Advertisement

ಪೊಲೀಸರ ಆತ್ಮಸ್ಥೈರ್ಯ ಹೆಚ್ಚಿಸಲು ಸೈಕಲ್‌ ಜಾಥಾ

12:05 PM Jul 24, 2017 | |

ಮೈಸೂರು: ಇತ್ತೀಚಿಗೆ ಪೊಲೀಸ್‌ ಇಲಾಖೆಯಲ್ಲಿ ನಡೆದ ಕೆಲವೊಂದು ಅಹಿತಕರ ಘಟನೆಗಳ ಹಿನ್ನೆಲೆ ಇಲಾಖೆ ಸಿಬ್ಬಂದಿಯಲ್ಲಿ ವಿಶ್ವಾಸ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸಲು ರಾಜ್ಯಮಟ್ಟದ ಸೈಕಲ್‌ ಜಾಥಾ ನಡೆಸಲಾಗಿದೆ ಎಂದು ಕೆಎಸ್‌ಆರ್‌ಪಿ ಮೀಸಲುಪಡೆ ಎಡಿಜಿಪಿ ಭಾಸ್ಕರ್‌ ರಾವ್‌ ಹೇಳಿದರು.

Advertisement

ಜನಸ್ನೇಹಿ ಪೊಲೀಸ್‌ ಹಾಗೂ ಸ್ವತ್ಛ ಭಾರತ ಅಭಿಯಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ದರ್ಶನ ಸೈಕಲ್‌ ಜಾಥಾ ಭಾನುವಾರ ನಗರಕ್ಕಾಗಮಿಸಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಕೆಲವು ದಿನಗಳ ಹಿಂದೆ ಇಲಾಖೆಯಲ್ಲಿ ನಡೆದ ಆತ್ಮಹತ್ಯೆ, ರಾಜೀನಾಮೆ, ಅಕಾಲಿಕ ಮರಣ ಸೇರಿದಂತೆ ಕೆಲವೊಂದು ಅಹಿತಕರ ಘಟನೆಗಳು ನಡೆಯುತ್ತಿದ್ದವು. ಹೀಗಾಗಿ ಇವುಗಳನ್ನು ತಡೆಯುವ ಜತೆಗೆ ಇಲಾಖೆ ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿ ವಿಶ್ವಾಸವನ್ನು ಮೂಡಿಸಲು ಮೊದಲ ಬಾರಿಗೆ ರಾಜ್ಯಮಟ್ಟದ ಸೈಕಲ್‌ ಜಾಥಾ ನಡೆಸಲಾಗಿದೆ ಎಂದರು.

ಇದಕ್ಕೂ ಮುನ್ನ ನಗರಕ್ಕಾಗಮಿಸಿದ ಕರ್ನಾಟಕ ದರ್ಶನ ಸೈಕಲ್‌ ಜಾಥಾಕ್ಕೆ ನಗರದ ಕೆಎಸ್‌ಆರ್‌ಪಿ ಮೈದಾನದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಸೈಕಲ್‌ ಜಾಥಾ ತಳಿರು-ತೋರಣಗಳಿಂದ ಸಿಂಗರಿಸಲಾಗಿದ್ದ ಕೆಎಸ್‌ಆರ್‌ಪಿ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಮಕ್ಕಳು ಪುಷ್ಪವೃಷ್ಠಿ ಸಲ್ಲಿಸಿದರೆ, ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಸ್ಕರ್‌ರಾವ್‌ ಮಾತನಾಡಿ, ಕರ್ನಾಟಕ ದರ್ಶನ ಸೈಕಲ್‌ ಜಾಥಾದ ಉದ್ದೇಶ, ಅನುಭವವನ್ನು ಹಂಚಿಕೊಂಡರು. ಈ ವೇಳೆ ಕೆಎಸ್‌ಆರ್‌ಪಿ ಡಿವೈಎಸ್‌ಪಿ ಅಯ್ಯಪ್ಪ, ಕಮಾಂಡೆಂಟ್‌ ಚರಣ್‌ ರೆಡ್ಡಿ, ಕ್ರೀಡಾಧಿಕಾರಿ ಸಾವಂತ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement

ಪ್ರವಾಸೋದ್ಯಮಕ್ಕೆ ಸಾಥ್‌: ಜು.12ರಂದು ಬೀದರ್‌ನಿಂದ ಬೆಂಗಳೂರಿನವರೆಗೆ ಸೈಕಲ್‌ ಜಾಥಾ ಸಂಚರಿಸಲಿದ್ದು, ಈವರೆಗೂ 1600 ಕಿ.ಮೀ ಕ್ರಮಿಸಲಾಗಿದೆ. ಇದರಲ್ಲಿ ರಾಜ್ಯದ ಪ್ರತಿ ಕೆಎಸ್‌ಆರ್‌ಪಿ ಬೆಟಾಲಿಯನ್‌ಗಳಿಂದ ತಲಾ 4 ಮಂದಿಯಂತೆ ಒಟ್ಟು 56 ಮಂದಿ ಭಾಗವಹಿಸಿದ್ದಾರೆ.

ಸೈಕಲ್‌ ಜಾಥಾದ ಮೂಲಕ ಇಲಾಖೆ ಸಿಬ್ಬಂದಿಗೆ ನಮ್ಮ ಶಕ್ತಿ ಏನೆಂಬುದನ್ನು ತಿಳಿಸಿ, ಅವರಲ್ಲಿ ಧೈರ್ಯ, ವಿಶ್ವಾಸ ಮೂಡಲಾಗಿದೆ. ಇದಲ್ಲದೆ ಜಾಥಾದ ಉದ್ದಕ್ಕೂ ರಾಷ್ಟ್ರೀಯ ಐಕ್ಯತೆ, ಸ್ವತ್ಛತೆಯ ಅರಿವು ಮೂಡಿಸುವುದರೊಂದಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸಿ ಬೆಳೆಸಲು ಬಿಜಾಪುರ, ಹಂಪಿ, ಮೂಡಬಿದಿರೆ, ಕಾರ್ಕಳ, ಬೇಲೂರು, ಮೈಸೂರನ್ನು ಸಂದರ್ಶಿಸಲಾಗಿದೆ ಎಂದು ಭಾಸ್ಕರ್‌ ರಾವ್‌ ಮಾಹಿತಿ ನೀಡಿದರು.

ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ಮಾಡುವಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿ ಕೊಡುಗೆ ಹೆಚ್ಚಾಗಿದೆ. ಸಿಬ್ಬಂದಿ ತಮ್ಮ ಇಲಾಖೆ, ವೃತಿ ಬಗ್ಗೆ ಕೀಳರಿಮೆ ಹೊಂದದೆ ಸಾರ್ವಜನಿಕರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪ$ಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.
-ಭಾಸ್ಕರ್‌ ರಾವ್‌, ಎಡಿಜಿಪಿ.

Advertisement

Udayavani is now on Telegram. Click here to join our channel and stay updated with the latest news.

Next