Advertisement

Tulu Cinema; ಕರಾವಳಿಯಾದ್ಯಂತ “ಅನರ್‌ಕಲಿ’ ತುಳು ಸಿನೆಮಾ ತೆರೆಗೆ

12:18 AM Aug 24, 2024 | Team Udayavani |

ಮಂಗಳೂರು: ತುಳು ಸಿನೆಮಾ ರಂಗಕ್ಕೆ ಹೊಸ ರೂಪ ನೀಡುವ ನೆಲೆಯಲ್ಲಿ ಮೂಡಿಬಂದ ಲಕುಮಿ ಸಿನಿ ಕ್ರಿಯೇಷನ್‌ ಮತ್ತು ಲೋ ಬಜೆಟ್‌ ಪ್ರೊಡಕ್ಷನ್‌ ನಿರ್ಮಾಣದ ಹರ್ಷಿತ್‌ ಸೋಮೇಶ್ವರ ನಿರ್ದೇಶನದ “ಅನರ್‌ಕಲಿ’ ತುಳು ಸಿನೆಮಾ ಶುಕ್ರವಾರ ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್‌, ಭಾರತ್‌ ಸಿನೆಮಾಸ್‌, ಸಿನೆಪೊಲಿಸ್‌, ಸುರತ್ಕಲ್‌ನಲ್ಲಿ ನಟರಾಜ್‌, ಸಿನೆಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಭಾರತ್‌ ಸಿನೆಮಾಸ್‌, ಉಡುಪಿಯಲ್ಲಿ ಭಾರತ್‌ ಸಿನೆಮಾಸ್‌, ಮಣಿಪಾಲದಲ್ಲಿ ಭಾರತ್‌ ಸಿನೆಮಾಸ್‌, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್‌, ಪುತ್ತೂರಿನಲ್ಲಿ ಭಾರತ್‌ ಸಿನೆಮಾಸ್‌ನಲ್ಲಿ ಬಿಡುಗಡೆಗೊಂಡಿತು.

Advertisement

ಮಂಗಳೂರಿನ ಭಾರತ್‌ ಸಿನೆಮಾಸ್‌ನಲ್ಲಿ ಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್‌ ಗಟ್ಟಿ ಕಾಪಿಕಾಡ್‌ ಅವರು, ತುಳು ಭಾಷೆಯ ಉಳಿವಿಗಾಗಿ ತುಳು ನಾಟಕ ಮತ್ತು ಸಿನೆಮಾಗಳ ಪಾತ್ರ ಹೆಚ್ಚಿನದ್ದು. ಅನರ್‌ಕಲಿ ಸಿನೆಮಾ ಚೆನ್ನಾಗಿದೆ ಎಂದು ಪ್ರೇಕ್ಷಕರು ಬೆನ್ನು ತಟ್ಟಿದಾರೆ. ಒಳ್ಳೆಯ ಪ್ರಯತ್ನವನ್ನು ತುಳುನಾಡಿನ ಪ್ರೇಕ್ಷಕರು ಖಂಡಿತ ಬೆಂಬಲಿಸುತ್ತಾರೆ. ಎಲ್ಲರೂ ಸಿನೆಮಾ ನೋಡಿ ಪ್ರೋತ್ಸಾಹಿಸಿ ಎಂದರು.

ಅರವಿಂದ್‌ ಬೋಳಾರ್‌ ಮಾತನಾಡಿ, ತುಳುವರು ಥಿಯೇಟರ್‌ಗೆ ಬಂದು ಸಿನೆಮಾ ನೋಡಿ ಗೆಲ್ಲಿಸಿದಲ್ಲಿ ನಿರ್ಮಾಪಕರ ಶ್ರಮ ಸಾರ್ಥಕವಾಗುತ್ತದೆ ಎಂದರು.

ಪ್ರಮುಖರಾದ ಕಿಶೋರ್‌ ಡಿ.ಶೆಟ್ಟಿ, ಪ್ರಕಾಶ್‌ ಪಾಂಡೇಶ್ವರ್‌, ನವನೀತ್‌ ಶೆಟ್ಟಿ, ಆರ್‌.ಧನರಾಜ್‌, ಭೋಜರಾಜ ವಾಮಂಜೂರು, ಚಂದ್ರಶೇಖರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಲಂಚುಲಾಲ್‌, ವಿಜಯ್‌ ಶೋಭರಾಜ್‌ ಪಾವೂರು, ಮಧುರಾ ಆರ್‌.ಜೆ., ಪುರುಷೋತ್ತಮ ಭಂಡಾರಿ ಅಡ್ಯಾರ್‌, ಪ್ರದೀಪ್‌ ಆಳ್ವ ಕದ್ರಿ, ಗಿರೀಶ್‌ ಎಂ. ಶೆಟ್ಟಿ ಕಟೀಲು, ದಿವಾಕರ ಶೆಟ್ಟಿ, ಮೋಹನ್‌ ಕೊಪ್ಪಲ, ಇಸ್ಮಾಯಿಲ್‌ ಮೂಡುಶೆಡ್ಡೆ, ತಾರಾನಾಥ್‌ ಶೆಟ್ಟಿ ಬೋಳಾರ್‌, ಬಾಳ ಜಗನ್ನಾಥ ಶೆಟ್ಟಿ ಬಾಳ, ಲೋಕಯ್ಯ ಶೆಟ್ಟಿ ಮುಂಚೂರು, ಯಶೋದಾ ಸಂಜೀವ ಕೋಟ್ಯಾನ್‌, ರಜನೀಶ್‌ ಕೋಟ್ಯಾನ್‌ ಮುಂತಾದವರು ಉಪಸ್ಥಿತರಿದ್ದರು. ಮಧುರಾ ಆರ್‌.ಜೆ. ನಿರೂಪಿಸಿದರು.

ಅನರ್‌ಕಲಿ ಸಂಪೂರ್ಣ ಹಾಸ್ಯಭರಿತ ಚಿತ್ರ. ಕಡಿಮೆ ಬಜೆಟ್‌ನಲ್ಲಿ ಮಾಡಿದ ದೊಡ್ಡ ಸಿನಿಮಾ. ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ದೀಪಕ್‌ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್‌ ಬೊಳ್ಳೂರು, ಸುಜಾತ ಶಕ್ತಿನಗರ, ನಮಿತಾ ಕುಳೂರು ಮುಖ್ಯ ಭೂಮಿಕೆಯಲ್ಲಿದ್ದು, ನಾಯಕ ನಟನಾಗಿ ವಿಜಯ್‌ ಶೋಭರಾಜ್‌ ಪಾವೂರು, ನಾಯಕಿಯಾಗಿ ಮಧುರಾ ಆರ್‌. ಜೆ. ಅಭಿನಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next