Advertisement

ಮತದಾನ ಜಾಗೃತಿಗೆ ಸೈಕಲ್‌ ರ್ಯಾಲಿ

05:36 PM Apr 05, 2021 | Team Udayavani |

ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪಚುನಾವಣೆಸ್ವೀಪ್‌ ಕಾರ್ಯಕ್ರಮದಡಿಜಿಲ್ಲಾ ಸ್ವೀಪ್‌ ಸಮಿತಿ ಬೆಳಗಾವಿವತಿಯಿಂದ ಮತದಾರರಿಗೆ ಮತದಾನದ ಜಾಗೃತಿ ಕುರಿತು ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಸುಮಾರು 150 ಜನ ಬೆಳಗಾವಿ ಡೈನಾಮಿಕ್‌ ಅಥ್ಲೆಟಿಕ್‌ ಕ್ಲಬ್‌, ಸ್ಕೌಟ್ಸ್‌ ಮತ್ತು ಗೆ„ಡ್ಸ್‌ ಕಲ್ಲೇಹೋಳ, ಜಿಲ್ಲಾ ಕರಾಟೆ ಕ್ಲಬ್‌, ಜಿಲ್ಲಾ ಸೈಕ್ಲಿಂಗ್‌ಅಸೋಸಿಯೆಶನ್‌ ಹಾಗೂಕಾಲೇಜು ವಿದ್ಯಾರ್ಥಿಗಳಿಂದ ಸೈಕಲ್‌ ರ್ಯಾಲಿ ರವಿವಾರ ನಡೆಯಿತು.

Advertisement

ಬೆಳಗಾವಿ ಜಿಲ್ಲಾ ಪಂಚಾಯತ್‌ ಮುಖ್ಯ ಲೆಕ್ಕಾಧಿಕಾರಿಗಳಾದ ಪಿ.ಬಿ. ದುಡಗುಂಟಿಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಕೊಳೇಕರ, ತಾಪಂಇಒ ಮಲ್ಲಿಕಾರ್ಜುನ ಕಲಾದಗಿ, ಜಿಲ್ಲಾ ಸ್ವೀಪ್‌ ಐಕಾನ್‌ಗಳಾದರಾಘವೇಂದ್ರ ಅನ್ವೇಕರ್‌, ರೋಹನ್‌ ಕೋಕನೆ ಚಾಲನೆ ನೀಡಿದರು.

ನಗರದ ಚನ್ನಮ್ಮ ವೃತ್ತದಿಂದ ರ್ಯಾಲಿಪ್ರಾರಂಭವಾಗಿ ಬೋಗಾರವೇಸ್‌ರಸ್ತೆ ಮೂಲಕ ಸಂಚರಿಸಿ ಬಸವೇಶ್ವರವೃತ್ತ (ಗೋವಾವೇಸ್‌) ದಲ್ಲಿ ಅಂತ್ಯಗೊಂಡಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್‌ಸಮಿತಿ ತಂಡದ ರವಿ ಭಜಂತ್ರಿ, ಪಿ.ಪಿದೇಶಪಾಂಡೆ, ಐ.ಡಿ. ಹಿರೇಮಠ, ಎ.ಪಿ. ಬಸನಾಳ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಿಬ್ಬಂದಿಹಾಗೂ ಸೈಕ್ಲಿಂಗ್‌ ಕೋಚ್‌ ಎಂ.ಪಿ. ಮರನೂರ ಇದ್ದರು.

ಮತದಾನ ಜಾಗೃತಿ ಜಾಥಾ :

Advertisement

ಮೂಡಲಗಿ: ಪ್ರಜಾಪ್ರಭುತ್ವ ಭದ್ರಪಡಿಸಲು ನನ್ನ ಮತ ನನ್ನ ಹಕ್ಕಾಗಿದೆ ಎಂದು ತಾ.ಪಂ ಇಒ ಮತ್ತು ತಾಲೂಕಾ ಸ್ವಿಪ್‌ ಸಮಿತಿಯ ಪ್ರಕಾಶ ವಡ್ಡರ ಹೇಳಿದರು.

ಅವರು ಸಮೀಪದ ಹಳ್ಳೂರ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಪ್ರಯುಕ್ತ ಸ್ವೀಪ್‌ ಸಮಿತಿಯಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿಮಾತನಾಡಿದರು. ಪ್ರತಿಯೊಬ್ಬರು ತಮ್ಮ ಮತದಾನದ ಕುರಿತು ಅರಿವು ಹಾಗೂ ಅದರಮಹತ್ವ ತಿಳಿದಿರಬೇಕು. ಈಗ ವಿದ್ಯುನ್ಮಾನಮತಯಂತ್ರದಲ್ಲಿ ಮತ ಚಲಾಯಿಸುವುದರಿಂದ ಅದರ ಬಗ್ಗೆ ಸಂಪೂರ್ಣವಾದ ಜ್ಞಾನಹೊಂದಿರಬೇಕು. ಅರ್ಹ ಅಭ್ಯರ್ಥಿಗೆ ತಮ್ಮ ಅಮೂಲ್ಯ ಮತ ಚಾಲಾಯಿಸಿ ಉತ್ತಮ ಆಡಳಿತ ತಮ್ಮದಾಗಿಸಿಕೊಳ್ಳಿ ಎಂದು ನುಡಿದರು.

ತಾಪಂ ಸಹಾಯಕ ನಿರ್ದೇಶಕ ಎಸ್‌.ಎಸ್‌ ರೊಡ್ಡನವರ ಮಾತನಾಡಿ, ಜಾಗೃತಿ ಜಾಥಾ,ಅಣಕು ಮತ ಚಲಾವಣೆ, ಭಿತ್ತಿ ಪತ್ರಗಳುಹಾಗೂ ಸಮೂಹ ಮಾಧ್ಯಮ, ಮೊಬೈಲ್‌ ಗಳ ಮೂಲಕ ವ್ಯಾಪಕ ಪ್ರಚಾರ ನೀಡುತ್ತಿದೆ. ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ತಮ್ಮ ಶ್ರೇಷ್ಠವಾದ ಮತವನ್ನು ಚಲಾಯಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಡಿಒ ಹನಮಂತ ತಾಳಿಕೋಟಿ,ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಹಾಗೂ ಗ್ರಾ.ಪಂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next