Advertisement
ಈ ಡಿಸ್ಕೌಂಟ್ ಸೇಲ್ನ ಹಿಂದಿನ ಉದ್ದೇಶ ಏನು?ಮೇಲು ನೋಟಕ್ಕೆ, ಹಣದುಬ್ಬರದಿಂದ ಜರ್ಜರಿತವಾದ ಗ್ರಾಹಕರಿಗೆ ತುಸು ರಿಲೀಫ್ ಕೊಡಲು ವ್ಯಾಪಾರಿಗಳು ಮುಖ ಬೆಲೆ ಮೇಲೆ ಡಿಸ್ಕೌಂಟ್ ನೀಡುತ್ತಾರೆ. ಗ್ರಾಹಕರೂ ನಾಲ್ಕುಕಾಸು ಉಳಿದರೆ ಸಾಕು ಎಂದು ಡಿಸ್ಕೌಂಟ್ ಸೇಗೆ ಭರ್ಜರಿಯಾಗಿ ಸ್ಪಂದಿಸುತ್ತಾರೆ ಮತ್ತು ಮುಗಿ ಬೀಳುತ್ತಾರೆ. ಕೆಲವು ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ಡಿಸ್ಕೌಂಟ್ ಸೇಲ್ ನ ಹಿಂದಿನ ಉದ್ದೇಶ ಗ್ರಾಹಕರ ಹಿತಾಸಕ್ತಿಗೆ ಹೊರತಾಗಿ ಬೇರೆ ಇರುತ್ತದೆ. ಸ್ಟಾಕ್ ಬಹುದಿನಗಳಿಂದ ಮಾರಾಟವಾಗದೇ ಉಳಿದಿದ್ದು, ಟ್ರೆಂಡ್, ಫ್ಯಾಷನ್,ಅಭಿರುಚಿ ನಿರಂತರ ಬದಲಾವಣೆಯಾಗುವ ದಿನಗಳಲ್ಲಿ ಅವು Out Of Date ಮತ್ತು oout of Fashionಆಗಿ ಅವು ಡೆಡ್‌ಸ್ಟಾಕ್ ಆಗುವ ಭಯ. ನಿರೀಕ್ಷೆಯ ಲಾಭಕ್ಕೆ ಅಪೇಕ್ಷೆ ಪಡದೇ, ಹೂಡಿಕೆ ಮತ್ತು ಖರ್ಚು ವೆಚ್ಚವನ್ನಾದರೂ ಮರಳಿ ಪಡೆಯುವ ಹುನ್ನಾರ. ಸಾಮಾನ್ಯವಾಗಿ ವ್ಯಾಪಾರಸ್ಥರು ಬ್ಯಾಂಕ್‌ಲೋನ್ ತೆಗೆದುಕೊಳ್ಳುತ್ತಿದ್ದು, ವ್ಯಾಪಾರ ಅಗಲಿ,ಆಗದೇ ಇರಲಿ ಬಡ್ಡಿ ಮೀಟರ್ ಓಡುತ್ತಿರುತ್ತದೆ. ಖಾತೆಗಳಲ್ಲಿ ಒಂದಿಷ್ಟು ಹಣ ಓಡಾಡಿದರೆ, ವ್ಯಾಪಾರಿಗಳಿಗೆ ಅಷ್ಟೇ ನೆಮ್ಮದಿ ಮತ್ತು ಬ್ಯಾಂಕುಗಳು ಕೂಡಾ ವಿಚಲಿತರಾಗುವುದಿಲ್ಲ. ಮಾರುಕಟ್ಟೆ ಮತ್ತು ಬಿಜಿನೆಸ್, ಇವೆರಡೂ ನಿಂತ ನೀರಲ್ಲ. ಅದು ಸದಾ ಹರಿಯುತ್ತಿರುತ್ತದೆ ಮತ್ತು ಬದಲಾಗುತ್ತಿರುತ್ತವೆ. ಮಾರುಕಟ್ಟೆಯಲ್ಲಿ ಸದಾ ಹೊಸ ಹೊಸ ಅವಿಷ್ಕಾರಗಳು ಮತ್ತು ಉತ್ಪನ್ನಗಳು ಬರುತ್ತಿದ್ದು, ಹಳೆ ಪದಾರ್ಥಗಳು, ಉತ್ಪನ್ನಗಳು ಮತ್ತು ಅವಿಷ್ಕಾರಗಳು ಹೊಸದಕ್ಕೆ ದಾರಿ ಮಾಡಿಕೊಡಬೇಕಾಗುತ್ತದೆ. ಅಂತೆಯೇ ಹೊಸ ಉತ್ಪನ್ನಗಳಿಗೆ ಅನುವು ಮಾಡಿಕೊಡಲು ಹಳೆಯದನ್ನು ಖಾಲಿ ಮಾಡುವ ಅನಿವಾರ್ಯತೆ ಇರುತ್ತದೆ. ಹಳೆಯ ಮುದ್ರಿತ ದರಗಳಿಗೇ ಅಂಟಿಕೊಂಡರೆ, ಅವುಗಳನ್ನು ಸಾಗಹಾಕುವುದು ತುಂಬಾ ಕಷ್ಟ. ಈ ಕಾರಣದಿಂದಲೇ ಕೆಲವೊಂದು ವಸ್ತುಗಳ ಮುದ್ರಿತ ದರವನ್ನು ಇಳಿಸಿ ಮಾರಾಟ ಮಾಡುವುದನ್ನು ನೋಡಬಹುದು. ಬಹುಶ ಇದೇ ಕಾರಣಕ್ಕೊ ಏನೋ, ಡಿಸ್ಕೌಂಟ… ಸೇಲ್‌ಗಳಲ್ಲಿ, ಆಯ್ದ ಐಟಂ ಗಳಿಗೆ ಮಾತ್ರ ರಿಯಾಯಿತಿ (selected items only) ಎನ್ನುವ ನಿಬಂಧನೆಯನ್ನೂ ನೋಡಬಹುದು. ಮಳಿಗೆಯಲ್ಲಿರುವ ಎಲ್ಲಾ ಐಟಂಗಳಿಗೆ ಡಿಸ್ಕೌಂಟ್ ಅನ್ವಯವಾಗುವುದು ತೀರಾ ಕಡಿಮೆ. ಈ ಆಯ್ದ ಐಟಂಗಳು ಸಾಮಾನ್ಯವಾಗಿ, ಹೊಸ ಸರಕಾಗಿರದೇ, outdated ಮತ್ತು out of fashion ಅಗಿರುವುದೇ ಹೆಚ್ಚು. ಇವನ್ನು ಕೊಳ್ಳಲು ಬಂದವರು ಹೊಸ ಸರಕಿನತ್ತ ಕಣ್ಣು ಹಾಯಿಸುವದನ್ನು, ಮಾರ್ಕೆಟಿಂಗ್ ಮತ್ತು ಸೇಲ್ಸ್ ಸ್ಟ್ರಾಟೆಜಿ ಎನ್ನಬಹುದು.
ಡಿಸ್ಕೌಂಟ್‌ನಲ್ಲಿ ಹಲವು ರೀತಿಗಳು ಇರುತ್ತವೆ. ಮುಖಬೆಲೆಯ ಮೇಲೆ ನೀಡುವ ಇಳಿಕೆಯನ್ನು ಮಾತ್ರ ಸಾಮಾನ್ಯವಾಗಿ ಡಿಸ್ಕೌಂಟ್ ಎಂದು ಹೇಳಲಾಗುತ್ತದೆ. ನಿಸ್ಸಂಶಯವಾಗಿ ಡಿಸ್ಕೌಂಟ್ ಸೇಲ…ನಲ್ಲಿ ಇದು ಹೆಚ್ಚು ಜನಪ್ರಿಯ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತದೆ. ಇದನ್ನು ಕ್ಯಾಷ್ ಡಿಸ್ಕೌಂಟ್ ಎಂದು ಕರೆಯತ್ತಾರೆ. ಪದಾರ್ಥಗಳ ಮುಖ ಬೆಲೆಯ ಮೇಲೆ ಕೆಲವು ಪರ್ಸೆಂಟೇಜ… ಇಳಿಕೆ ನೀಡಲಾಗುತ್ತದೆ. ಈ ಇಳಿಕೆ ಶೇ. 5 ರಿಂದ ಅರಂಭವಾಗಿ ಶೇ.55ವರೆಗೂ ಇರುತ್ತದೆ. ಎರಡನೇ ರೀತಿಯ ಡಿಸ್ಕೌಂಟ್ ಎಂದರೆ, ಒಂದು ಕೊಂಡರೆ, ಇನ್ನೊಂದು ಉಚಿತ, ಮೂರು ಕೊಂಡರೆ ಎರಡು ಉಚಿತ, ನಾಲ್ಕು ಕೊಂಡರೆ ಮೂರು ಉಚಿತ ಎನ್ನುವ ಮಾರಾಟ. ಇದು ಗಾರ್ಮೆಂಟ್ಸ್ ಸೆಕ್ಟರ್‌ನಲ್ಲಿ ಹೆಚ್ಚು ಕಾಣುತ್ತದೆ. ಈ ಡಿಸ್ಕೌಂಟ್‌ನಲ್ಲಿ ಹೆಚ್ಚು ಐಟಂ ಖರೀದಿಸಿದಷ್ಟು, ಹೆಚ್ಚು ಐಟಂಗಳು ಉಚಿತವಾಗಿ ಸಿಗುತ್ತವೆ. ಹಲವು ಸಂದರ್ಭದಲ್ಲಿ ಪ್ಯಾಂಟ್ ಖರೀದಿಸಿದರೆ, ಶರ್ಟ್ ಉಚಿತ, ಸೀರೆ ಕೊಂಡರೆ ಬ್ಲೌಸ್ ಬಟ್ಟೆ ಉಚಿತ, ಟಿವಿ ಕೊಂಡರೆ ಮೊಬೈಲ… ಉಚಿತ ಎನ್ನುವ ಸ್ಕೀಮ…ಗಳು ಇರುತ್ತವೆ. ಕೆಲವು ಮಳಿಗೆಗಳಲ್ಲಿ ಡಿಸ್ಕೌಂಟ್‌ಗಳನ್ನು ಕೂಡಲೇ ಕೊಡದೇ, ವೋಚರ್ ಕೊಟ್ಟು, ಮೂರು ತಿಂಗಳಿನಲ್ಲಿ ಇನ್ನೊಮ್ಮೆ ಖರೀದಿಸುವಾಗ ಡಿಸ್ಕೌಂಟ್ ತೆಗೆದುಕೊಳ್ಳುವಂತೆ ಹೇಳಿ ಗ್ರಾಹಕ ಇನ್ನೊಮ್ಮೆ ತಮ್ಮ ಮಳಿಗೆಗೆ ಬರುವಂತೆ ಮಾಡುತ್ತಾರೆ. ವ್ಯಾಪಾರಸ್ಥರ ಈ ಚಾಣಾಕ್ಷತನ ಮತ್ತು ಮಾರ್ಕೆಟಿಂಗ್ ಗಿಮಿಕ್ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಗ್ರಾಹಕರು ಸಾಮಾನ್ಯವಾಗಿ ಈ ಡಿಸ್ಕೌಂಟ… ಹಿಂದಿನ ಸಮೀಕರಣವನ್ನು ಮತ್ತು ಲೆಕ್ಕಾಚಾರವನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಅವರ ಗಮನ ಇರುವುದು ನಾಲ್ಕು ಕಾಸು ಉಳಿಯಬಹುದೇ ಎನ್ನುವ ಯೋಚನೆಯ ಮೇಲೆ.
Related Articles
ಇತ್ತೀಚೆಗೆ, ನಿಮ್ಮ ಹಳೆಯ ವಸ್ತುಗಳನ್ನು ಪಡೆದು, ಅದರ ಬದಲಿಗೆ ಹೊಸ ಉತ್ಪನ್ನವನ್ನು ನೀಡುವ ಸ್ಕೀಮ… ಚಾಲ್ತಿಗೆ ಬಂದಿದ್ದು, ಭಾರೀ ಜನಪ್ರಿಯವಾಗುತ್ತಿದೆ. ಮೇಲುನೋಟಕ್ಕೆ ಕಾಣದಿದ್ದರೂ, ಇದೂ ಒಂದು ರೀತಿಯ ಡಿಸ್ಕೌಂಟ್ ಸೇಲ್ ಇದು. ರಿಪೇರಿಗಿಂತ ಹೊಸದನ್ನು ಕೊಳ್ಳುವುದೇ ವಾಸಿ ಎನ್ನುವ ಆಧುನಿಕ ಮಾರ್ಕೆಟಿಂಗ್ ತಂತ್ರದ ಕೂಸು. ಇಂದು ಹೊಸ ಅನ್ವೇಷಣೆ ಮತ್ತು ಅವಿಷ್ಕಾರಗಳು ಮಾರುಕಟ್ಟೆಗೆ ಸದಾ ಲಗ್ಗೆ ಇಡುತ್ತಿದ್ದು, ಹಳೆಯದರ ರಿಪೇರಿಗೆ spare ಗಳು ಸಿಗುತ್ತಿಲ್ಲ. ರಿಪೇರಿ ಮಾಡುವವರೂ ಸಿಗುತ್ತಿಲ್ಲ. ಹೀಗಾಗಿ ರಿಪೇರಿ ಮಾಡಿಸುವ ಖರ್ಚೇ ದುಬಾರಿಯಾಗುತ್ತಿದ್ದು, ಹೊಸತನ್ನು ಖರೀದಿಸುವ ಅನಿವಾರ್ಯತೆ ಹೆಚ್ಚುತ್ತಿದೆ.
Advertisement
ಈ ವಿನಿಮಯ ವ್ಯವಹಾರ ಗ್ರಾಹಕರಿಗೂ ಒಂದು ರೀತಿಯಲ್ಲಿ ಅನುಕೂಲಕರವೇ. ರಿಪೇರಿಯಾಗದ, ಬೇಡವಾದ ಅಥವಾ out dated ಮತ್ತು out of Fashion ವಸ್ತುಗಳನ್ನು ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರುವುದು ಸಾಧ್ಯವಿಲ್ಲ. ಅಷ್ಟು ವ್ಯವಧಾನ ಯಾರಿಗೂ ಇರುವುದಿಲ್ಲ ಮತ್ತು ವಿನಿಮಯ ವ್ಯವಹಾರ ಎಲ್ಲವುಗಳಿಗೆ ಪರಿಹಾರ. ಈ ವಿನಿಮಯ ವ್ಯವಹಾರದಲ್ಲಿ ನಿರೀಕ್ಷೆಯಷ್ಟು ದೊರಕಲಿಕ್ಕಿಲ್ಲ. ಆದರೆ, ಕಿಂಚಿತ್ ಆದರೂ ಸಿಗುವ ತೃಪ್ತಿ ಇರುತ್ತದೆ. ಈ ವ್ಯವಹಾರದಲ್ಲಿ ವ್ಯಾಪಾರಸ್ಥ ನಿಮ್ಮ ಹಳೆ ವಸ್ತುಗಳಿಗೆ ಒಂದು ನಿಖರ ಮೊತ್ತವನ್ನು ನಿಗದಿ ಪಡಿಸುತ್ತಿದ್ದು. ಹೆಚ್ಚಿಗೆ ಚೌಕಾಶಿಗೆ ಅವಕಾಶವಿಲ್ಲ. ಹಳೆಯದು ಛಜಿsಟಟsಛಿ ಆಯಿತು ಎನ್ನುವುದೇ ಹೆಚ್ಚಿನ ಸಮಾಧಾನ. ಆಟೋಮೊಬೈಲ…, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಗೃಹೋಪಯೋಗಿ ಸಣ್ಣ, ಸಣ್ಣ ವಸ್ತುಗಳ ವ್ಯವಹಾರದಲ್ಲಿ ಈ ವಿನಿಮಯ ವ್ಯವಹಾರಗಳು ಎದ್ದು ಕಾಣುತ್ತವೆ.
ವ್ಯಾಪಾರಿ ನಷ್ಟ ಮಾಡಿಕೊಳ್ಳುತ್ತಾನೆಯೇ?ಬ್ಯುಸಿನೆಸ್‌ನಲ್ಲಿ ಯಾರೂ ನಷ್ಟ ಮಾಡಿಕೊಂಡು ವ್ಯವಹಾರ ಮಾಡುವುದಿಲ್ಲ. ಲಾಭವನ್ನು ಕಡಿಮೆ ಮಾಡಿಕೊಳ್ಳಬಹುದೇ ವಿನಃ, ಅಸಲನ್ನು ಎಂದೂ ಕಳೆದುಕೊಳ್ಳುವುದಿಲ್ಲ. ಅನಿವಾರ್ಯವಾದ ಮತ್ತು ಬೇರೆ ಮಾರ್ಗವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ನಷ್ಟಮಾಡಿಕೊಂಡು ವ್ಯವಹಾರ ಮಾಡಬಹುದು. ಇದು ಬ್ಯುಸಿನೆಸ್ ಅರ್ಥ ಶಾಸ್ತ್ರದ ಮೊದಲ ಪಾಠ. ಒಬ್ಬ ವ್ಯಾಪಾರಿ ಡಿಸ್ಕೌಂಟ… ಕೊಡುತ್ತಾನೆ ಎಂದರೆ ಅತ ತನ್ನ ಲಾಭದ ಪ್ರಮಾಣದಲ್ಲಿ ಕೊಂಚ ಕಡಿಮೆ ಮಾಡಿ ಕೊಳ್ಳುತ್ತಾನೆ ಎಂತಲೇ ಅರ್ಥ. ತನ್ನ ಮೂಲ ಬೆಲೆಯಲ್ಲಿ ಕಡಿಮೆಮಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಎಪ್ಪತ್ತು ಸಾವಿರ ಬೆಲೆಯ ಫನೀಚರ್ ಸೆಟ್ ಅನ್ನು ಡಿಸ್ಕೌಂಟ್‌ನಲ್ಲಿ 30 ಸಾವಿರಕ್ಕೆ ನೀಡಿದ ಮೇಲೂ, ಆ ವ್ಯಾಪಾರಿಗೆ ನಷ್ಟವಾಗದು ಎಂದರೆ, ಡಿಸ್ಕೌಂಟ್ ಘೋಷಣೆಗೂ ಮೊದಲು ಖರೀದಿಸಿದವರು ಅದಕ್ಕೆ ದುಪ್ಪಟ್ಟು ತೆತ್ತಿರಬೇಕು. ನಮ್ಮ ದೇಶದಲ್ಲಿ ಗ್ರಾಹಕ ಚಳವಳಿ ಕೆಲವು ಪಾಶ್ಚಿಮಾತ್ಯ ದೇಶಗಳಷ್ಟು ಸಕ್ರಿಯವಾಗಿಲ್ಲ. ಅಂತೆಯೇ, ಇದರ ಹಿಂದಿನ ಸಮೀಕರಣವನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಶೇ. 10 -15 ರಷ್ಟು ಡಿಸ್ಕೌಂಟ… ನೀಡುವುದು ತೀರಾ ಸಾಮಾನ್ಯವಾದ ಬ್ಯೂಸಿನಸ್‌ನ ಪದ್ಧತಿ ಹಾಗೂ ತಂತ್ರ. ಆದರೆ, ಈ ಡಿಸ್ಕೌಂಟ್ ಶೇ. 50ರವರೆಗೂ ಹೋಗುವುದು, ಅನೇಕ ರೀತಿಯ costly ಗಿಫ್ಟ್ ನೀಡುವುದು, ಕೆಲವು ಬಾರಿ ಕೆಲವು ಸಂಶಯಗಳಿಗೆ ಮತ್ತು ಉಹಾ ಪೋಹಗಳಿಗೆ ಎಡೆ ಮಾಡಿ ಕೊಡುತ್ತದೆ. ಮುಖ ಬೆಲೆಯ ಮೇಲೆ ಶೇ. 50ರ ವರೆಗೂ ಡಿಸ್ಕೌಂಟ್ ಕೊಟ್ಟ ಮೇಲೆ ವ್ಯಾಪಾರಿಗಳಿಗೆ ಉಳಿಯುವುದೇನು? ಈಗ ಔಷಧಗಳ ಮೇಲಿ ಶೇ. 25ರ ತನಕ, ಚಪ್ಪಲಿಗಳ ಮೇಲೆ ಶೇ.30ರ ತನಕ ಡಿಸ್ಕೌಂಟ್ ದೊರೆಯುತ್ತಿದೆ ಎಂದಾದರೆ ಅವರ ಲಾಭದ ಪ್ರಮಾಣ, ಹೂಡಿಕೆಯ ಪ್ರಮಾಣವನ್ನು ಊಹಿಸಿ. ಈ ತನಕ ಡಿಸ್ಕೌಂಟ್ ನೀಡದೆ ಎಷ್ಟೆಲ್ಲಾ ಲಾಭ ಮಾಡಿಕೊಂಡಿರಬಹುದು? ಇನ್ನೂ ಕೆಲವರು ಫ್ಲಾಟ್ ಫಿಫ್ಟಿ ಅನ್ನೋ ಬೋರ್ಡು ಹಾಕಿರುವುದನ್ನು ಗಮನಿಸಬಹುದು. ಇದು ಹೇಗೆ ಸಾಧ್ಯ? ಅನುಮಾನ ಮೂಡದೇ ಇರದು. ತಜ್ಞರ ಪ್ರಕಾರ, ಈಗಾಗಲೇ ಇರುವ ಬೆಲೆಯನ್ನು ಹೆಚ್ಚಿಸಿ, ಅದರಲ್ಲಿ ಡಿಸ್ಕೌಂಟ್ ನಿಗಧಿ ಮಾಡುವುದರಿಂದ ಮಾರಾಟಗಾರರಿಗೆ ಹಳೆಯ ಬೆಲೆಗೇ ವಸ್ತುಗಳು ಹೆಚ್ಚುಹೆಚ್ಚು ಮಾರಾಟವಾಗುತ್ತದೆ.ಒಟ್ಟಾರೆ ಹೇಳುವುದಾದರೆ, ಡಿಸ್ಕೌಂಟ್ ಎಂಬುದು ಮಾರುಕಟ್ಟೆಯ ಮಾಯಾಮೃಗ. ವರ್ತಕರು ದನ್ನು ಆಗಿಂದಾಗ್ಗೆ ಬಿಡುತ್ತಲೇ ಇರುತ್ತಾರೆ. ಗ್ರಾಹಕರು ಮಾಯಾಮೃಗದ ಮೋಹಕ್ಕೆ ಮರುಳಾಗಿ, ಅದರ ಹಿಂದೆ ಬಿದ್ದು ಜೇಬು ಖಾಲಿ ಮಾಡಿಕೊಳ್ಳುತ್ತಾರೆ. ಆ ಮೂಲಕ ವರ್ತಕರ ವ್ಯವಹಾರದಲ್ಲಿ ಏರಿಕೆಯಾಗುವಂತೆ ನೋಡಿಕೊಳ್ಳುತ್ತಾರೆ. ಈ ವ್ಯವಹಾರದಲ್ಲಿ ಗ್ರಾಹಕನಿಗಿಂತ ಹೆಚ್ಚಿನ ಲಾಭ ವ್ಯಾಪಾರಿಗೇ ಆಗುತ್ತದೆ, ಅಷ್ಟೇ !
ರಮಾನಂದ ಶರ್ಮಾ