Advertisement

ಕಾಮನ್‌ವೆಲ್ತ್‌: ಭಾರತಕ್ಕೆ 16 ನೇ ಚಿನ್ನದ ಪದಕ ತಂದ 15ರ ಶೂಟರ್‌ !

11:47 AM Apr 13, 2018 | |

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದ್ದು, 9 ನೇ ದಿನವಾದ ಶುಕ್ರವಾರ ಶೂಟರ್‌ ತೇಜಸ್ವಿನಿ ಸಾವಂತ್‌ ಅವರು ಚಿನ್ನದ ಪದಕ ಜಯಿಸಿದ ಬೆನ್ನಲ್ಲೇ  15 ರ ಹರೆಯದ ಶೂಟರ್‌ ಅನೀಶ್‌ ಬನ್ವಾಲಾ 16 ನೇ ಚಿನ್ನ ಗೆದ್ದು ದೊಡ್ಡ ಸಾಧನೆ ಮಾಡಿದ್ದಾರೆ.

Advertisement

25 ಮೀಟರ್‌ ರ್ಯಾಪಿಡ್‌ ಫೈರ್‌ ಸುತ್ತಿನಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನುಅನೀಶ್‌ ಗೆದ್ದಿದ್ದಾರೆ.  ಇದರಿಂದಾಗಿ ತೀ ಕಡಿಮೆ ವಯಸ್ಸಿನಲ್ಲಿ ಚಿನ್ನ ಗೆದ್ದ ದಾಖಲೆಯನ್ನು ತನ್ನದಾಗಿಸಿಕೊಂಡು ಭಾರತದ ಮನು ಭಾಕರ್‌ ಅವರ ದಾಖಲೆಯನ್ನು ಮುರಿದರು. ಇದೇ ಪಂದ್ಯಾವಳಿಯಲ್ಲಿ 16 ರ ಹರೆಯದ ಮನು ಭಾಕರ್‌ ಚಿನ್ನ ಗೆದ್ದಿದ್ದರು.  

 ಮಹಿಳೆಯರ 50ಎಂ ರೈಫ‌ಲ್‌ ಪ್ರೋನ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ತೇಜಸ್ವಿನಿ  50 ಎಮ್‌ ರೈಫ‌ಲ್‌ನಲ್ಲಿ ಚಿನ್ನ ಗೆದ್ದರು. ಅಂಜುಮ್‌ ಮೌದ್‌ಗಿಲ್‌ ಅವರು ಬೆಳ್ಳಿ ಪದಕ ಜಯಿಸಿದರು. 

ಪದಕ ಪಟ್ಟಿಯಲ್ಲಿ 16  ಚಿನ್ನ, 8 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ ಭಾರತ 3 ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next