Advertisement

FlipKart ಯಡವಟ್ಟು ಸೋನಿ ಟಿವಿಗೆ ಆರ್ಡರ್‌.. ಬಂದಿದ್ದು ಥಾಮ್ಸನ್‌ ಟಿವಿ…ಟ್ವೀಟ್‌ ವೈರಲ್!

11:22 AM Oct 26, 2023 | |

ನವದೆಹಲಿ: ಆನ್‌ ಲೈನ್‌ ನಲ್ಲಿ ವಸ್ತುಗಳನ್ನು ಖರೀದಿಸುವ ವೇಳೆ ನಾವು ಆರ್ಡರ್‌ ಮಾಡುವ ವಸ್ತುವಿನ ಬದಲು ಬೇರೊಂದು ವಸ್ತು ಸರಬರಾಜು ಆದ ವಿಷಯ ಆಗಾಗ ವರದಿಯಾಗುತ್ತಿರುತ್ತದೆ. ಅದೇ ರೀತಿ ವ್ಯಕ್ತಿಯೊಬ್ಬರು ಒಂದು ಲಕ್ಷ ರೂಪಾಯಿ ಮೌಲ್ಯದ ಸೋನಿ ಟಿವಿಯನ್ನು ಆರ್ಡರ್‌ ಮಾಡಿದ್ದು, ಫ್ಲಿಪ್‌ ಕಾರ್ಟ್‌ ಥಾಮ್ಸನ್‌ ಟಿವಿ ಡೆಲಿವರಿ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಶೇರ್‌ ಮಾಡಿದ್ದು, ಈ ಟ್ವೀಟ್‌ ವೈರಲ್‌ ಆಗಿದೆ.‌

Advertisement

ಇದನ್ನೂ ಓದಿ:Tiger Claw Pendant: ಕಾಫಿನಾಡಲ್ಲಿ ಹುಲಿ ಉಗುರು ಕಾರ್ಯಚರಣೆ; ಇಬ್ಬರು ಅರ್ಚಕರ ಬಂಧನ

ಎಕ್ಸ್‌ ಬಳಕೆದಾರ ಆರ್ಯನ್‌ ಎಂಬುವರು ತಮ್ಮ ಅದಲು, ಬದಲಾದ ಆರ್ಡರ್‌ ಬಗ್ಗೆ ಶೇರ್‌ ಮಾಡಿದ್ದು, ಇದು ವ್ಯಾಪಕವಾಗಿ ಎಲ್ಲರ ಗಮನಸೆಳೆದಿರುವುದಾಗಿ ವರದಿ ತಿಳಿಸಿದೆ.

ವಿಶ್ವಕಪ್‌ ಪಂದ್ಯಾಟವನ್ನು ವೀಕ್ಷಿಸುವ ಹುಮ್ಮಸ್ಸಿನಲ್ಲಿ ಆರ್ಯನ್‌ ಫ್ಲಿಪ್‌ ಕಾರ್ಟ್‌ ನ ಬಿಗ್‌ ಬಿಲಿಯನ್‌ ಡೇಸ್‌ ಆಫರ್‌ ಸಂದರ್ಭದಲ್ಲಿ ಸೋನಿ ಟಿವಿ ಆರ್ಡರ್‌ ಮಾಡಿದ್ದರು. ಆದರೆ ಫ್ಲಿಪ್‌ ಕಾರ್ಟ್‌ ಕಡಿಮೆ ದರದ ಥಾಮ್ಸನ್‌ ಬ್ರ್ಯಾಂಡ್‌ ನ ಟಿವಿಯನ್ನು ಡೆಲಿವರಿ ಮಾಡಿರುವುದಾಗಿ ಎಕ್ಸ್‌ ನಲ್ಲಿ ತಿಳಿಸಿದ್ದಾರೆ.

“ಅಕ್ಟೋಬರ್‌ 7ರಂದು ಫ್ಲಿಪ್‌ ಕಾರ್ಟ್‌ನಲ್ಲಿ ಆರ್ಡರ್‌ ಮಾಡಿದ್ದು, ಅ.10ರಂದು ನನಗೆ ಸೋನಿ ಟಿವಿಯನ್ನು ಡೆಲಿವರಿ ಮಾಡಿತ್ತು. ಅ.11ರಂದು ಸೋನಿ ಟಿವಿ ಅಳವಡಿಸಲು ಬಂದಿದ್ದು, ಈ ಸಂದರ್ಭದಲ್ಲಿ ಬಾಕ್ಸ್‌ ತೆರೆದಾಗ ಆಘಾತವಾಗಿತ್ತು. ಅದಕ್ಕೆ ಕಾರಣ ಸೋನಿ ಟಿವಿ ಬಾಕ್ಸ್‌ ನೊಳಗೆ ಇದ್ದದ್ದು ಥಾಮ್ಸನ್‌ ಟಿವಿ. ಅದರಲ್ಲಿ ಸ್ಟ್ಯಾಂಡ್‌, ರಿಮೋಟ್‌ ಕೂಡಾ ಇಲ್ಲವಾಗಿತ್ತು. ಕೂಡಲೇ ಈ ಬಗ್ಗೆ ಫ್ಲಿಪ್‌ ಕಾರ್ಟ್‌ ಕಸ್ಟಮರ್‌ ಕೇರ್‌ ಗೆ ದೂರು ನೀಡಿದ್ದು, ಎರಡು ವಾರ ಕಳೆದರೂ ಫ್ಲಿಪ್ ಕಾರ್ಟ್‌ ನಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಆರ್ಯನ್‌ ಎಕ್ಸ್‌ ನಲ್ಲಿ ದೂರಿದ್ದಾರೆ.

Advertisement

ಹಲವು ಬಾರಿ ಕಸ್ಟಮರ್‌ ಕೇರ್‌ ಗೆ ದೂರು ನೀಡಿದಾಗ, ಟಿವಿ ಇಮೇಜ್‌ ಅನ್ನು ಅಪ್‌ ಲೋಡ್‌ ಮಾಡುವಂತೆ ತಿಳಿಸಿದ್ದರು. ಅದರಂತೆ ಮೂರು ಬಾರಿ ಇಮೇಜ್‌ ಅಪ್‌ ಲೋಡ್‌ ಮಾಡಿದ್ದೆ. ಆದರೆ ಈವರೆಗೂ ನನಗೆ ಸೋನಿ ಟಿವಿಯನ್ನು ಫ್ಲಿಪ್‌ ಕಾರ್ಟ್‌ ನೀಡಿಲ್ಲ ಎಂದು ಆರ್ಯನ್‌ ತಿಳಿಸಿದ್ದಾರೆ.

ಟಿವಿ ಡೆಲಿವರಿ ಸಂದರ್ಭದಲ್ಲಿ ತಮಗೆ ಬಾಕ್ಸ್‌ ಅನ್ನು ತೆರೆದು ನೋಡುವ ಅವಕಾಶ ಕೊಟ್ಟಿಲ್ಲ ಎಂದು ಆರ್ಯನ್‌ ಆರೋಪಿಸಿದ್ದಾರೆ.

ಆರ್ಯನ್‌ ಟ್ವೀಟ್‌ (ಎಕ್ಸ್)‌ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಫ್ಲಿಪ್‌ ಕಾರ್ಟ್‌ ಕೊನೆಗೂ ಸ್ಪಂದಿಸಿದ್ದು, ನಮ್ಮಿಂದಾದ ತಪ್ಪಿಗೆ ಕ್ಷಮೆಯಾಚಿಸುತ್ತೇವೆ. ನಾವು ಕೂಡಲೇ ನಿಮಗಾದ ಅನ್ಯಾಯವನ್ನು ಸರಿಪಡಿಸಲಿದ್ದು, ಆರ್ಡರ್‌ ವಿವರವನ್ನು ಕಳುಹಿಸಿಕೊಡಿ” ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next