ಬರ್ಮಿಂಗಂ: ಕಾಮನ್ವೆಲ್ತ್ ಕೂಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಚಿನ್ನದ ಬೇಟೆ ಮುಂದುವರಿದಿದೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ನೀತು ಘಂಘಾಸ್ ಚಿನ್ನದ ಪದಕ ಗೆದ್ದರೆ, 51 ಕೆಜಿ ಪುರುಷರ ಬಾಕ್ಸಿಂಗ್ ನಲ್ಲಿ ಅಮಿತ್ ಪಂಗಾಲ್ ಬಂಗಾರದ ಪದಕಕ್ಕೆ ಕೊರಳೊಡ್ಡಿದರು.
ಇಂದು ನಡೆದ 48-51 ಕೆಜಿ ತೂಕ ವಿಭಾಗದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ನ ಕೀರಾನ್ ಮ್ಯಾಕ್ಡೊನಾಲ್ಡ್ ಅವರನ್ನು 5-0 ಅಂಕಗಳಿಂದ ಸೋಲಿಸಿದ ಅಮಿತ್ ಭಾರತಕ್ಕೆ ಮತ್ತೊದು ಚಿನ್ನದ ಪದಕ ತಂದುಕೊಟ್ಟರು.
ಭಾನುವಾರ ನಡೆದ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ ಇಂಗ್ಲೆಂಡ್‌ನ ಡೆಮಿ-ಜೇಡ್ ರೆಸ್ಟನ್ ಅವರನ್ನು ಸೋಲಿಸಿದ ನಂತರ ಭಾರತದ ನಿತು ಘಂಘಾಸ್ ತನ್ನ ಚೊಚ್ಚಲ ಪ್ರದರ್ಶನದಲ್ಲಿ ಚಿನ್ನದ ಪದಕ ಗೆದ್ದರು.
21 ವರ್ಷದ ನೀತು ಅವರು 48 ಕೆಜಿ ವಿಭಾಗದಲ್ಲಿ 5-0 ಅಂತರದಿಂದ ಜಯ ಸಾಧಿಸಿದರು. ಸೆಮಿಫೈನಲ್ ನಲ್ಲಿ ಕೆನಡಾದ ಪ್ರಿಯಾಂಕಾ ಧಿಲ್ಲೋನ್ ಅವರನ್ನು ಸೋಲಿಸಿದ್ದ ನೀತು ಫೈನಲ್ ಗೇರಿದ್ದರು.
ಇದನ್ನೂ ಓದಿ:ಕಾಮನ್ವೆಲ್ತ್ 2022: ರೋಚಕ ಪಂದ್ಯದಲ್ಲಿ ಗೆದ್ದ ವನಿತಾ ಹಾಕಿ ತಂಡಕ್ಕೆ ಕಂಚಿನ ಪದಕ
ಭಾರತ ಸದ್ಯ 15 ಬಂಗಾರದ ಪದಕ, 11 ಬೆಳ್ಳಿ ಮತ್ತು 17 ಕಂಚಿನ ಪದಕಗಳೊಂದಿಗೆ ಒಟ್ಟು 43 ಪದಕಗಳನ್ನು ಜಯಸಿದೆ.