Advertisement

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ 2021ರಲ್ಲಿ ಸೈಬರ್‌ ಕ್ರೈಂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ. ಆದರೆ, ದಾಖಲಾಗಿರುವ ಪ್ರಕರಣಗಳ ಪೈಕಿ ಶೇ. 50ರಷ್ಟು ಇತ್ಯರ್ಥ ಆಗಿಲ್ಲ.

Advertisement

ಹೌದು, ನಗರದ ಒಂಭತ್ತು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗಳಲ್ಲಿ ಕಳೆದ ವರ್ಷ 6 ಸಾವಿರ ಪ್ರಕರಣಗಳು ದಾಖಲಾಗಿದ್ದು, 493 ಪ್ರಕರಣಗಳ ತನಿಖೆ ಮುಕ್ತಾಯಗೊಳಿಸಿರುವ ಪೊಲೀಸರು,ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಇನ್ನುಳಿದ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದ್ದು, ಕೆಲ ಪ್ರಕರಣಗಳ ಆರೋಪಿಗಳು ನೆರೆ ರಾಜ್ಯ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವುದರಿಂದ ಅವರಪತ್ತೆಯಾಗಿಲ್ಲ. ಹೀಗಾಗಿ ಉಳಿದ ಪ್ರಕರಣಗಳ ತನಿಖೆ ಆಮೆ ಗತಿಯಲ್ಲಿ ಸಾಗಿದೆ.

ಪ್ರಸ್ತುತ ದಾಖಲಾಗಿರುವ ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂಗಳಲ್ಲಿ ಪರಿಚಯಿಸಿಕೊಂಡು ವಂಚನೆ, ಒಟಿಪಿ,ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌, ಬ್ಯಾಂಕ್‌ ಅಧಿಕಾರಿಗಳ ಸೋಗಿನಲ್ಲಿ, ಓಎಲ್‌ಎಕ್ಸ್‌ ಮೂಲಕ ವಂಚನೆ,ಮ್ಯಾಟ್ರಿಮೋನಿಯಲ್‌, ಮನೆ ಬಾಡಿಗೆ ಪಡೆಯುವ ಹೆಸರಿನಲ್ಲಿ, ಹೀಗೆ ಹೊಸ-ಹೊಸ ಮಾದರಿಯಲ್ಲಿ ಸೈಬರ್‌ ಕ್ರೈಂ ವಂಚನೆಗಳು ಬೆಳಕಿಗೆ ಬರುತ್ತಿವೆ. ಆದರೆ, ನೆರೆ ರಾಜ್ಯ ಅಥವಾ ವಿದೇಶಗಳಲ್ಲಿ ಕುಳಿತು ಕೃತ್ಯಎಸಗುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಇತ್ತೀಚೆಗೆ ಒಎಲ್‌ಎಕ್ಸ್‌ ಮತ್ತು ಆನ್‌ಲೈನ್‌ ಮೂಲಕಮನೆ ಬಾಡಿಗೆ ಪಡೆಯುವ ಸೋಗಿನಲ್ಲಿ ಕ್ಯೂಆರ್‌ಕೋಡ್‌ ಕಳುಹಿಸಿ ಹಣ ಸುಲಿಗೆ ಮಾಡುತ್ತಿರುವಪ್ರಕರಣಗಳೇ ಹೆಚ್ಚಾಗುತ್ತಿವೆ. ಅವುಗಳ ಬೆನತ್ತಿದ್ದಾಗ ನೆರೆ ರಾಜ್ಯದವರು ಗೂಗಲ್‌ ಮೂಲಕ ಭಾಷೆ ಅನುವಾದ ಮಾಡಿ ವಂಚಿಸುತ್ತಿದ್ದಾರೆ ಎಂಬುದು ಪತ್ತೆಯಾಗಿದೆ ಎಂದು ಸೈಬರ್‌ ಕ್ರೈಂ ಪೊಲೀಸರು ಮಾಹಿತಿ ನೀಡಿದರು.

ಬೇಗ ಪತ್ತೆ ಕಷ್ಟ: ಇತ್ತೀಚಿನ ಸೈಬರ್‌ ಕ್ರೈಂ ಪ್ರಕರಣಗಳ ಪತ್ತೆಗೆ ಸಾಕಷ್ಟು ಸಮಯಬೇಕಾಗುತ್ತದೆ. ಎಷ್ಟೇ ಆಧುನಿಕ ತಂತ್ರಜ್ಞಾನಬಳಸಿದರೂ ಆರೋಪಿಗಳ ಸುಳಿವು ಸಿಗುವುದಿಲ್ಲ. ದೇಶದ ಗಡಿ ಭಾಗಗಳಲ್ಲಿ ಕುಳಿತು ಕೃತ್ಯ ಎಸಗುತ್ತಿದ್ದಾರೆ. ಅಲ್ಲದೆ, ಪದೇ ಪದೆ ಸ್ಥಳ, ಐಪಿವಿಳಾಸ ಬದಲಾವಣೆ ಮಾಡುವುದು ಸಹಆರೋಪಿಗಳ ಪತ್ತೆ ಸಾಧ್ಯವಾಗುತ್ತಿಲ್ಲ. ಇದು ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸೈಬರ್‌ ಕ್ರೈಂ ಪೊಲೀಸರು.

Advertisement

3-4 ಸಾವಿರ ಪ್ರಕರಣಗಳು! : ಸೈಬರ್‌ ಸಹಾಯವಾಣಿಗೆ 2021ನೇ ಸಾಲಿನಲ್ಲಿ ಅಂದಾಜು 3-4 ಸಾವಿರ ದೂರುಗಳು ಬಂದಿವೆ.ಎಲ್ಲವನ್ನು ಇತ್ಯರ್ಥ ಪಡಿಸಲಾಗಿದೆ. ಈ ಮೂಲಕಹಂತ-ಹಂತವಾಗಿ ಹೊಸ-ಹೊಸ ತಂತ್ರಜ್ಞಾನವನ್ನುಅಳವಡಿಸಿಕೊಂಡು ಎಲ್ಲ ಮಾದರಿಯ ಸೈಬರ್‌ ಕ್ರೈಂಗಳನ್ನು ನಿಯಂತ್ರಿಸಲು ಪ್ರಯತ್ನಿಸ ಲಾಗಿದೆ ಎಂದುಅಧಿಕಾರಿಗಳು ಮಾಹಿತಿ ನೀಡಿದರು.

ಸಿಐಆರ್‌ ನೆರವು :

ಒಂದು ವರ್ಷದಿಂದ ಸೈಬರ್‌ ಕ್ರೈಂ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಸೈಬರ್‌ ಇನ್ಫಾರ್‌ಮೆಷನ್‌ ರಿಪೋರ್ಟ್‌( ಸಿಐಆರ್‌). ಯಾವುದೇ ವಂಚನೆ ಗೊತ್ತಾಗುತ್ತಿದ್ದಂತೆಕೂಡಲೇ 112ಗೆ ಕರೆ ಮಾಡಿ, ಸೈಬರ್‌ ಸಹಾಯವಾಣಿ ಸಿಬ್ಬಂದಿಗೆ ಮಾಹಿತಿ ನೀಡಿದಾಗ, ವಂಚಕನ ಬ್ಯಾಂಕ್‌ ಖಾತೆಯನ್ನು ಕ್ಷಣಾರ್ಥದಲ್ಲೇ ಬ್ಲಾಕ್‌ ಮಾಡಲಾಗುತ್ತದೆ. ನಂತರ ವಂಚನೆಗೊಳಗಾದವರಿಗೆ ಹಣಹಿಂದಿರುಗಿಸಲಾಗುತ್ತದೆ. ಇದು ಸೈಬರ್‌ ಕ್ರೈಂ ಪ್ರಕರಣಗಳು ಕಡಿಮೆಯಾಗಲು ಸಹಾಯವಾಗುತ್ತಿದೆ ಎನ್ನುತ್ತಾರೆ ಸೈಬರ್‌ ಸಹಾಯವಾಣಿಯ ಅಧಿಕಾರಿಗಳು.

2 ವರ್ಷಗಳಿಂದ ಸೈಬರ್‌ ಕ್ರೈಂ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ.ಸಾರ್ವಜನಿಕ ಸಂಪರ್ಕ ದಿವಸ್‌, ಫೇಸ್‌ಬುಕ್‌, ಟ್ವಿಟರ್‌ ಸಂವಾದದ ಮೂಲಕ ಎಚ್ಚರಿಕೆ ನೀಡಲಾಗಿದೆ. ಸಿಐಆರ್‌ ಮೂಲಕವೂ ಪ್ರಕರಣಗಳ ಇತ್ಯರ್ಥಪಡಿಸಲಾಗುತ್ತಿದೆ. ಬ್ಯಾಂಕ್‌ ಅಧಿಕಾರಿಗಳ ಜತೆಯೂ ಆಗಾಗ್ಗೆ ಸಭೆ ನಡೆಸಿ ವಂಚನೆಗಳಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next