Advertisement

ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ : 5 “ಗ್ರಾಮ’ಗಳಲ್ಲಿ ಭಾರತೀಯರ ವಾಸ್ತವ್ಯ

11:57 PM Jul 15, 2022 | Team Udayavani |

ಹೊಸದಿಲ್ಲಿ: ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ ವೇಳೆ ಭಾರತದ ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ತಂಡ 5 ಪ್ರತ್ಯೇಕ “ಗೇಮ್ಸ್‌ ವಿಲೇಜ್‌’ಗಳಲ್ಲಿ ತಂಗಲಿದೆ. ಇದನ್ನು ಹೊರತುಪಡಿಸಿ ವನಿತಾ ಕ್ರಿಕೆಟ್‌ ತಂಡಕ್ಕೆ ಬರ್ಮಿಂಗ್‌ಹ್ಯಾಮ್‌ ಸಿಟಿ ಸೆಂಟರ್‌ನಲ್ಲಿ ಬೇರೆಯೇ ವ್ಯವಸ್ಥೆ ಮಾಡಲಾಗಿದೆ.

Advertisement

16 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿರುವ ಭಾರತ, 215 ಕ್ರೀಡಾಳುಗಳ ತಂಡವನ್ನು ಕಳುಹಿಸಿದೆ. ಅಧಿಕಾರಿಗಳೂ ಸೇರಿ ಸದಸ್ಯರ ಸಂಖ್ಯೆ 325ಕ್ಕೆ ಏರಿದೆ.

ಸಾಮಾನ್ಯವಾಗಿ ವಿಶ್ವ ಮಟ್ಟದ ಕ್ರೀಡಾಕೂಟಗಳ ವೇಳೆ ದೇಶವೊಂದರ ಕ್ರೀಡಾಪಟುಗಳ, ಅಧಿಕಾರಿಗಳ ತಂಡಕ್ಕೆ ಒಂದೇ ಕ್ರೀಡಾಗ್ರಾಮದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ ಸಂಘಟನ ಸಮಿತಿ ಈ ನಿಯಮವನ್ನು ಬದಲಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next