Advertisement
ಅಂತಹ ವ್ರತವನ್ನು ಆಚರಣೆ ಮಾಡಿದ ಆ ದಂಪತಿಗಳು ದೈವತ್ವ ಪಡೆದ ಒಂದು ಸ್ತ್ರೀ ಸಂತಾನವನ್ನು ಪಡೆದು ಇಡೀ ಜಗತ್ತಿಗೇ ಮಾತೃ ಸ್ವರೂಪಿಯಾದ ಗೌರೀ ದೇವಿಯನ್ನು ಪಡೆದರು. ಆಚಾರ್ಯತ್ರಯರಾದ ಮಧ್ವ, ಶಂಕರ, ರಾಮಾನುಜರು ಚತುರ್ವೇದಗಳನ್ನೇ ಆಧಾರವಾಗಿಟ್ಟುಕೊಂಡು ಅವರವರ ದೇಶ, ಕಾಲ, ಪಾತ್ರಕ್ಕನುಗುಣವಾದ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರಲು ಸಂದೇಶ ನೀಡಿದರು.
Related Articles
Advertisement
ಶಿವನ ರಾಣಿ ಪಾರ್ವತಿಯ ರೂಪಾಂತರವೇ ಗೌರಿ. ಮೊದಲು ಗೌರಿ, ಅನಂತರ ದುಷ್ಟ ಸಂಹಾರಕ್ಕಾಗಿ ದೇವತೆಗಳ ಪ್ರಾರ್ಥನೆಯಂತೆ ಗೌರಿ ಪಾರ್ವತಿಯಾದಳು. ಪಾರ್ವತಿಯ ವರ್ಣ ಕಪ್ಪು. ಶಿವನು ಪಾರ್ವತಿಯನ್ನು ಕಾಳಿ ಎಂದು ಕರೆದನು. ಪಾರ್ವತೀ ದೇವಿ ಭದ್ರಕಾಳಿಯಾಗಿ ಶುಂಭ ನಿಶುಂಭರ ವಧೆಯನ್ನು ಮಾಡಿದಳು. ದಕ್ಷಯಜ್ಞದಲ್ಲಿ ದಕ್ಷನ ಮಗಳಾಗಿ ಜನಿಸಿದ ದಾಕ್ಷಾಯಣಿಯೇ ಗೌರಿ. ಒಮ್ಮೆ ದಕ್ಷನು ಒಂದು ಪುತ್ರಕಾಮೇಷ್ಟಿಯಾಗದಲ್ಲಿ ಶಿವನನ್ನು ಆಹ್ವಾನಿಸದೆ ಅವಮಾನಿಸುತ್ತಾನೆ.
ಆದರೂ ಮಗಳು ದಾಕ್ಷಾಯಣಿಯು ಗಂಡನ ಮಾತನ್ನು ಮೀರಿ ದಕ್ಷ ಯಜ್ಞಕ್ಕೆ ಹೊರಟು ಶಿವನ ಅನುಮತಿಗಾಗಿ ಸ್ತುತಿಸಿದಳು. ಶಿವನು ಮೌನವಾಗಿ ಇರುವುದನ್ನೇ “ಮೌನಂ ಸಮ್ಮತಿ ಲಕ್ಷಣಂ’ ಎಂದುಕೊಂಡು ಯಜ್ಞದಲ್ಲಿ ಪಾಲ್ಗೊಳ್ಳಲು ತವರುಮನೆಗೆ ಬರುತ್ತಾಳೆ. ಅಲ್ಲಿ ತೀವ್ರತರನಾದ ಅವಮಾನವಾಗುತ್ತದೆ. ಇದರಿಂದ ಮನನೊಂದ ಗೌರಿಯು ತನ್ನ ಭ್ರೂಮಧ್ಯದಿಂದ ಅಗ್ನಿಯನ್ನು ದೃಷ್ಟಿಸಿ ತನ್ನನ್ನು ದಹಿಸಿಕೊಂಡಳು. ಈ ವಿಚಾರ ಶಿವನಿಗೆ ನಾರದರು ತಿಳಿಸುತ್ತಾರೆ.
ಆಗ ಶಿವನು ವೀರಭದ್ರನಾಗಿ ದಕ್ಷನ ಯಜ್ಞಶಾಲೆಗೆ ಬಂದು ದಕ್ಷನ ಶಿರಛೇದನ ಮಾಡಿ, ಅರೆಬೆಂದ ಗೌರಿಯನ್ನು ಹೆಗಲಿನಲ್ಲಿ ಇರಿಸಿಕೊಂಡು ಬರುತ್ತಾನೆ. ಪ್ರಾಗ್ಜೋತಿಷ ಪುರಕ್ಕೆ (ಈಗಿನ ಅಸ್ಸಾಂ ರಾಜ್ಯ) ಬಂದು ಕಾಮಾಕ್ಯಕ್ಕೆ ತಲುಪುವಾಗ ಗೌರಿಯ ದೇಹ ಪೂರ್ಣ ಸುಟ್ಟಿದ್ದನ್ನು ನೋಡಿ ಅಲ್ಲೇ ಎಸೆದು, ವೈರಾಗ್ಯಮೂರ್ತಿಯಾಗಿ ಉಮಾನಂದ ಎಂಬಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಮುಂದೆ ತಾರಕಾಸುರನ ಸಂಹಾರಕ್ಕಾಗಿ ಕಾರ್ತಿಕೇಯನ ಅವತಾರಕ್ಕಾಗಿ ದೇವತೆಗಳು ಪ್ರಾರ್ಥಿಸುತ್ತಾರೆ.
ಆಗ ಶಿವನ ಅನುಗ್ರಹವಾಗಿ ಪಾರ್ವತಿಯ ಸ್ವಯಂವರವೂ ಆಗಿ ಕಾರ್ತಿಕೇಯನ ಅವತಾರವೂ ಆಗುತ್ತದೆ. ಕಾರ್ತಿಕೇಯನೇ ಸುಬ್ರಹ್ಮಣ್ಯ. ಸ್ಕಂದನೆಂದೂ ಹೆಸರಿದೆ. ಈ ಸುಬ್ರಹ್ಮಣ್ಯನಿಂದ ತಾರಕಾಸುರನ ಸಂಹಾರವಾಗಿ ಲೋಕ ಸುಭಿಕ್ಷವೂ ಆಗುತ್ತದೆ. ಅಂತಹ ದೇವರಿಗೆ ಜನ್ಮ ಕೊಟ್ಟವಳೇ ಪಾರ್ವತಿ.
ದಾಕ್ಷಾಯಣಿಯು ಗೌರಿಯಾಗಿ, ಅನಂತರ ಪಾರ್ವತೀ ದೇವಿಯಾಗಿ ಜಗತ್ತನ್ನು ರಕ್ಷಿಸಿದ ಮಹಾ ಮಾತೆ. ಅವಳನ್ನೇ ಗೌರೀದೇವಿಯಾಗಿ ಹರಿತಾಲಿಕಾ ವ್ರತ, ಹಬ್ಬದ ಮೂಲಕ ಭಕ್ತರು ಆರಾಧಿಸಿ ಕೃತಾರ್ಥರಾದರು. ಅದು ಮನ್ವಂತರದಿಂದ ಮನ್ವಂತರದ ವರೆಗೂ ನಡೆಯುತ್ತಾ ಬಂದಿದೆ.
ಇಂದಿಗೂ ಹರಿತಾಲಿಕಾ ವ್ರತವು ಗೌರೀ ಹಬ್ಬವಾಗಿ ಮನೆ ಮನೆಯಲ್ಲಿ ಮಾತೆಯ ಆರಾಧನೆ ನಡೆಯುತ್ತದೆ. ಪೂಜಾಂತ್ಯದಲ್ಲಿ ಗೌರಿಯನ್ನು ಸರ್ವಬಾಧಾಪ್ರಶಮನಂ ತ್ರೆçಲೋಕ್ಯಾಖೀಲೇಶ್ವರೀ ಏವ ಮೇವ ತ್ವಯಾ ಕಾರ್ಯಮಸ್ಮಧೈರಿ ವಿನಾಶನಂ ಎಂದು ಪ್ರಾರ್ಥನೆ ಮಾಡಿದರೆ ಸಕಲ ಪೀಡೆಗಳೂ ಪರಿಹಾರವಾಗುತ್ತವೆ. ನಾವೆಲ್ಲರೂ ಆ ಮಹಾತಾಯಿಯ ಅನುಗ್ರಹ ಪಡೆಯೋಣ.
– ಪ್ರಕಾಶ್ ಅಮ್ಮಣ್ಣಾಯ, ಕಾಪು