Advertisement
ಇಷ್ಟ ಪಡಲು ಕಾರಣವೇನು?ಹೆಚ್ಚುತ್ತಿರುವ ವಾಹನ ದಟ್ಟನೆ, ಹೆಚ್ಚುತ್ತಿರುವ ಡೀಸೆಲ್-ಪೆಟ್ರೋಲ್ ಬೆಲೆ, ಆರೋಗ್ಯಕ್ಕೆ ಒಳ್ಳೇದು, ಫಿಟ್ನೆಸ್ ಕಾರಣಕ್ಕೆ, ರಜಾ ದಿನಗಳಲ್ಲಿ ಒಂದಷ್ಟು ಜಾಲಿ ರೈಡ್ ಇತ್ಯಾದಿಗಳ ಕಾರಣಕ್ಕೆ ಸೈಕಲ್‌ಗಳನ್ನು ಜನ ಮೆಚ್ಚುತ್ತಿದ್ದಾರೆ. ಕಚೇರಿಗೆ ತೆರಳಲೂ ಸೈಕಲ್ ಬಳಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಇರುವವರೂ ಇದನ್ನೇ ನೆಚ್ಚಿಕೊಂಡಿದ್ದಾರೆ.
ನಗರಗಳಲ್ಲಿಂದು ಸೈಕಲ್ ಕ್ಲಬ್‌ಗಳು ಹಲವಾರಿವೆ. ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ವಿವಿಧ ಸೈಕ್ಲಿಂಗ್ ಕ್ಲಬ್‌ಗಳಿದ್ದರೆ, ಮಂಗಳೂರು ನಗರದಲ್ಲೇ ಮೂರ್‍ನಾಲ್ಕು ಅತಿ ದೊಡ್ಡ ಸೈಕ್ಲಿಂಗ್ ಕ್ಲಬ್‌ಗಳಿವೆ. ಇವುಗಳ ಮೂಲಕ ಸೈಕಲ್ ಸವಾರಿಗಳನ್ನು ಆಯೋಜಿಸಲಾಗುತ್ತಿದ್ದು, ಯುವಕರು ಹೆಚ್ಚು ಹೆಚ್ಚು ಉಮೇದಿನಿಂದ ಇದಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಜತೆಗೆ ವಾರಾಂತ್ಯ ಜಾಲಿ ರೈಡ್‌ಗಳು, ಕಿಲೋಮೀಟರ್ ಗಟ್ಟಲೆ ಪ್ರವಾಸಗಳೂ ಆಯೋಜನೆಯಾಗುತ್ತಿವೆ. ವಿದೇಶಿ ಸೈಕಲ್‌ಗಳು ಅಚ್ಚುಮೆಚ್ಚು
ಕಡಿಮೆ ಭಾರ, ವೇಗದ ಸವಾರಿ, ನಿರ್ವಹಣೆ ಕಡಿಮೆ, ಉತ್ತಮ ಗುಣಮಟ್ಟದ ಕಾರಣಕ್ಕೆ ಸೈಕಲ್ ಉತ್ಸಾಹಿಗಳು ವಿದೇಶಿ ಬ್ರ್ಯಾಂಡ್ ಗಳ ಸೈಕಲ್‌ಗಳನ್ನೇ ಖರೀದಿಸುತ್ತಿದ್ದಾರೆ. ಅದರಲ್ಲೂ ಜೈಂಟ್, ಮೆರಿಡಾ, ಪಾಲಿಗಾನ್, ಬೆಗರ್‌ಮೌಂಟ್, ಬಿಯಾಂಚಿ, ಸ್ಕಾಟ್, ಶ್ವಿನ್, ಕೆನಾಂಡೆಲ್ ಇತ್ಯಾದಿ ಕಂಪನಿಗಳ ತರಹೇವಾರಿ ಸೈಕಲ್ ಗಳಿದ್ದು, ಅವುಗಳ ಖರೀದಿ ವಿಪರೀತವಾಗಿ ಹೆಚ್ಚುತ್ತಿದೆ.
Related Articles
ಸೈಕಲ್ ಖರೀದಿಗೆ ಹೊರಟರೆ ವೈವಿಧ್ಯಮಯ ರೀತಿಯ, ಮಾದರಿಯ ಸೈಕಲ್‌ಗಳು ಮಾರುಕಟ್ಟೆಯಲ್ಲಿವೆ. ಕ್ರೀಡಾ ಉದ್ದೇಶಕ್ಕಾಗಿ ಖರೀದಿ ಮಾಡುವುದಾದರೆ ರೋಡ್ ಬೈಕ್, ಕ್ಲಿಷ್ಟಕರ, ರಸ್ತೆ ಇಲ್ಲದ ಕಡೆಗಳಲ್ಲಿ ಚಾಲನೆಗೆ ಎಂಟಿಬಿ, ಸುಲಲಿತ ಪೇಟೆ ಸವಾರಿಗೆ, ನಿತ್ಯದ ಓಡಾಟ, ವಾರಾಂತ್ಯದ ತಿರುಗಾಟಕ್ಕೆ ಹೈಬ್ರಿಡ್ ಬೈಕ್ ಹೀಗೆ ಮಾದರಿಗಳಿವೆ. ಮಡಚಿಡಬಹುದಾದ ಸೈಕಲ್‌ಗಳೂ ಇವೆ.
Advertisement
ರೋಡ್ ಬೈಕ್ಅತಿ ಹಗುರ, ಈ ಸೈಕಲ್ ನ ಟೈರು ಸಪುರವಾಗಿರುತ್ತದೆ. ಮುಂದೆ ಬಾಗಿಕೊಂಡಂತೆ ಇರುವ ಹ್ಯಾಂಡಲ್ ಬಾರ್ ಇದ್ದು, ವೇಗದ ಸವಾರಿಗೆ ಉಪಯುಕ್ತ. ಟಾರು ರಸ್ತೆಗಳೇ ಇದಕ್ಕೆ ಬೇಕಿದ್ದು, ಕ್ರೀಡಾ ಚಟುವಟಿಕೆ ಆಸಕ್ತರೇ ಇದನ್ನು ಹೆಚ್ಚಾಗಿ ಖರೀದಿಸುತ್ತಾರೆ. ನೇರ, ಸಪಾಟಾದ ರಸ್ತೆಗೆ ಬೇಕಾದಂತೆ ಇದಕ್ಕೆ ಗಿಯರ್ ಅನುಪಾತವಿರುತ್ತದೆ. ಮೌಂಟನ್ ಟೆರೈನ್ ಬೈಕ್
ರೋಡ್ ಬೈಕ್‌ಗಳಿಗಿಂತ ತುಸು ಭಾರ. ಶಾಕ್ ಅಬ್ಸಾರ್ಬರ್ ವ್ಯವಸ್ಥೆಗಳು ಇದರಲ್ಲಿರುತ್ತವೆ. ಕಠಿಣ ಹಾದಿಯ ಚಾಲನೆಗೆ ಉಪಯುಕ್ತ. ಹೊಂಡ ಗುಂಡಿಯ ರಸ್ತೆಯಲ್ಲಿ ಸವಾರಿ ಮಾಡುವ ಹಲವು ಮಂದಿ ಇದನ್ನೇ ಆಯ್ಕೆ ಮಾಡುತ್ತಾರೆ. ಹೆಸರೇ ಹೇಳುವಂತೆ ಗುಡ್ಡಗಾಡು ಪ್ರದೇಶಗಳಲ್ಲಿ ಸರಾಗವಾಗಿ ಸಾಗಲು ಮೌಂಟನ್‌ಬೈಕ್ ಗಳಿಗೆ ಸಾಧ್ಯ. ಬೈಕ್ ಗಳು. ಎಂಟಿಬಿಯಲ್ಲೂ ಅನೇಕ ವ್ಯಾಸದ ಟೈರ್‌ಗಳನ್ನು ಹಾಕಲು ಸಾಧ್ಯವಿದೆ. ಏರು ಹಾದಿಯಲ್ಲಿ ಇವುಗಳ ಚಾಲನೆಗೆ ಉತ್ತಮ ಗಿಯರ್ ಅನುಪಾತವಿರುತ್ತದೆ. ಹೈಬ್ರಿಡ್ ಬೈಕ್
ಎಂಟಿಬಿ ಮತ್ತು ರೋಡ್ ಬೈಕ್ ಇವೆರಡರ ಗುಣಲಕ್ಷಣಗಳನ್ನು ಹೊಂದಿದ ಸೈಕಲ್. ಇದರಲ್ಲಿ ಗೇರ್ ಅನುಪಾತ ಎಂಟಿಬಿಯಷ್ಟು ಸುಲಭವೂ ಅಲ್ಲ, ರೋಡ್ ಬೈಕ್‌ಗಳಷ್ಟು ಕಷ್ಟವೂ ಅಲ್ಲ, ಟೈಯರೂ ಕೂಡಾ ರೋಡ್ ಬೈಕಿನಷ್ಟು ಸಪೂರವಲ್ಲ, ಹಾಗೆಂದು ಎಂಟಿಬಿಯಷ್ಟು ಅಗಲವಲ್ಲ, ಆದರೆ ದೈನಂದಿನ ಬಳಕೆಗೆ ಹೆಚ್ಚು ಯೋಗ್ಯ. ಸಾಮಾನ್ಯ ಗುಡ್ಡಗಾಡು ರಸ್ತೆಗಳಲ್ಲಿ ಓಡಿಸಬಹುದು. ಆದರೆ ಸಪಾಟು ರಸ್ತೆಗಳಲ್ಲಿ ಕಾಲುಗಳ ಶಕ್ತಿಗನುಗುಣವಾಗಿ ವೇಗವಾಗಿಯೂ ಸಾಗಬಹುದು. ಟ್ರೆಂಡ್ ಆಗುತ್ತಿದೆ ಸೈಕಲ್ ಸವಾರಿ
ಕಾಲ ಚಕ್ರ ಒಂದು ಸುತ್ತು ತಿರುಗಿ ನಿಂತಿದೆ. ಸೈಕಲ್ ಮಕ್ಕಳ ಬಾಲ್ಯದ ಬೇಡಿಕೆ ಮಾತ್ರ ಎಂದಿದ್ದದ್ದು, ಯುವಕರು, ಹಿರಿಯರನ್ನೂ ಸೆಳೆಯುತ್ತಿದೆ. ಆರೋಗ್ಯ, ನಗರ ಸಂಚಾರ ಸುಲಭ ಎಂಬ ಕಾರಣಕ್ಕೆ ಜನರು ಸೈಕಲನ್ನೇ ನೆಚ್ಚಿಕೊಳ್ಳುತ್ತಿದ್ದು ಹಿಂದೆಂದಿಗಿಂತಲೂ ಹೆಚ್ಚು ಮಂದಿ ಸೈಕಲ್ ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ. ವಾರಾಂತ್ಯದ ಖುಷಿಗೂ ಇದು ಕಾರಣವಾಗಿದೆ. ಯುವ ಜನತೆಯಂತೂ ಅತ್ಯಾಧುನಿಕ ಸೈಕಲ್‌ಗಳ ಹಿಂದೆ ಬಿದ್ದಿದ್ದಾರೆ. ಮಾಡುತ್ತಿದ್ದಾರೆ. ಟ್ರಾಫಿಕ್, ಆರೋಗ್ಯ ಎಲಕ್ಲೂ ಸೈಕಲ್ ಬೆಸ್ಟ್
ಹೆಚ್ಚುತ್ತಿರುವ ಟ್ರಾಫಿಕ್‌ನಿಂದ ಮುಕ್ತಿ ಪಡೆದುಕೊಳ್ಳಲು ಸೈಕಲ್ ಸವಾರಿ ಉತ್ತಮ ಆಯ್ಕೆ . ಇದರೊಂದಿಗೆ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಕೆಲವು ಆರೋಗ್ಯ ಸಂಬಂಧಿ ಖಾಯಿಲೆಗಳಿಂದ ಪಾರಾಗಲು ದೇಹವನ್ನು ಸುಸ್ಥಿತಿಯಲ್ಲಿಡಲು ಸೈಕಲ್ ಸವಾರಿ ಉತ್ತಮ ಆಯ್ಕೆ ಎಂದು ಸೈಕಲ್ ಸವಾರ ಅಜಿತ್ ಹೇಳುತ್ತಾರೆ. ಪ್ರಜ್ಞಾ ಶೆಟ್ಟಿ