ಪಣಜಿ: ಗೋವಾದಲ್ಲಿ ಸದ್ಯ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಕೂಡ, ಕೋವಿಡ್ ಮೂರನೇಯ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕರ್ಫ್ಯೂ ಕಾಲಾವಧಿಯನ್ನು ಇನ್ನೂ ಒಂದು ವಾರದ ವರೆಗೆ ವಿಸ್ತರಣೆ ಮಾಡಲಾಗಿದೆ.
ಆಗಸ್ಟ್ 16 ರಂದು ಬೆಳಿಗ್ಗೆ 7 ಗಂಟೆಯ ವರೆಗೆ ರಾಜ್ಯದಲ್ಲಿ ಕರ್ಫ್ಯೂ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಕರ್ಫ್ಯೂ ಕಾಲಾವಧಿ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಯಾವುದೇ ಹೊಸ ವಿನಾಯಿತಿಯನ್ನು ನೀಡಿಲ್ಲ. ರಾಜ್ಯದಲ್ಲಿ ಕ್ಯಾಸಿನೊ, ಸಭಾಗೃಹ, ಕಮ್ಯುನಿಟಿ ಹಾಲ್, ರಿವರ್ ಕ್ರೂಜ್, ವಾಟರ್ ಪಾರ್ಕ್, ಸ್ಪಾ, ಮಸಾಜ್ ಪಾರ್ಲರ್, ಸಿನೆಮಾ ಹಾಲ್, ಮಲ್ಟಿಪ್ಲೆಕ್ಸ್, ಶಾಪಿಂಗ್ ಮಾಲ್‍ನಲ್ಲಿನ ಮನೋರಂಜನಾ ಝೋನ್ ತೆರೆಯಲು ಸರ್ಕಾರ ಇದುವರೆಗೂ ಪರವಾನಗಿ ನೀಡಿಲ್ಲ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಕೂಡ ಸಾವನ್ನಪ್ಪುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಆಗಸ್ಟ್ 16 ರ ವರೆಗೆ ರಾಜ್ಯದಲ್ಲಿ ಕರ್ಫ್ಯೂ ಕಾಲಾವಧಿ ವಿಸ್ತರಣೆ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ: ಶೇಕಡಾ 99.9 ವಿದ್ಯಾರ್ಥಿಗಳು ಪಾಸ್, ಓರ್ವ ಮಾತ್ರ ಫೇಲ್