ಅಫಜಲಪುರ: ತಂತ್ರಜ್ಞಾನ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳು ಶಿಕ್ಷಣ ಕ್ಷೇತ್ರದಲ್ಲಿಯೂ ಪ್ರಭಾವ ಬೀರುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರ ನೀಡುವುದು ಮುಖ್ಯವಾಗಿದೆ ಎಂದು ಶ್ರೀ ಬಸವರಾಜೇಂದ್ರ ಮಹಾ ಸ್ವಾಮೀಜಿ ನುಡಿದರು.
ಕರಜಗಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವತಿಯಿಂದ ನೀಡಿರುವ ಡಿಜಿಟಲ್ ಸ್ಮಾರ್ಟ್ ಬೋರ್ಡ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದುವರಿದ ನಗರ ಪ್ರದೇಶದಲ್ಲಿನ ಮಕ್ಕಳಿಗೆ ಸಿಗುವ ಸೌಲಭ್ಯಗಳು ಗ್ರಾಮೀಣ ಮಟ್ಟದ ಮಕ್ಕಳಿಗೂ ದೊರೆಯಲಿ ಎನ್ನುವ ದೃಷ್ಟಿಕೋನದಡಿ ಸರ್ಕಾರದ ಮಹತ್ವದ ಯೋಜನೆ ಅದ್ಭುತವಾಗಿದೆ ಎಂದರು.
ಸಮಗ್ರ ಮಾನವ ಹಕ್ಕುಗಳ ಸಂರಕ್ಷಣಾ ಸಂಘದ ಸಂಸ್ಥಾಪಕ ಅಧ್ಯಕ್ಷ ಸಾಸಿ ಬೇನಕನಹಳ್ಳಿ ಮಾತನಾಡಿ, ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಂಯಮ ಮತ್ತು ಉತ್ತಮ ಮೌಲ್ಯ ಅಳವಡಿಸಿಕೊಂಡು ಗುರಿ ಸಾಧನೆ ಮಾಡಬೇಕು ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಭಗವಂತರಾಯ ಅಳ್ಳಗಿ, ಮಣ್ಣೂರ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ಬಾಕೆ, ಬಿಜೆಪಿ ಮುಖಂಡರಾದ ರಾಜುಕುಮಾರ ಜಿಡ್ಡಗಿ, ರಾಮಣ್ಣಾ ನಾಯೊRàಡಿ, ಸಿದ್ಧರಾಮ ಪುಲಾರಿ, ಓಂಕಾರ, ಮಲಕಣ್ಣಾ ಪರೀಟ, ಶರಣಗೌಡ, ಬಸವರಾಜ ಪುಲಾರಿ, ಹರೀಶ್ ಪೋದ್ದಾರ, ಗುರುಶಾಂತ ಅಳ್ಳಗಿ, ಶವರಸಿದ್ಧ ಜಮಾದಾರ, ಅಂದಣ್ಣ ಬಿರಾದಾರ, ಶ್ರೀಶೈಲ ಅಳ್ಳಗಿ, ವಿಠuಲ ಅಲಗುಂಡಿ, ಮಹೇಶ ಹಾಲಳ್ಳಿ ಇನ್ನಿತರರು ಇದ್ದರು