Advertisement
ಫೆ. 23 ರಂದು ಅಪರಾಹ್ನ 2 ರಿಂದ ಕುರ್ಲಾ ಪೂರ್ವದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ ನಿಧಿ ಸಂಗ್ರಹದ ಅಂಗವಾಗಿ ಸಾಂಸ್ಕೃತಿಕ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯಲ್ಲಿ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮಹಿಳಾ ವಿಭಾಗದ ಕಠಿಣ ಪರಿಶ್ರಮದೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಅತಿಥಿಯಾಗಿ ಪಾಲ್ಗೊಂಡ ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಶ್ ಬಿ. ಶೆಟ್ಟಿ ಅವರು ಮಾತನಾಡಿ, ಮಹಾರಾಷ್ಟ್ರ ಮಣ್ಣಿನಲ್ಲಿ ಕನ್ನಡ ತೇರನ್ನು ಎಳೆಯುವ ಕಾರ್ಯವನ್ನು ಸಂಘವು ಮಾಡುತ್ತಿದೆ. ಕನ್ನಡಿಗರಾದ ನಾವೆಲ್ಲರು ಒಂದಾಗಿ ಇಂತಹ ಸಂಸ್ಥೆಗೆ ಪ್ರೋತ್ಸಾಹ ನೀಡಬೇಕು. ತಿಲಕ್ ನಗರ ಪರಿಸದಲ್ಲಿರುವ ಹೆಚ್ಚಿನ ಕನ್ನಡಿಗರನ್ನು ಒಂದುಗೂಡಿಸುವ ಮಹತ್ತರ ಸಾಧನೆ ಈ ಸಂಸ್ಥೆ ಮಾಡಿದೆ ಎಂದರು. ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಇವರು ಮಾತನಾಡಿ, ಸಂಘ-ಸಂಸ್ಥೆಗಳಿಗೆ ಸ್ವಂತ ಕಚೇರಿ ಮತ್ತು ಭವನಗಳಿದ್ದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಆದಷ್ಟು ಬೇಗ ಸಂಸ್ಥೆಗೊಂದು ಕಚೇರಿ ನಿರ್ಮಾಣಗೊಂಡು ಇವರ ಸಾಮಾಜಿಕ ಕಾರ್ಯಗಳಿಗೆ ಸಹಕಾರಿಯಾಗಲಿ ಎಂದು ನುಡಿದರು.
Related Articles
Advertisement
ಅತಿಥಿಗಳಾಗಿ ಉಪಸ್ಥಿತರಿದ್ದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್. ಬಂಗೇರ, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ, ದೇವಾಡಿಗ ಸಂಘ ಮುಂಬಯಿ ಉಪಾಧ್ಯಕ್ಷ ಸುರೇಶ್ ಎಸ್. ರಾವ್ ಇವರು ಸಂದಭೋìಚಿತವಾಗಿ ಮಾತನಾಡಿ ಸಂಸ್ಥೆ ಶುಭಹಾರೈಸಿದರು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಟಿ. ಆರ್. ಶೆಟ್ಟಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಸಮಾರಂಭದಲ್ಲಿ ದಾನಿಗಳನ್ನು ಹಾಗೂ ಪ್ರೋತ್ಸಾಹಕರನ್ನು ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದ ಸಾಧಕಿ ಸಮೀಕ್ಷಾ ಶೆಟ್ಟಿ, ಫ್ಯಾಶನ್ ಡಿಸೈನರ್ ಐಶ್ವರ್ಯಾ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಸತೀಶ್ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಅರುಣ್ ಕುಮಾರ್ ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಸಂಪತ್ ಎನ್. ಶೆಟ್ಟಿ, ಜತೆ ಕೋಶಾಧಿಕಾರಿ ಚಿತ್ರೇಶ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಾಗವೇಣಿ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶಿಲ್ಪಾ ಎಸ್. ಶೆಟ್ಟಿ, ಸ್ಥಾಪಕಾಧ್ಯಕ್ಷ ಶೇಖರ್ ಎನ್. ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ನ್ಯಾಯವಾದಿ ನಿತ್ಯಾನಂದ ಕೆ. ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಗೌರವ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಆರ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿಶೇಷ ಆಕರ್ಷಣೆಯಾಗಿ ಪ್ರಸಿದ್ಧ ಸಂಗೀತ ಕಲಾವಿದ ನಂದು ಕದಂ ಇವರಿಂದ ಆಕಿಯೋಂಕೆ ಝಾರೊಕೋಸೆ ಸಂಗೀತ ರಸಮಂಜರಿ, ಪ್ರಶಂಸ ಕಾಪು ತಂಡದ ಕಲಾವಿದರಿಂದ ಬಲೆ ತೆಲಿಪಾಲೆ, ಸಂಘದ ಸದಸ್ಯ ಬಾಂಧವರ ಮಕ್ಕಳಿಂದ, ಮಹಿಳಾ ವಿಭಾಗ, ಯುವ ವಿಭಾಗದವರಿಂದ ನೃತ್ಯ ವೈವಿಧ್ಯ ಇನ್ನಿತರ ವಿನೋದಾವಳಿಗಳು ನಡೆಯಿತು. ಪತ್ರಕರ್ತ ದಯಾ ಸಾಗರ್ ಚೌಟ ಅವರು ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಚಂದ್ರಹಾಸ್ ಎನ್. ಶೆಟ್ಟಿ ಅವರು ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗದ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ತುಳು-ಕನ್ನಡಿಗರು, ಸದಸ್ಯರು ಬಾಂಧವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ತುಳು-ಕನ್ನಡಿಗರ ಶ್ರೇಯೋಭಿ ವೃದ್ಧಿಗಾಗಿ ಸ್ಥಾಪನೆಗೊಂಡ ಈ ಸಂಸ್ಥೆಯು ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕೆ ಸಂಘದಲ್ಲಿರುವ ಕಾರ್ಯಕರ್ತರ ಪರಿಶ್ರಮವೇ ಕಾರಣ. ಆದಷ್ಟು ಬೇಗ ಸ್ವಂತ ಕಚೇರಿ ಹೊಂದುವುದರಲ್ಲಿ ಸಂದೇಹ ವಿಲ್ಲ. ಎಲ್ಲರು ಸಹಕರಿ ಸಿದರೆ ಜಯ ಸಿ. ಶೆಟ್ಟಿ ಅವರ ನೇತೃತ್ವದಲ್ಲಿ ಕಟ್ಟಡ ನಿರ್ಮಾಣ ಸಮಿತಿ ಯಶಸ್ವಿಯಾಗಲಿದೆ.
– ಐಕಳ ಹರೀಶ್ ಶೆಟ್ಟಿ , ಅಧ್ಯಕ್ಷರು, ವಿಶ್ವ ಬಂಟರ ಸಂಘಗಳ ಒಕ್ಕೂಟ ಪೆಸ್ತೂಮ್ ಸಾಗರ್ ಕನ್ನಡ ಸಂಘಕ್ಕೆ ಸ್ವಂತ ಕಚೇರಿಯೊಂದನ್ನು ಹೊಂದುವ ನಮ್ಮ ಕನಸಿಗೆ ದಾನಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಎಲ್ಲರ ಸಹಕಾರದಿಂದ ಶೇ. 50 ರಷ್ಟು ನಿಧಿ ಸಂಗ್ರಹ ಕಾರ್ಯ ಪೂರ್ಣಗೊಂ ಡಿದೆ. ಇನ್ನು ಎಲ್ಲರ ಪ್ರೋತ್ಸಾಹ ದೊರೆತರೆ ಶೀಘ್ರದಲ್ಲೆ ನಮ್ಮ ಕನಸು ನನಸಾಗಲಿದೆ ಎಂಬ ಆಶಯ ನಮಗಿದೆ. ಇಂದಿನ ಈ ಸಂಭ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ನೀಡಿದ ಬೆಂಬಲಕ್ಕೆ ಸದಾ ಋಣಿಯಾಗಿದ್ದೇನೆ.
– ಜಯ ಎ. ಶೆಟ್ಟಿ , ಕಾರ್ಯಾಧ್ಯಕ್ಷರು,ಕಟ್ಟಡ ನಿಧಿ ಸಂಗ್ರಹ ಸಮಿತಿ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘ
ಚಿತ್ರ-ವರದಿ : ಸುಭಾಷ್ ಶಿರಿಯಾ