Advertisement

ಇಂದು ಭಾರತ-ಪಾಕ್‌ ಹಾಕಿ

07:00 AM Apr 07, 2018 | Team Udayavani |

ಗೋಲ್ಡ್‌ಕೋಸ್ಟ್‌: ರಾಜಕೀಯವಾಗಿ ಬಿಗು ಸ್ಥಿತಿಯಲ್ಲೇ ಇರುವ ಭಾರತ-ಪಾಕಿಸ್ಥಾನ ಅಪ ರೂಪಕ್ಕೊಮ್ಮೆ ಕ್ರೀಡೆಯಲ್ಲಿ ಎದುರಾಗುವುದಿದೆ. ಆಗ ಇನ್ನೊಂದು ರೀತಿಯಲ್ಲಿ ಕಾವೇರುತ್ತದೆ. ಶನಿವಾರ ಇಂಥದೇ ವಾತಾವರಣ ನಿರ್ಮಾಣವಾಗಲಿದೆ. ಕಾಮನ್ವೆಲ್ತ್‌ ಗೇಮ್ಸ್‌ ಹಾಕಿ ಯಲ್ಲಿ ಭಾರತ- ಪಾಕಿಸ್ಥಾನ ಪರಸ್ಪರ ಎದುರಾಗಲಿವೆ.

Advertisement

ಕಳೆದೆರಡು ಬಾರಿಯ ಬೆಳ್ಳಿ ವಿಜೇತ ತಂಡ ವಾಗಿರುವ ಭಾರತದ ಪುರುಷರ ತಂಡ ಈ ಬಾರಿ ಇದನ್ನು ಚಿನ್ನವಾಗಿ ಪರಿವರ್ತಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಪಾಕಿಸ್ಥಾನವನ್ನು ಮೊದಲ ಪಂದ್ಯದಲ್ಲೇ ಮಣಿಸಿದರೆ ಅಪಾರ ಆತ್ಮವಿಶ್ವಾಸ ಮೂಡುವುದರಲ್ಲಿ ಅನುಮಾನವಿಲ್ಲ. ಇದು “ಬಿ’ ವಿಭಾಗದ ಮುಖಾಮುಖೀಯಾಗಿದ್ದು, ಬಳಿಕ ಇಂಗ್ಲೆಂಡ್‌, ವೇಲ್ಸ್‌ ಮತ್ತು ಮಲೇಶ್ಯ ವಿರುದ್ಧ ಭಾರತ ಸೆಣಸಲಿದೆ. 

ಭಾರತ-ಪಾಕ್‌ ತಂಡಗಳು ಕಾಮ ನ್ವೆಲ್ತ್‌ನಲ್ಲಿ ಎದುರಾಗುತ್ತಿರುವುದು 2010ರ ಬಳಿಕ ಇದೇ ಮೊದಲು. ಅಂದಿನ ಹೊಸದಿಲ್ಲಿ ಕೂಟದಲ್ಲಿ ಭಾರತ 7-4 ಅಂತರದಿಂದ ಬದ್ಧ ಎದುರಾಳಿಯನ್ನು ಪರಾಭವಗೊಳಿಸಿತ್ತು. ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಇತ್ತಂಡಗಳ ಇನ್ನೊಂದು ಮುಖಾಮುಖೀಗೆ ಸಾಕ್ಷಿಯಾಗುವುದು 2006ರ ಮೆಲ್ಬರ್ನ್ ಕೂಟ. ಇದರಲ್ಲಿ ಪಾಕಿಸ್ಥಾನ ಜಯ ಸಾಧಿಸಿತ್ತು. ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ಏಶ್ಯ ಕಪ್‌ನಲ್ಲಿ ಭಾರತ-ಪಾಕಿಸ್ಥಾನ ಕೊನೆ ಸಲ ಮುಖಾಮುಖೀಯಾದಾಗ ಭಾರತವೇ ಗೆಲುವಿನ ಬಾವುಟ ಹಾರಿಸಿತ್ತು.

ಪೆನಾಲ್ಟಿ ಕಾರ್ನರ್‌ ಯಶಸ್ಸು
ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿ ಯಾದರೆ ಭಾರತ ಈ ಕೂಟ ದಲ್ಲಿ ನಿಚ್ಚಳ ಮೇಲುಗೈ ಸಾಧಿಸುವುದರಲ್ಲಿ ಅನು ಮಾನವಿಲ್ಲ. ಪೆನಾಲ್ಟಿ ಕಾರ್ನರ್‌ ಸ್ಪೆಷಲಿಸ್ಟ್‌ಗಳಾದ ರೂಪಿಂದರ್‌ ಪಾಲ್‌ ಸಿಂಗ್‌, ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಅಮಿತ್‌ ರೋಹಿದಾಸ್‌ ಕ್ಲಿಕ್‌ ಆಗಬೇಕಾದುದು ಅತ್ಯಗತ್ಯ. 

ತಂಡದ ತರಬೇತುದಾರ ಸೋರ್ಡ್‌ ಮರಿನ್‌ ಪ್ರತಿಕ್ರಿಯಿಸಿ, “ಮೊದಲ ಪಂದ್ಯದಲ್ಲಿ ನಮ್ಮದೇ ಗೆಲ್ಲುವ ನೆಚ್ಚಿನ ತಂಡ’ ಎಂದಿದ್ದಾರೆ. ಆದರೆ ಗೋಲ್ಡ್‌ ಕೋಸ್ಟ್‌ನಲ್ಲಿ ಮಧ್ಯಾಹ್ನದ ಹೊತ್ತು ವಿಪರೀತ ತಾಪಮಾನವಿದ್ದು, ಈ ಬಗ್ಗೆ ಅವರು ಕೊಂಚ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಕಾಲಮಾನ ಪ್ರಕಾರ ಅಪರಾಹ್ನ 2.30ಕ್ಕೆ (ಭಾರತದಲ್ಲಿ ಬೆಳಗ್ಗೆ 10.02) ಪಂದ್ಯ ಆರಂಭವಾಗಲಿದೆ.

Advertisement

“ವಿಪರೀತ ಬಿಸಿಯ ವಾತಾವರಣವಿದೆ. ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೂ ಇಲ್ಲದಿಲ್ಲ. ಯಾವುದಕ್ಕೂ ನಾವು ತಾಳ್ಮೆಯಿಂದಿರಬೇಕು’ ಎಂದು ಸೋರ್ಡ್‌ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next