Advertisement

IPL; ಗುಜರಾತ್‌ ವಿರುದ್ಧ ಮೊದಲ ಜಯದ ನಿರೀಕ್ಷೆಯಲ್ಲಿ ಲಕ್ನೋ

12:19 AM Apr 07, 2024 | Team Udayavani |

ಲಕ್ನೋ: ಎರಡು ವರ್ಷಗಳ ಹಿಂದೆ ಒಟ್ಟೊಟ್ಟಿಗೆ ಐಪಿಎಲ್‌ ಪ್ರವೇಶಿ ಸಿದ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ ರವಿವಾರ ರಾತ್ರಿ ತಮ್ಮ 5ನೇ ಪಂದ್ಯದಲ್ಲಿ ಮುಖಾ ಮುಖಿಯಾಗಲಿವೆ. ವಿಶೇಷವೆಂದರೆ, ಈವರೆಗೆ ಆಡಿದ ನಾಲ್ಕೂ ಪಂದ್ಯಗಳಲ್ಲಿ ಲಕ್ನೋ ತಂಡ ಗುಜರಾತ್‌ಗೆ ಶರಣಾಗಿದೆ. ಈ ಸಲವಾದರೂ ಗೆಲುವಿನ ಲಕ್‌ ಒಲಿ ದೀತೆಂಬ ವಿಶ್ವಾಸ ಲಕ್ನೋ ತಂಡದ್ದು.

Advertisement

ಈ ನಂಬಿಕೆಗೆ ಮುಖ್ಯ ಕಾರಣ ಮಾಯಾಂಕ್‌ ಯಾದವ್‌ ಎಂಬ ನೂತನ ವೇಗದ ಅಸ್ತ್ರ. ತನ್ನ ಶರವೇಗದ ಎಸೆತಗಳ ಮೂಲಕ ಪಂಜಾಬ್‌ ವಿರುದ್ಧ 27ಕ್ಕೆ 3 ವಿಕೆಟ್‌, ಬಳಿಕ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ 14ಕ್ಕೆ 3 ವಿಕೆಟ್‌ ಉರುಳಿಸಿರುವ ಪರಾಕ್ರಮ ಮಾಯಾಂಕ್‌ ಯಾದವ್‌ ಅವರದು. ಇದೇ ಲಯದಲ್ಲಿ ಸಾಗಿದರೆ ಮಾಯಾಂಕ್‌ ಯಾದವ್‌ ಗುಜರಾತ್‌ಗೂ ಸಿಂಹಸ್ವಪ್ನರಾಗುವ ಸಾಧ್ಯತೆ ಇದೆ.

ಈ ಸೀಸನ್‌ನಲ್ಲಿ ಎರಡೂ ತಂಡಗಳು ತಲಾ 2 ಗೆಲುವು ಕಂಡಿದೆ. ಆದರೆ ಲಕ್ನೋ ಆಡಿದ್ದು 3 ಪಂದ್ಯ ಮಾತ್ರ. ಗುಜರಾತ್‌ 4 ಪಂದ್ಯಗಳನ್ನಾಡಿದೆ. ಇತ್ತಂಡಗಳು ಲಕ್ನೋದಲ್ಲಿ ಎದುರಾಗುತ್ತಿರುವ 2ನೇ ನಿದರ್ಶನ ಇದಾಗಿದೆ. ಕಳೆದ ವರ್ಷ 7ಕ್ಕೆ 128 ರನ್‌ ಗಳಿಸಿ ಬ್ಯಾಟಿಂಗ್‌ ಬರಗಾಲ ಅನುಭವಿಸಿದ್ದ ಲಕ್ನೋ 7 ವಿಕೆಟ್‌ಗಳ ಸೋಲನ್ನು ಹೊತ್ತುಕೊಂಡಿತ್ತು.

ಲಕ್ನೋದ ಬ್ಯಾಟಿಂಗ್‌ ಸರದಿ ಹೆಚ್ಚು ಬಲಾಡ್ಯ. ಡಿ ಕಾಕ್‌, ರಾಹುಲ್‌, ಪೂರಣ್‌, ಕೃಣಾಲ್‌ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ. ಆದರೆ ಪಡಿಕ್ಕಲ್‌, ಸ್ಟೋಯಿನಿಸ್‌ ಪ್ರಯತ್ನ ಸಾಲದು. ಬೌಲಿಂಗ್‌ ಘಾತಕವೇನಲ್ಲ. ನವೀನ್‌ ಉಲ್‌ ಹಕ್‌, ಯಶ್‌ ಠಾಕೂರ್‌, ಮೊಹ್ಸಿನ್‌ ಖಾನ್‌, ಸ್ಟೋಯಿನಿಸ್‌, ರವಿ ಬಿಷ್ಣೋಯಿ ತವರಿನ ಅಂಗಳದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು ಎಂದುದೊಂದು ಪ್ರಶ್ನೆ.

ಗಿಲ್‌ ಮೇಲೆ ಅವಲಂಬನೆ
ಗುಜರಾತ್‌ ಬ್ಯಾಟಿಂಗ್‌ ಸರದಿ ಗಿಲ್‌ ಅವರನ್ನು ಹೆಚ್ಚು ಅವಲಂಭಿಸಿದೆ. ಪಂಜಾಬ್‌ ವಿರುದ್ಧ 48 ಎಸೆತಗಳಿಂದ ಅಜೇಯ 89 ರನ್‌ ಬಾರಿಸಿದ ಸಾಹಸ ಇವರದು. ಆದರೆ ಬೃಹತ್‌ ಮೊತ್ತ ದಾಖಲಿಸಿಯೂ ಇದನ್ನು ಉಳಿಸಿಕೊಳ್ಳಲಾಗಲಿಲ್ಲ. ಕಾರಣ, ಬೌಲಿಂಗ್‌ ವೈಫ‌ಲ್ಯ. ಮೋಹಿತ್‌ ಶರ್ಮ, ಒಮರ್‌ಜಾಯ್‌, ಉಮೇಶ್‌ ಯಾದವ್‌, ರಶೀದ್‌ ಖಾನ್‌ ಮತ್ತು ನೂರ್‌ ಅಹ್ಮದ್‌ ಅವರ ಎಸೆತಗಳು ಹರಿತಗೊಂಡರಷ್ಟೇ ಗುಜರಾತ್‌ ಗೆಲುವಿನ ಹಳಿ ಏರೀತು.

Advertisement
Advertisement

Udayavani is now on Telegram. Click here to join our channel and stay updated with the latest news.

Next