Advertisement

37 ಫಲಾನುಭವಿಗಳಿಗೆ 69 ಎಕರೆ ಭೂಮಿ ಮಂಜೂರು

03:14 PM Apr 30, 2022 | Team Udayavani |

ಹೊಸಪೇಟೆ: ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ಮತ್ತು ಬಗರ್‌ ಹುಕುಂ ಸಕ್ರಮೀಕರಣ ಸಮಿತಿ ವತಿಯಿಂದ ನಗರದ ತಾಲೂಕು ಕಚೇರಿ ಆವರಣದಲ್ಲಿ ಸಾಗುವಳಿ ಚೀಟಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಶುಕ್ರವಾರ ನಡೆಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಮಾತನಾಡಿ, ತಾಲೂಕಿನ ಕಮಲಾಪುರ ಹೋಬಳಿಯಲ್ಲಿ ಎಸ್.ಸಿ 03, ಎಸ್‌.ಟಿ 19 ಹಾಗೂ ಸಾಮಾನ್ಯ ವರ್ಗದ 15 ಜನರು ಸೇರಿದಂತೆ ಒಟ್ಟು 37 ಫಲಾನುಭವಿಗಳಿಗೆ 69 ಎಕರೆ ಭೂಮಿ ಮಂಜೂರಾಗಿದ್ದು, ಇದಕ್ಕೆ ಸಂಬಂಧಿಸಿದ ಸಾಗುವಳಿ ಚೀಟಿ ಪ್ರಮಾಣ ಪತ್ರವನ್ನು ರೈತರಿಗೆ ವಿತರಿಸಲಾಗಿದೆ.

24 ವರ್ಷಗಳ ಪ್ರಯತ್ನದ ಫಲದಿಂದಾಗಿ ಈ ಕಾರ್ಯ ಸಾಧ್ಯವಾಗಿದೆ. ಸಂವಿಧಾನದ ಪ್ರಮುಖ ಅಂಗವಾಗಿರುವ ಕಾರ್ಯಾಂಗ ಮತ್ತು ಶಾಸಕಾಂಗ ಎರಡು ಚಕ್ರಗಳಿದ್ದಂತೆ. ಸಾರ್ವಜನಿಕರ ಸೇವೆ ಮಾಡುವುದರ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಕಮಲಾಪುರ ಹೋಬಳಿಯಲ್ಲಿ ರೈತರಿಂದ ನಮೂನೆ 57ರಡಿಯಲ್ಲಿ 516 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 60 ಅರ್ಜಿಗಳು ಬಗರ್‌ ಹುಕುಂ ಸಮಿತಿಯಲ್ಲಿ ಅಂಗೀಕರಿಸಲಾಗಿದೆ. 159 ಅರ್ಜಿಗಳು ತಿರಸ್ಕೃತಗೊಂಡಿದ್ದು, ಇನ್ನೂ 297 ಅರ್ಜಿಗಳು ಬಾಕಿ ಇರುತ್ತವೆ. ಬಗರ್‌ ಹುಕ್ಕುಂ ಸಮಿತಿ ಸಭೆಯಲ್ಲಿ ಒಟ್ಟು 28 ಪ್ರಕರಣಗಳ ಪ್ರಸ್ತಾವನೆಯನ್ನು ಪೂರ್ಣ ಪ್ರಮಾಣದಲ್ಲಿ ಮಂಡಿಸಲಾಗುವುದು ಎಂದು ಅವರು ತಿಳಿಸಿದರು.

ಪಟ್ಟ ಪಡೆದ ರೈತರ ವಿವರ

ನಾಗಭೂಷಣ ತಂದೆ ಹೊನ್ನೂರಪ್ಪ, ಈರಣ್ಣ ತಂದೆ ತಿಮ್ಮಯ್ಯ, ಲಿಂಗಯ್ಯ ತಂದೆ ಪೂಜಾರಿ ಬೊಮ್ಮಯ್ಯ, ಮಾರಯ್ಯ ತಂದೆ ಪೂಜಾರಿ ಬೊಮ್ಮಯ್ಯ, ಪಂಪಾಪತಿ ಸಿ/ಎ ಹುಲಿಗೆಮ್ಮ, ಗಂಗಮ್ಮ ಗೋನಲ್‌ ಕೇರಿ ತಂದೆ ರಾಜಪ್ಪ, ಈರಣ್ಣ ತಂದೆ ಓಬಯ್ಯ, ತಿಮ್ಮಪ್ಪ ತಂದೆ ತಿಪ್ಪಯ್ಯ, ಗಂಗಮ್ಮ ಗಂಡ ದಿ|| ಸಣ್ಣ ತಿಮ್ಮಯ್ಯ, ಹನುಮಯ್ಯ ತಂದೆ ಮಾರಯ್ಯ, ಈರಣ್ಣ ಜಿಗಳಿ ತಂದೆ ಹನುಮಯ್ಯ, ಪಕ್ಕೀರಮ್ಮ ಮೀನುಗಾರ ಗಂಡ ಹೇಮಗಿರಿಯಪ್ಪ, ಸಣ್ಣ ಯಂಕಪ್ಪ ತಂದೆ ಮೂಕಪ್ಪ, ನಾಗರಾಜ ತಂದೆ ರಂಗಪ್ಪ, ವರಲಕ್ಷ್ಮೀ ಗಂಡ ದೊಡ್ಡ ಮಲ್ಲಪ್ಪ, ದೇವಮ್ಮ ಜೀನೂರು ಗಂಡ ಗಾದೆಪ್ಪ, ಮಾರೆಕ್ಕ ಗಂಡ ಗಂಗಪ್ಪ, ಕಣಿಮೆವ್ವ ಗಂಡ ಗುರುನಾಥ, ಲಕ್ಷ್ಮೀ ಗಂಡ ದೊಡ್ಡ ಮಾರೆಪ್ಪ, ವೆಂಕಟೇಶ್ವರಲು ತಂದೆ ವರದಪ್ಪ, ಎಲ್‌.ಸಂತೋಷ, ಕುರುಬರ ಕೆಂಚಪ್ಪ ತಂದೆ ಗಂಗಪ್ಪ, ನಾಗಮ್ಮ ಗಂಡ ಸಕ್ರಪ್ಪ ಬಿ, ಎಚ್‌.ವೀರೇಶ್‌ ತಂದೆ ಎಚ್‌. ಈರಣ್ಣ, ಎಂ. ಹನುಮಂತಪ್ಪ ತಂದೆ ದಿ| ಬಸಪ್ಪ ಎಂ, ಕೆ. ಮೌನೇಶ್ವರ ತಂದೆ ದಿ.ಕಾಳಪ್ಪ, ರಾಮಲಿ ತಂದೆ ಭರಮಪ್ಪ, ಬಿ. ಕಾಶಪ್ಪ ತಂದೆ ಬಿ ಲಿಂಗಪ್ಪ, ಕಾಗಿ ಗಂಗಾಧರಮ್ಮ ಗಂಡ ಕಾಗಿ ಬಸಪ್ಪ, ರುದ್ರಮ್ಮ ಗಂಡ ಹನುಮಂತಪ್ಪ, ಕಾಗಿ ಕಾಳಮ್ಮ, ಗಂಡ ಕಾಗಿ ರಾಮಪ್ಪ, ಅನ್ಸರ್‌ ತಂದೆ ಮಹಮ್ಮದ್‌ ಹನೀಫ್‌, ನವಲಿ ಗಂಗಮ್ಮ ಗಂಡ ನವಲಿ ಈರಪ್ಪ ಇವರೆಲ್ಲರೂ ಪಟ್ಟ ಪಡೆದ ರೈತರಾಗಿದ್ದಾರೆ.

Advertisement

ಈ ಸಂದರ್ಭದಲ್ಲಿ ಬಗರ್‌ ಹುಕ್ಕಂ ಸಮಿತಿಯ ಸದಸ್ಯ ಬರ್ಮನ್‌ ಗೌಡ, ಜಯಪದ್ಮ, ತಹಶೀಲ್ದಾರ್‌ ವಿಶ್ವಜಿತ ಮೆಹತಾ, ಗ್ರೇಡ್‌-2 ತಹಶೀಲ್ದಾರ್‌ ಅಮರ್‌ನಾಥ್‌, ಮರಿಯಮ್ಮನಹಳ್ಳಿ ಕಂದಾಯ ನಿರೀಕ್ಷಕ ಅಂದಾನಗೌಡ, ಪ್ರಭಾರಿ ಕಂದಾಯ ನಿರೀಕ್ಷಕ ಗುರುಬಸವರಾಜ, ಕಮಲಾಪುರ ಗ್ರಾಮದ ಪ್ರಭಾರಿ ಕಂದಾಯ ನಿರೀಕ್ಷಕ ಅನಿಲ್‌ ಕುಮಾರ್‌ ಮತ್ತು ಕಂದಾಯ ಲೆಕ್ಕಾಧಿಕಾರಿಗಳಾದ ರವಿಚಂದ್ರ, ಮಹಾಂತೇಶ್‌ ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next