Advertisement
ಭಾನುವಾರ ರಾತ್ರಿ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಭಜರಂಗದಳ ಹಾಗೂ ವಿಎಚ್‌ಪಿ ವತಿಯಿಂದ ದತ್ತಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಸಂಕೀ ರ್ತನ ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ಇಸ್ಲಾಮೀಕರಣ ಭ್ರಮೆಯಷ್ಟೇ: ಹಿಂದೂಗಳ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಂಡು ಹಲವರು ಆಳ್ವಿಕೆ ನಡೆಸಿ ನಮ್ಮ ಸಂಸ್ಕೃತಿ, ಸಂಪತ್ತನ್ನು ದೋಚುವ ಕೆಲಸ ಹಲವು ಶತಮಾನಗಳಿಂದ ನಡೆದುಕೊಂಡು ಬಂದಿದ್ದರೂ ಕೂಡ ಇಂದಿಗೂ ಯಶಸ್ವಿಯಾಗಿಲ್ಲ. ಅದೇ ರೀತಿ ಹಿಂದೂ ಸಮಾಜವನ್ನು ಇಸ್ಲಾಮೀಕರಣ ನಡೆಸುವುದು ಅಸಾಧ್ಯ ಎಂದರು.
ಹೋರಾಟಕ್ಕೆ ಮುಂದಾಗಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಸಗಾನಹಳ್ಳಿ ಹಿತೇಂದ್ರ ಮಾತನಾಡಿ, ದೇಶದಲ್ಲಿ ಬ್ರಿಟಿಷರ, ಒಡೆದು ಆಳುವ ನೀತಿಯಿಂದಾಗಿ ನಾವು ಇಂದಿಗೂ ಒಂದಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಹಿಂದೂಗಳಲ್ಲಿನ ಜಾತಿತಾರತಮ್ಯ ನೀತಿ ತೊಡೆದು ಒಂದಾಗಬೇಕು. ಹಿಂದೂ ಸಮಾಜ ಒಗ್ಗೂಡಿಸಲು ಹೋರಾಟ ನಡೆಸುತ್ತಿರುವ ವ್ಯಕ್ತಿಗಳ್ಯಾರು ಆರ್ಥಿಕವಾಗಿ ಶ್ರೀಮಂತರಲ್ಲ. ಅವರಿಗೆ ಆರ್ಥಿಕವಾಗಿ ಬಲಾಡ್ಯವಾಗಿರುವ ಹಿಂದೂ ಸಹೋದರರು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಗುರುವೇಗೌಡ ಕಲ್ಯಾಣ ಮಂಟ ಪದವರೆಗೆ ದತ್ತಾಮಾಲಾದಾರಿಗಳಿಂದ ಬೃಹತ್ ಮೆರವಣಿಗೆ ನಡೆಯಿತು. ಮಹಿಳೆಯರು ಮಕ್ಕಳು ಸಹ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಎಂ.ಎಸ್ ನಾಗೇಂದ್ರ ಸೇವಾ ಪ್ರತೀಷ್ಠಾನದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ದಲಿತ ಮುಖಂಡ ಮಳಲಿ ಶಿವಣ್ಣ, ನಿವೃತ್ತ ಕೃಷಿ ಅಧಿಕಾರಿ ಶ್ರೀನಿವಾಸ್, ಉದ್ಯಮಿ ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಕುಮಾರ್, ಹಿಂದೂ ಪರ ಸಂಘಟನೆಯ ಮುಖಂಡರಾದ ಕೌಶಿಕ್, ಶ್ರೀಜಿತ್,ಮಂಜು ಕಬ್ಬಿನಗದ್ದೆ,ಕಾರ್ತಿಕ್, ಧರ್ಮೇ ಶ್, ದುಷ್ಯಂತ್ , ಬಿಜೆಪಿ ಮುಖಂಡರಾದ ನಾರ್ವೆ ಸೋಮಶೇಖರ್, ಸಿಮೆಂಟ್ ಮಂಜುನಾಥ್, ಮಂಜುನಾಥ್ ಸಂ ಮುಂತಾದವರಿದ್ದರು.
ಭಯೋತ್ಪಾದನೆ ಮಟ್ಟ ಹಾಕಬೇಕು: ಪ್ರಪಂಚದಲ್ಲಿ ನೇಪಾಲ ಬಿಟ್ಟರೆ ಹಿಂದೂ ದೇಶವಿರೋದು ನಮ್ಮ ಭಾರತ ಮಾತ್ರ. ನಮ್ಮ ದೇಶದ ಏಕತೆಗೆ ಭಂಗ ಬಂದಾಗ ಒಂದಾಗಿ ಹೋರಾಟ ನಡೆಸದಿದ್ದರೆ ಉಳಿಗಾಲವಿಲ್ಲ. ಇತ್ತೀಚ್ಚಿನ ದಿನಗಳಲ್ಲಿ ಅನ್ಯ ಧರ್ಮಿಯರು ದಲಿತರನ್ನು ಎತ್ತಿ ಕಟ್ಟುವ ಮೂಲಕ ಹಿಂದೂ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಎಂದಿಗೂ ಜಾತಿ ಪದ್ಧತಿ ಇಲ್ಲ. ದಲಿತರು ಇದಕ್ಕೆ ಕಿವಿ ಗೊಡಬಾರದು. ಭಯೋತ್ಪಾದನೆ ಮೂಲಕ ಹಿಂದೂ ಸಮಾಜವನ್ನು ಬೆದರಿಸುವ ಕೆಲಸವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಕ್ಕರ್ ಬಾಂಬ್ ಸಿಡಿಸುವ ದೇಶದ್ರೋಹಿ ಕೆಲಸ ನಡೆಸಿದವರು ಹಾಗೂ ಅದಕ್ಕೆ ಸಹಕರಿಸಿದವರನ್ನು ಪತ್ತೆಮಾಡಿ ಶಿಕ್ಷೆ ವಿಧಿಸಬೇಕು. ಈ ಮೂಲಕ ಭಯೋತ್ಪಾದನೆ ಪರಿಣಾ ಮಕಾರಿಯಾಗಿ ಮಟ್ಟಹಾಕಲು ಸಾಧ್ಯ ಎಂದು ಸ್ವತಂತ್ರ್ಯ ಬಸವಲಿಂಗ ಶ್ರೀ ತಿಳಿಸಿದರು.