Advertisement

ಜಾನುವಾರು ಅಧಿಸೂಚನೆಗೆ ಸದ್ಯವೇ ತಿದ್ದುಪಡಿ: ಸರಕಾರ

02:06 PM Jun 14, 2017 | Harsha Rao |

ಹೊಸದಿಲ್ಲಿ: ವಧೆಗಾಗಿ ಜಾನುವಾರುಗಳ ಮಾರಾಟ ಮತ್ತು ಖರೀದಿಗೆ ನಿರ್ಬಂಧ ಹೇರಿರುವ ಅಧಿಸೂಚನೆಯಲ್ಲಿ ಬಳಸಿರುವ ಭಾಷೆಯನ್ನು ಬದಲಿಸಲಾಗುವುದು. ಅಧಿಸೂಚನೆಗೆ ಆದಷ್ಟು ಬೇಗನೆ ತಿದ್ದುಪಡಿ ತಂದು, ಆ ಮೂಲಕ ಎಲ್ಲ ಅನುಮಾನಗಳಿಗೂ ತೆರೆ ಎಳೆಯಲಾಗುವುದು ಎಂದು ಕೇಂದ್ರ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.

Advertisement

ಅಧಿಸೂಚನೆಯು ಭಾರೀ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವ, “ಜನರ ಆಹಾರದ ಆಯ್ಕೆಯ ಹಕ್ಕನ್ನು ಕಿತ್ತುಕೊಳ್ಳುವುದು ಅಥವಾ ಜಾನುವಾರುಗಳ ವಧೆಯಂಥ ಉದ್ಯಮಗಳಿಗೆ ತೊಂದರೆ ಉಂಟುಮಾಡುವುದು ಕೇಂದ್ರ ಸರಕಾರದ ಉದ್ದೇಶವಲ್ಲ. ನಾವು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಅನ್ವಯ ಕೆಲವು ನಿಯಮಗಳನ್ನು ತಂದಿದ್ದೇವೆ ಅಷ್ಟೆ. ಈಗ ಸಲಹೆಗಳನ್ನು ಆಧರಿಸಿ ಅದಕ್ಕೆ ಕೆಲವು ತಿದ್ದುಪಡಿಗಳನ್ನೂ ತರಲಿದ್ದೇವೆ,’ ಎಂದಿದ್ದಾರೆ. ಇದೇ ವೇಳೆ, ಈ ಕುರಿತು ಮಾತನಾಡಿರುವ ಸಿಪಿಎಂ ನಾಯಕ ಸೀತಾರಾಂ ಯೆಚೂರಿ, “ವೈವಿಧ್ಯತೆಯಿರುವ ಜನರ ಆಹಾರದ ಹಕ್ಕಿನ ಬಗ್ಗೆ ಚಿಂತೆ ಮಾಡುವ ಬದಲು ಸರಕಾರವು ಯುವಕರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಿ,’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next