Advertisement

ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

09:21 PM Jul 23, 2019 | Lakshmi GovindaRaj |

ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತ ವಿಜಯಾನಂದ ಅವರ ಚಾತುರ್ಮಾಸದ ಪ್ರಯುಕ್ತ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳ ನೃತ್ಯ, ಗಾಯನ ಮತ್ತು ಯೋಗ ಮನ ಸೊರೆಗೊಂಡವು.

Advertisement

ರಂಗರಾವ್‌ ಮೆಮೋರಿಯಲ್‌ ಸರ್ಕಾರಿ ಪಾಠಶಾಲೆ, ಕಿವುಡ ಮತ್ತು ಮೂಗರ ಸರ್ಕಾರಿ ಪಾಠಶಾಲೆ, ಸಾಯಿರಂಗ ರೆಸಿಡೆನ್ಶಿಯಲ್‌ ಕಿವುಡರ ವಿದ್ಯಾ ಸಂಸ್ಥೆ, ಪುಟ್ಟಿರಮ್ಮ ರೆಸೆಡೆಶ್ಶಿಯಲ್‌ ಕಿವುಡ ಹೆಣ್ಣು ಮಕ್ಕಳ ಪಾಠಶಾಲೆ, ರೋಟರಿ ವೆಸ್ಟ್‌ ಮತ್ತು ಪೆರೆಂಟ್ಸ್‌ ಅಸೋಸಿಯೇಷನ್‌ ಕಿವುಡ ಮಕ್ಕಳ ಟ್ರಸ್ಟ್‌ನ ಸೇರಿದಂತೆ ನಗರದ ನಾನಾ ಶಾಲೆಯ ವಿಶೇಷ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಕಾರ್ತ್ಯವೀರ್ಯಾರ್ಜುನ ನೃತ್ಯ ರೂಪಕ, ಭಜನೆ, ಗುರು ಮಹಿಮೆ ಗೀತ ಗಾಯನ, ಶ್ರೀಕೃಷ್ಣ ರಾಧಾ ನೃತ್ಯ, ದಶವಾತರ ನೃತ್ಯ, ರಾಮಾಯಣದ ನೃತ್ಯ ರೂಪಕ, ಗಣೇಶ ಗೀತೆ ಗಾಯನ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಚ್ಚುಗಗೆ ಪಾತ್ರವಾದವು.

ಇದೇ ವೇಳೆ ಮಕ್ಕಳಿಗೆ ಆಶ್ರಮದ ವಿಶ್ವಂ ಮೂಸಿಯಂ, ಸುಖವನದ ಪಕ್ಷಿಗಳ ಪರಿಚಯ ಮಾಡಲಾಯಿತು. 527 ಮಕ್ಕಳಿಗೆ ನೃತ್ಯ, ಸಂಗೀತ, ಯೋಗಾಸನ ಹೇಳಿಕೊಡಲಾಯಿತು. ವಿಜಯಾನಂದ ದತ್ತ ತೀರ್ಥ ಸ್ವಾಮೀಜಿ ಅವರು ಮಕ್ಕಳಿಗೆ ಸ್ಕೂಲ್‌ ಬ್ಯಾಗ್‌ ವಿತರಿಸಿ ಆಶೀರ್ವಚನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next