Advertisement

ಸಾಗುವಳಿ ಭೂಮಿ ದುರಸ್ತಿ ಕಾರ್ಯ

06:20 AM May 29, 2020 | Lakshmi GovindaRaj |

ಮಾಲೂರು: ತಾಲೂಕಿನಲ್ಲಿ ಸರ್ಕಾರ ದಿಂದ ರೈತರಿಗೆ ಮಂಜೂರು ಮಾಡಿರುವ ಸಾಗುವಳಿ ಭೂಮಿಯ ದುರಸ್ತಿ ಕಾರ್ಯ ಆಗಬೇಕಾಗಿದೆ. ಹೀಗಾಗಿ ಸ್ಥಳಕ್ಕೆ ತೆರಳಿ 1 ರಿಂದ 5 ಅಂಶಗಳ ದಾಖಲೆ ಸಿದಟಛಿ ಪಡಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಆದೇಶ ನೀಡಿದರು.

Advertisement

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕಿನ 52 ಕಂದಾಯ ವೃತ್ತಗಳ ಕಾರ್ಯದರ್ಶಿ ಮತ್ತು ನಿರೀಕ್ಷಕರ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ದಾಖಲೆ  ಗಳಲ್ಲಿ  ಸತ್ಯಾಂಶಗಳನ್ನು ಮರೆಮಾಚುವ ಪ್ರಯತ್ನ ಮಾಡಬೇಡಿ, ರೈತರ ಪಿ.ನಂಬರ್‌ಗಳ ದುರಸ್ತಿ ಕಾರ್ಯ ಶೀಘ್ರವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

ಕಳೆದ ಎರಡು ದಿನಗಳಿಂದ ತಾಲೂ  ಕಾದ್ಯಂತ ಉತ್ತಮ ಮಳೆಯಾಗು  ತ್ತಿರುವ  ಕಾರಣ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಂದ ರೈತರಿಗೆ ಸಿಗಬೇ ಕಾಗಿರುವ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಆಗಬೇಕು. ಬಿತ್ತನೆ ಬೀಜ, ರಸ ಗೊಬ್ಬರದ ಅಭಾವ ಸೃಷ್ಟಿಯಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ  ಸೂಚಿಸಿದರು.

ಕೊರೊನಾ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ನಲಗುತ್ತಿರುವ ಕೃಷಿ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನರೇಗಾ ಯೋಜನೆ ಜಾರಿ ಮಾಡಿದ್ದು, ಸಮರ್ಪ  ಕವಾಗಿ ಅನುಷ್ಠಾನಗೊಳಿಸುವ  ಮೂಲಕ ನಿಯಮ ಪಾಲಿಸುವಂತೆ ಸೂಚಿಸಿದರು. ತಹಶೀಲ್ದಾರ್‌ ಎಂ.ಮಂಜುನಾಥ್‌, ಡಿಡಿಎಲ್‌ಆರ್‌ ಗೋಪಾಲಯ್ಯ, ಎಡಿ  ಎಲ್‌ಆರ್‌ ಅಶ್ವಿ‌ನಿ, ಉಪತಹಶೀಲ್ದಾರ್‌ ಅನಿಲ್‌ಗಾಂಧಿ, ಕಂದಾಯ ನಿರೀಕ್ಷಕರಾ ದ ಸುಬ್ರಮಣಿ, ಶ್ರೀಪತಿ, ಮುನಿಸ್ವಾಮಿ ಶೆಟ್ಟಿ, ಮುನೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next