Advertisement
ಆದರೆ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಇಲ್ಲಿಯೂ ಕಂಚಿಗೆ ಸಮಾಧಾನಪಡಬೇಕಾಯಿತು. ಅವರು ವನಿತೆಯರ 62 ಕೆಜಿ ಫ್ರೀಸ್ಟೈಲ್‌ನಲಿ ಸ್ಪರ್ಧಿಸಿದ್ದರು. ಪುರುಷರ 86 ಕೆಜಿ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿದ ಸೋಮವೀರ್ ಕೂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.ಇದರೊಂದಿಗೆ ಭಾರತ ಗೋಲ್ಡ್‌ಕೋಸ್ಟ್ ಕುಸ್ತಿಯಲ್ಲಿ ಒಟ್ಟು 12 ಪದಕ ಗೆದ್ದಂತಾಯಿತು (5 ಚಿನ್ನ, 3 ಬೆಳ್ಳಿ, 4 ಕಂಚು). ಇದು ಕಳೆದ ಗ್ಲಾಸೊYà ಗೇಮ್ಸ್‌ಗಿಂತ ಒಂದು ಕಡಿಮೆ ಪದಕದ ಸಾಧನೆಯಾಗಿದೆ. ಆದರೆ ಚಿನ್ನದ ಪದಕಗಳ ಸಂಖ್ಯೆ ಮಾತ್ರ ಗ್ಲಾಸೊYà ಸಾಧನೆಗೆ ಸಮನಾಗಿದೆ.ವಿನೇಶ್, ಸುಮಿತ್ ಪರಾಕ್ರಮ
ವಿನೇಶ್ ಪೋಗಟ್ ಚಿನ್ನದ ಸೆಣಸಾಟದಲ್ಲಿ ಕೆನಡಾದ ಜೆಸ್ಸಿಕಾ ಮೆಕ್‌ಡೊನಾಲ್ಡ್ ಅವರನ್ನು 13-3 ಅಂತರದಿಂದ ನೆಲಕ್ಕೆ ಕೆಡವಿ ಅಧಿಕಾರಯುತವಾಗಿ ಗೆದ್ದು ಬಂದರು. ಇದು ವಿನೇಶ್‌ಗೆ ಒಲಿದ ಸತತ 2ನೇ ಗೇಮ್ಸ್ ಬಂಗಾರ. ಗ್ಲಾಸೊYàದಲ್ಲಿ ಅವರು 48 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರು.
ರಿಯೋ ಸಾಧಕಿ ಸಾಕ್ಷಿ ಮಲಿಕ್ ಮೇಲೆ ವಿಪರೀತ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಗ್ಲಾಸೊYàದಲ್ಲಿ ಬೆಳ್ಳಿ ತಾರೆಯಾಗಿದ್ದ ಸಾಕ್ಷಿ, ಗೋಲ್ಡ್‌ಕೋಸ್ಟ್‌ನಲ್ಲಿ ಗೋಲ್ಡ್ ಗೆಲ್ಲಬಲ್ಲ ಸಾಮರ್ಥ್ಯ ಹೊಂದಿದ್ದರು. ಆದರೆ ಕೊನೆಯಲ್ಲಿ ಕಂಚಿಗೆ ತೃಪ್ತಿಪಡಬೇಕಾಯಿತು.
Related Articles
Advertisement
ಪುರುಷರ 86 ಕೆಜಿ ವಿಭಾಗದ ಪ್ಲೇ-ಆಫ್ ಸ್ಪರ್ಧೆಯಲ್ಲಿ ಅಲೆಕ್ಸಾಂಡರ್ ಮೂರ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದ ಸೋಮವೀರ್ ಕಂಚಿನ ಪದಕ ಒಲಿಸಿಕೊಂಡರು. 1-3 ಹಿನ್ನಡೆ ಬಳಿಕ ತಿರುಗಿ ಬಿದ್ದದ್ದೂ ಸೋಮವೀರ್ ಪರಾಕ್ರಮಕ್ಕೆ ಸಾಕ್ಷಿಯಾಯಿತು. ಭಾರತೀಯನ ಗೆಲುವಿನ ಅಂತರ 7-3.