Advertisement

ಅಡವಿಟ್ಟ ಚಿನ್ನಾಭರಣ ಹಿಂತಿರುಗಿಸುವಂತೆ ಗ್ರಾಹಕರ ಒತ್ತಾಯ 

02:37 PM Mar 01, 2023 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ದರೋಡೆ ನಡೆದಿದ್ದ ಹಿನ್ನೆಲೆ, ಅಡವಿಟ್ಟ ಚಿನ್ನಾಭರಣಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿ, ವಿಷದ ಬಾಟಲಿಗಳೊಂದಿಗೆ ಬ್ಯಾಂಕಿಗೆ ಲಗ್ಗೆಯಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಗ್ರಾಹಕರನ್ನು ಮನವೊಲಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Advertisement

ನ.25ರಂದು ಹೊಸಹಳ್ಳಿ ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಬಾಗಿಲನ್ನು ಗ್ಯಾಸ್‌ ಕಟರ್‌ ಬಳಸಿ ಕತ್ತರಿಸುವ ಮೂಲಕ ಒಳ ನುಗ್ಗಿದ್ದ ಕಳ್ಳರು ಸುಮಾರು 3.50 ಕೋಟಿ ರೂ. ಮೌಲ್ಯದ 12 ಕೆ.ಜಿ. ಚಿನ್ನಾಭರಣ, 14 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಅಡವಿಟ್ಟಿರುವ ಚಿನ್ನಾಭರಣಗಳನ್ನು ಹಿಂತಿರುಗಿಸುವಂತೆ ಬ್ಯಾಂಕಿಗೆ ಪದೇ ಪದೇ ಮನವಿ ಮಾಡಿದರು ಬ್ಯಾಂಕ್‌ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ ಗ್ರಾಹಕರು, ವಿಷದ ಬಾಟಲಿ ‘ಗಳೊಂದಿಗೆ ಬ್ಯಾಂಕಿಗೆ ಬಂದು ಚಿನ್ನಾಭರಣ ಹಿಂತಿರುಗಿಸಬೇಕು. ಇಲ್ಲವಾದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿ, ಬ್ಯಾಂಕ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಬ್ಯಾಂಕ್‌ ವಹಿವಾಟು ಸ್ಥಗಿತ: ಮಂಗಳವಾರ ಬೆಳಗ್ಗೆಯಿಂದ ನಡೆದ ಗ್ರಾಹಕರ ಪ್ರತಿಭಟನೆಯಿಂದ ಬ್ಯಾಂಕ್‌ ವಹಿವಾಟು ಸ್ಥಗಿತವಾಗಿದ್ದು, ಬ್ಯಾಂಕ್‌ ವ್ಯವಸ್ಥಾಪಕ ಹಿರಿಯ ಅಧಿಕಾರಿಗಳಿಗೆ ಈ ಕುರಿತಂತೆ ಮಾಹಿತಿ ನೀಡಿದರು. ಅಂತಿಮವಾಗಿ ಮಾ.1ರಂದು ಆತ್ಮೀಯ ಗ್ರಾಹಕರೇ, ಚಿನ್ನದ ಸಾಲದ ಖಾತೆಗಳ ಇತ್ಯರ್ಥಕ್ಕೆ ಸಂಬಂಧಿ ಸಿದಂತೆ ಅಂತಿಮ ಇತ್ಯರ್ಥಕ್ಕಾಗಿ ಚಿನ್ನದ ಸಾಲ ಪಡೆದವರು ಬೇಡಿಕೆಯ ಸಭೆಯನ್ನು ನಡೆಸುವುದಾಗಿ ಭರವಸೆ ನೀಡಿದ ನಂತರ ಗ್ರಾಹಕರು ಪ್ರತಿಭಟನೆ ಕೈಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next