ಬೆಂಗಳೂರು: ಅವರು ಡ್ರಾಮಾ, ಸಿನಿಮಾ ಮಾಡುತ್ತಾರೆ. ನಟ, ನಿರ್ಮಾಪಕ, ನಿರ್ದೇಶಕರಾದವರು. ನಾವು ಸಿನಿಮಾ ಮಾಡೆಲ್ ಮಾತ್ರ. ಅವರ ಹಾಗೆ ಸೆಟ್ ಹಾಕಿಸಿ, ಕಟ್, ಪೇಸ್ಟ್ ಎಲ್ಲಾ ಇಲ್ಲ ನಮ್ಮದು. ನಮಗೂ ಅವರಿಗೂ ಇರುವುದು ಇದೇ ವ್ಯತ್ಯಾಸ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಟಾಂಗ್ ಕೊಟ್ಟಿದ್ದಾರೆ.
ಮುನಿರತ್ನ ಮುಖ್ಯಮಂತ್ರಿಯಾಗಲಿ, ಬೇಡ ಎಂದವರು ಯಾರು ? ಇದು ಬಿಜೆಪಿ ಸರ್ಕಾರ ಅಲ್ಲ, ಕಾಂಗ್ರೆಸ್ ಬಿಜೆಪಿ ಸರ್ಕಾರ ಎಂದರು,
ಆರ್.ಆರ್ ನಗರದಲ್ಲಿ ಶೇಕಡಾವಾರು ಮತದಾನ ಕಡಿಮೆ ವಿಚಾರವಾಗಿ ಮಾತನಾಡಿ, ಬೆಂಗಳೂರು ನಗರದಲ್ಲಿ ವಿದ್ಯಾವಂತ ಮತದಾರರು ‘ನಾವು ಯಾಕೆ ಬಂದು ಮತದಾನ ಮಾಡಬೇಕು’ ಎಂದು ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ವಿದ್ಯಮಾನಗಳೇ ಅವರ ಈ ನಿರ್ಧಾರಕ್ಕೆ ಕಾರಣ. ಸಿಎಂ ಸೇರಿದಂತೆ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದರೇ ಅವರಿಗೆ ಇಷ್ಟವಿಲ್ಲದ್ದರಿಂದ ವೋಟ್ ಹಾಕಿಲ್ಲ ಎಂದರು.
ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ಶಾಲಾರಂಭದ ಬಗ್ಗೆ ನಿರ್ಧಾರ : ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ರಾಜಕೀಯ ಚದುರಂಗದಲ್ಲಿ ಮಾಧ್ಯಮಗಳ ವಿಶ್ಲೇಷಣೆ ನಡೆಯುತ್ತಿದೆ. ಮಾಧ್ಯಮವೇ ನ್ಯಾಯಾಧೀಶರಾಗಿ, ವಿಚಾರಾಣಾಧಿಕಾರಿಗಳಾಗಿ ಬದಲಾಗಿವೆ. ಎಲ್ಲವನ್ನೂ ಕೂಡ ನೋಡುತ್ತಿದ್ದೇವೆ, ನಮ್ಮ ಮತದಾರ ಮೇಲೆ ನಮಗೆ ವಿಶ್ವಾಸ ಇದೆ. ಎಲ್ಲಾ ಮತದಾರರಿಗೂ ಅಭಿನಂದನೆಗಳು.
ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು, ಇತರ ಪಕ್ಷಗಳ ಕಾರ್ಯಕರ್ತರು ಸಹಾಯ ಮಾಡಿದ್ದಾರೆ. ಇಲ್ಲ ಅಂತ ನಾನು ಹೇಳುವುದಿಲ್ಲ. ಆದರೇ ಯಾರು ಸಹಾಯ ಮಾಡಿದ್ದಾರೆ ಎಂದು ಹೇಳುವುದಿಲ್ಲ. ಎರಡೂ ಪಕ್ಷದ ಕಡೆಯಿಂದ ಸಹಾಯ ಮಾಡಿದ್ದಾರೆ ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಎಂದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಲವ್ ಜಿಹಾದ್ ತಡೆಗೆ ರಾಜ್ಯದಲ್ಲಿ ಶೀಘ್ರ ಕಾನೂನು ಜಾರಿ : ಬಸವರಾಜ್ ಬೊಮ್ಮಾಯಿ