇಶಿತ ಸೈಕಲ್‌ ಟ್ರ್ಯಾಕ್ ರೂಟ್‌
– ಬೋಳಾರ ಬೋಟ್‌ ರಿಪೇರ್‌ ಯಾರ್ಡ್‌-ಕಾಸಿಯ ಸ್ಕೂಲ್‌-ಮಣಿಪಾಲ್‌ ಸ್ಕೂಲ್‌- ರೈಲು ನಿಲ್ದಾಣ-ಪುರಭವನ-ಸೆಂಟ್ರಲ್‌ ಮಾರುಕಟ್ಟೆ-ರಥಬೀದಿ ಹೂವಿನ ಮಾರುಕಟ್ಟೆ -ಬಿಇಎಂ ಶಾಲೆ-ಕೆನರಾ ಶಾಲೆ-ಶಾರದಾ ವಿದ್ಯಾಲಯ-ಕೆನರಾ ಕಾಲೇಜು -ಎಸ್‌ಡಿಎಂ ಕಾಲೇಜು-ಟಿಎಂಎ ಪೈ ಕನ್ವೆಂಷನ್ ಸೆಂಟರ್‌-ಶ್ರೀ ದೇವಿ ಕಾಲೇಜು

– ಮಾರ್ನಮಿಕಟ್ಟೆ ರೈಲ್ವೇ ಓವರ್‌ ಬ್ರಿಡ್ಜ್- ಸೈಂಟ್‌ ಜೋಸೆಫ್‌ ಕಾಲೇಜು-ರೋಶನಿ ನಿಲಯ-ಹೈಲ್ಯಾಂಡ್‌ ಕಾಫಿ ವರ್ಕ್‌-ತೆರಿಗೆ ಕಚೇರಿ.

Advertisement

Udayavani is now on Telegram. Click here to join our channel and stay updated with the latest news.

Next