Advertisement

ಸಾಂಸ್ಕೃತಿಕ ಕಾರ್ಯಕ್ರಮ ಹೆಚ್ಚು ನಡೆಯಲಿ

05:51 PM Mar 28, 2022 | Team Udayavani |

ರಾಯಚೂರು: ಸಂಗೀತ, ವೀರಗಾಸೆ ತುಂಬಾ ಸೊಗಸಾದ ಕಲಾ ಪ್ರಕಾರಗಳು. ಅದರಂತೆ ರಂಗಭೂಮಿ ಕೂಡ ಜನರನ್ನು ಮನರಂಜಿಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಆರ್‌ಟಿಪಿಎಸ್‌ ಮುಖ್ಯ ಇಂಜಿನಿಯರ್‌ ಸಿದ್ದಗಂಗಯ್ಯ ಅಭಿಪ್ರಾಯ ಪಟ್ಟರು.

Advertisement

ತಾಲೂಕಿನ ಶಕ್ತಿನಗರದಲ್ಲಿ ದೇವಸುಗೂರಿನ ಡಾ| ಬಾಬು ಜಗಜೀವನ್‌ರಾಂ ರಂಗನಿರಂತರ ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂಗೀತ ಜಾನಪದ ವೀರಗಾಸೆ ನೃತ್ಯ ಪ್ರದರ್ಶನ ಹಾಗೂ ವೆಂಕಟ ನರಸಿಂಹಲು ತಂಡದಿಂದ ಹಾಸ್ಯಭರಿತ ನಾಟಕ ಕಳ್ಳ ಗುರು ಸುಳ್ಳ ಶಿಷ್ಯ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯವಾಗಿ ಇಂಥ ಕಾರ್ಯಕ್ರಮ ನಿರಂತರ ನಡೆಯಬೇಕು. ಜನರು ಒಟ್ಟೊಟ್ಟಿಗೆ ಸೇರಬೇಕೆಂದರೆ ಇಂಥ ಸಾಂಸ್ಕೃತಿಕ ಕಾರ್ಯಕ್ರಮ ಹೆಚ್ಚು-ಹೆಚ್ಚು ಆಯೋಜನೆ ಮಾಡಬೇಕು ಎಂದರು.

ಆರ್‌ಟಿಪಿಎಸ್‌ ನೌಕರರ ಸಂಘದ ಕಾರ್ಯದರ್ಶಿ ವೆಂಕನಗೌಡ ಮಾತನಾಡಿ, ಈ ಕಲಾ ಸಂಸ್ಥೆ ಸಾಂಸ್ಕೃತಿಕ ನಡೆಸಿಕೊಡುವ ಸಂಗೀತ, ನೃತ್ಯ, ನಾಟಕಗಳನ್ನು ಜನ ನೋಡಿ ಆನಂದಿಸುತ್ತಾರೆ. ಜನರಿಗೆ ಖುಷಿ ನೀಡಿದರೆ ಅಂಥ ಕಾರ್ಯಕ್ರಮಗಳ ಉದ್ದೇಶ ಈಡೇರಿದಂತೆ ಎಂದರು.

ಕೆಪಿಸಿ ಎಂಪ್ಲಾಯಿಸ್‌ ಯೂನಿಯನ್‌ ಅಧ್ಯಕ್ಷ ಜಗದೀಶ್‌ ಸಮಾಳ ಮಾತನಾಡಿ, ಕೋವಿಡ್‌ ಕಾರಣಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಗಿತಗೊಂಡಿದ್ದವು. ಈಗಷ್ಟೇ ಮತ್ತೆ ಶುರುವಾಗುತ್ತಿವೆ. ಕಲಾವಿದರು ಬಹಳ ಸಂಕಷ್ಟದಲ್ಲಿದ್ದು, ಇಂಥ ಕಲಾವಿದರನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು ಎಂದರು.

Advertisement

ಆರ್‌ಟಿಪಿಎಸ್‌ ಎಸ್ಸಿ, ಎಸ್ಟಿ ನೌಕರರ ಸಂಘದ ಕಾರ್ಯದರ್ಶಿ ಭೀಮಯ್ಯ ನಾಯಕ್‌ ಮಾತನಾಡಿದರು. ನಿವೃತ್ತ ನೌಕರ ಸತ್ಯನಾಥ್‌, ಭೀಮಣ್ಣ ಗಂಟೆ ಸೇರಿ ಇತರರಿದ್ದರು. ಸೂಗುರೇಶ್ವರ ಜಾನಪದ ವೀರಗಾಸೆ ನೃತ್ಯ ಪ್ರದರ್ಶನ ಹಾಗೂ ಸಂಗೀತ ಪ್ರದರ್ಶನ ಹಾಗೂ ಕಳ್ಳ ಗುರು ಸುಳ್ಳು ಶಿಷ್ಯ ನಾಟಕ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next