Advertisement
1. ಸೌತೆಕಾಯಿ ಜ್ಯೂಸ್ಬೇಕಾಗುವ ಸಾಮಗ್ರಿ: ಕತ್ತರಿಸಿದ ಸೌತೆಕಾಯಿ-3 ಕಪ್, ಕರಿಬೇವಿನ ಎಸಳು-10, ಪುದೀನಾ ಎಲೆಗಳು-8, ಜೀರಿಗೆ-3 ಚಮಚ, ಕಾಳುಮೆಣಸಿನ ಪುಡಿ-1/2 ಚಮಚ, ಲಿಂಬೆರಸ-1 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಸೌತೆಕಾಯಿ-2 ಕಪ್, ಶೇಂಗಾ ಪುಡಿ-3/4 ಕಪ್, ಜೀರಿಗೆ ಪುಡಿ-1 ಚಮಚ, ಹಸಿಮೆಣಸು-4, ಸಕ್ಕರೆ-1/2 ಚಮಚ, ತೆಂಗಿನ ತುರಿ-1/2 ಕಪ್, ಕೊತ್ತಂಬರಿ ಸೊಪ್ಪು-4 ಚಮಚ, ಲಿಂಬೆರಸ-1 ಚಮಚ, ಉಪ್ಪು-ರುಚಿಗೆ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಕರಿಬೇವು -8 ಎಸಳು
Related Articles
Advertisement
3. ಸೌತೆಕಾಯಿ ಸಿಹಿ ಗೊಜ್ಜುಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಸೌತೆ-3 ಕಪ್, ತೆಂಗಿನ ತುರಿ-1/2 ಕಪ್, ಹುರಿದ ಉದ್ದಿನ ಬೇಳೆ-1/2 ಚಮಚ, ಹುರಿದ ಕಡಲೆ ಬೇಳೆ-1 ಚಮಚ, ಹಸಿಮೆಣಸು-5, ಹುಣಸೆ ರಸ-2 ಚಮಚ, ಬೆಲ್ಲದ ತುರಿ-3 ಚಮಚ, ಶೇಂಗಾ ಪುಡಿ-4 ಚಮಚ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಕೊತ್ತಂಬರಿ ಸೊಪ್ಪು-4 ಚಮಚ. ಮಾಡುವ ವಿಧಾನ: ತೆಂಗಿನ ತುರಿ, ಹಸಿಮೆಣಸು, ಉದ್ದಿನ ಬೇಳೆ, ಕಡಲೆ ಬೇಳೆ ಸೇರಿಸಿ ಅರೆದಿರಿಸಿ. ಸೌತೆ ಹೋಳುಗಳಿಗೆ, ಅರೆದ ಮಿಶ್ರಣ, ಹುಣಸೆ ರಸ, ಬೆಲ್ಲದ ತುರಿ, ಕೊತ್ತಂಬರಿ ಸೊಪ್ಪು, ಶೇಂಗಾ ಪುಡಿ ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣಕ್ಕೆ ಸಾಸಿವೆ-ಇಂಗಿನ ಒಗ್ಗರಣೆ ಹಾಕಿದರೆ, ಸಿಹಿ ಗೊಜ್ಜು ರೆಡಿ. 4. ಸೌತೆಕಾಯಿ ಇಡ್ಲಿ
ಬೇಕಾಗುವ ಸಾಮಗ್ರಿ: ತುರಿದ ಸೌತೆಕಾಯಿ-3/4 ಕಪ್, ಅಕ್ಕಿ ರವೆ-2 ಕಪ್, ಮೊಸರು-2 ಕಪ್, ತೆಂಗಿನ ತುರಿ-1/2 ಕಪ್, ಹಸಿಮೆಣಸು-6, ಶುಂಠಿ-1 ಇಂಚಿನಷ್ಟು, ಕೊತ್ತಂಬರಿ ಸೊಪ್ಪು-2 ಚಮಚ, ಪುದೀನಾ ಸೊಪ್ಪು-3 ಚಮಚ, ಕಾಳುಮೆಣಸಿನಪುಡಿ-1/2 ಚಮಚ, ಜೀರಿಗೆ ಪುಡಿ-3/4 ಚಮಚ, ಎಣ್ಣೆ-3 ಚಮಚ, ಸಾಸಿವೆ-1 ಚಮಚ, ಅರಿಶಿನ-1/2 ಚಮಚ, ಕಡಲೆ ಬೇಳೆ-1 ಚಮಚ, ಉದ್ದಿನಬೇಳೆ-1 ಚಮಚ, ಇಂಗು-1/4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಅಕ್ಕಿ ರವೆಯನ್ನು ಹುರಿಯಿರಿ. ಹಸಿಮೆಣಸು, ಶುಂಠಿ ಸೇರಿಸಿ ತರಿತರಿಯಾಗಿ ಅರೆದಿರಿಸಿ. ಅರೆದ ಮಿಶ್ರಣಕ್ಕೆ, ಸೌತೆಕಾಯಿ ತುರಿ, ಅಕ್ಕಿ ರವೆ, ಕಾಳುಮೆಣಸಿನಪುಡಿ, ಜೀರಿಗೆ ಪುಡಿ ಹಾಗೂ ಮೊಸರನ್ನು ಸೇರಿಸಿ ಇಡ್ಲಿ ಮಿಶ್ರಣದ ಹದಕ್ಕೆ ಬೆರೆಸಿ, ಕಾಲು ಗಂಟೆ ಹುದುಗಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು, ಅರಶಿನ, ಕಡಲೆ ಬೇಳೆ, ಉದ್ದಿನಬೇಳೆ ಒಗ್ಗರಣೆ ಮಾಡಿ. ಹುದುಗಲಿರಿಸಿದ ಇಡ್ಲಿ ಮಿಶ್ರಣಕ್ಕೆ ಒಗ್ಗರಣೆ, ತೆಂಗಿನ ತುರಿ, ಕೊತ್ತಂಬರಿ, ಪುದಿನಾ ಸೊಪ್ಪು, ಉಪ್ಪು ಬೆರೆಸಿ ಚೆನ್ನಾಗಿ ಕಲಕಿ. ಎಣ್ಣೆ ಸವರಿದ ಇಡ್ಲಿ ತಟ್ಟೆಗೆ, ಹಿಟ್ಟು ಹಾಕಿ ಬೇಯಿಸಿ, ಕಾಯಿ ಚಟ್ನಿಯೊಂದಿಗೆ ಸವಿಯಿರಿ. 5. ಸೌತೆಕಾಯಿ ಪೂರಿ
ಬೇಕಾಗುವ ಸಾಮಗ್ರಿ: ಸೌತೆಕಾಯಿ ತುರಿ-1 ಕಪ್, ಗೋಧಿ ಹಿಟ್ಟು-2 ಕಪ್, ಮೈದಾ ಹಿಟ್ಟು-3 ಚಮಚ, ಚಿರೋಟಿ ರವೆ-2 ಚಮಚ, ತುಪ್ಪ-1 ಚಮಚ, ಉಪ್ಪು-ರುಚಿಗೆ, ಸಕ್ಕರೆ-1 ಚಮಚ, ಕರಿಯಲು ಎಣ್ಣೆ. ಮಾಡುವ ವಿಧಾನ: ಗೋದಿ ಹಿಟ್ಟಿಗೆ, ಸೌತೆಕಾಯಿ ತುರಿ, ಮೈದಾ ಹಿಟ್ಟು, ಚಿರೋಟಿ ರವೆ, ಉಪ್ಪು, ಸಕ್ಕರೆ, ತುಪ್ಪ ಸೇರಿಸಿ, ಗಟ್ಟಿಯಾಗಿ ಕಲಸಿ, ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಚಿಕ್ಕ ಚಿಕ್ಕ, ಉಂಡೆ ಮಾಡಿ, ಪೂರಿ ಗಾತ್ರಕ್ಕೆ ಲಟ್ಟಿಸಿ, ಕರಿಯಿರಿ. ಜಯಶ್ರೀ ಕಾಲ್ಕುಂದ್ರಿ , ಬೆಂಗಳೂರು