Advertisement

ಪ್ರಾಧ್ಯಾಪಕರ ನೇಮಕಕ್ಕೆ ಸಿಯು-ಚಯಾನ್‌ ಪೋರ್ಟಲ್‌

11:48 PM May 02, 2023 | Team Udayavani |

ಹೊಸದಿಲ್ಲಿ: ಕೇಂದ್ರಿಯ ವಿವಿಗಳಿಗೆ ಪ್ರಾಧ್ಯಾಪಕರ ನೇಮಕಕ್ಕೆ “ಸಿಯು-ಚಯಾನ್‌’ ಎನ್ನುವ ಏಕೀಕೃತ ನೇಮಕಾತಿ ಪೋರ್ಟಲ್‌ ಆರಂಭಿಸಿರುವುದಾಗಿ ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಪೋರ್ಟಲ್‌ ಸಂಪೂರ್ಣ ಬಳಕೆದಾರ ಸ್ನೇಹಿಯಾಗಿದ್ದು, ನೇಮಕಾತಿ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲ ಸೇವೆಗಳನ್ನೂ ಒದಗಿಸಲಿದೆ. ವಿವಿಗಳು, ಅರ್ಜಿದಾರರು ಇಬ್ಬರಿಗೂ ಪೂರಕವಾಗುವಂತೆ ವೆಬ್‌ಸೈಟ್‌ ಅನ್ನು ರೂಪಿಸಲಾಗಿದೆ.

ಎಲ್ಲ ವಿವಿಗಳಲ್ಲಿ ಲಭ್ಯವಿರುವ ಉದ್ಯೋಗಕವಾಶದ ಪಟ್ಟಿ, ವಿವಿಧ ವಿವಿಗಳಿಗೆ ಅರ್ಜಿ ಸಲ್ಲಿಸಲು ಒಂದೇ ಲಾಗಿನ್‌ ಹಾಗೂ ಸಲಹೆಗಳಿಗಾಗಿ ಡ್ಯಾಶ್‌ಬೋರ್ಡ್‌ ಕೂಡ ಇದ್ದು, ಅರ್ಜಿದಾರರಿಗೆ ಇದು ಸಹಕಾರಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next