Advertisement

ಕೈ’ಬಿಟ್ಟ ಶಾಸಕ ಶಂಕರ್‌ ನಡೆ ಎತ್ತ ಕಡೆ?

07:36 AM Mar 27, 2019 | Team Udayavani |

ರಾಣಿಬೆನ್ನೂರು ಕ್ಷೇತ್ರದ ಶಾಸಕ ಆರ್‌. ಶಂಕರ್‌ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸುತ್ತಾರೆ, ಅವರ ಚಿತ್ತ ಎತ್ತ ಕಡೆ ಎಂಬುದು ಕುತೂಹಲ ಕೆರಳಿಸಿದೆ.

Advertisement

ಆರ್‌.ಶಂಕರ್‌ ಕಳೆದ ಲೋಕಸಭೆ ಚುನಾವಣೆ ವೇಳೆ ಶಾಸಕರಾಗಿರಲಿಲ್ಲ. ಆಗ ಅವರು, ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕೆಪಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಇದ್ದಾಗ
ಸರ್ಕಾರ ರಚನೆ ವೇಳೆ ಶಾಸಕ ಆರ್‌. ಶಂಕರ್‌ ಬಿಜೆಪಿ ಸರ್ಕಾರ ರಚಿಸಬಹುದು ಎಂದು ಬೆಳಗ್ಗೆ ಬಿಜೆಪಿಗೆ ಬೆಂಬಲ ಸೂಚಿಸಿ, ಸಂಜೆ ಕಾಂಗ್ರೆಸ್‌ -ಜೆಡಿಎಸ್‌ ಸರ್ಕಾರ ರಚಿಸುವ ಸಾಧ್ಯತೆ ಗೊತ್ತಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು.ಬಳಿಕ ಸರ್ಕಾರದಲ್ಲಿ ಅರಣ್ಯ ಸಚಿವರೂ ಆಗಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಅವರಿಂದ ಸಚಿವ ಸ್ಥಾನ ವಾಪಸ್‌ ಪಡೆಯಿತು. ಇದರಿಂದ ಬೇಸತ್ತ ಶಂಕರ್‌ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದರು. ಬಳಿಕ ಅವರು ಬೇರೆ
ಯಾವ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ. ಹೀಗಾಗಿ ಅವರ ಒಲವು ಯಾವ ಕಡೆ ಎಂಬಕುತೂಹಲ ಮೂಡಿಸಿದೆ.

ಕುರುಬ  ಸಮುದಾಯಕ್ಕೆ ಸೇರಿದ ಶಂಕರ್‌ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಕೆ.ಬಿ. ಕೋಳಿವಾಡ ಅವರನ್ನು ಮಣಿಸಿ ಶಾಸಕರಾದವರು. ಕ್ಷೇತ್ರದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಅಭಿಮಾನಿಗಳು ಸಹ ಅವರ ನಿರ್ಧಾರದ ನಿರೀಕ್ಷೆಯಲ್ಲಿದ್ದಾರೆ.

ಶಂಕರ್‌ ಮತಗಳ ಮೇಲೆ ಕಣ್ಣು ಶಾಸಕರಾಗಿರುವ ಶಂಕರ್‌ ಕ್ಷೇತ್ರದಲ್ಲಿ ತಮ್ಮದೇ
ಪ್ರಭಾವಹೊಂದಿರುವುದರಿಂದ  ಅವರ ಹಿಡಿತದಲ್ಲಿರುವ ಮತಗಳನ್ನು ಸೆಳೆಯಲು
ಬಿಜೆಪಿ ಹಾಗೂ ಕಾಂಗ್ರೆಸ್‌ ಹವಣಿಸುತ್ತಿವೆ. ಎರಡೂ ಪಕ್ಷದವರು ಶಂಕರ್‌
ಮತಗಳ ಮೇಲೆ ಕಣ್ಣಿಟ್ಟಿವೆ. ಆದರೆ, ಶಂಕರ್‌ ಮಾತ್ರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.

ಎಚ್‌.ಕೆ. ನಟರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next