Advertisement
ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಟ್ವೀಟ್‌ಗೆ ತಿರುಗೇಟು ನೀಡಿದ ಅವರು, ಈಗಾಗಲೇ ಸಿಎಂ ಸುತ್ತ ಶ್ಯಾಡೋ ಸಿಎಂ, ಸೂಪರ್ ಸಿಎಂಗಳಿದ್ದಾರೆ. ದಲಿತ ಸಿಎಂ ಕೂಗು ಕೇಳಿಬಂದಿದೆ. ಅವರ ಮೇಲೆ ವಿಶ್ವಾಸ ಹೋಗಿದೆ. ಐದು ವರ್ಷ ಸಿಎಂ ಆಗಿರುವ ಖಾತರಿ ಸಿದ್ದರಾಮಯ್ಯ ಅವರಿಗಿಲ್ಲ. ಹೀಗಾಗಿ ಪದೇಪದೆ ತಮ್ಮನ್ನು ತಾವು ಸ್ಟ್ರಾಂಗ್ ಎಂದು ಹೇಳಿಕೊಳ್ಳುವ ಅಥವಾ ಹೇಳಿಸಿಕೊಳ್ಳುವ ಪರಿಸ್ಥಿತಿ ಎಂದರು.
Related Articles
ಈ ಹಿಂದೆ ಬಿಜೆಪಿ, ಜನಸಂಘದ ಅಭ್ಯರ್ಥಿ ಆಯ್ಕೆಯಾದರೂ ಸುದ್ದಿ ಆಗುತ್ತಿರಲಿಲ್ಲ. ಈಗ ಸಂಘಟನಾತ್ಮಕ ಪಕ್ಷವಷ್ಟೇ ಅಲ್ಲದೆ, ಸಮೂಹದ ಪಕ್ಷವಾಗಿ ಬೆಳೆದಿದೆ. ಹೀಗಾಗಿ ಪೈಪೋಟಿಯೂ ಇದೆ, ಅಸಮಾಧಾನವೂ ಕಾಣುತ್ತಿದೆ. ಆದರೆ, ಎಲ್ಲ ಅಸಮಾಧಾನಗಳೂ ಶೀಘ್ರ ಶಮನವಾಗಲಿವೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
Advertisement
ಕಲಬುರಗಿಯಲ್ಲಿ ಮೋದಿ ಸಭೆ ವೇಳೆ ಜೆಡಿಎಸ್‌ನವರಿಗೆ ವೇದಿಕೆ ಸಿಕ್ಕಿರಲಿಲ್ಲ. ಶಿವಮೊಗ್ಗದಲ್ಲಿ ಜೆಡಿಎಸ್ ನಾಯಕರೂ ವೇದಿಕೆಯಲ್ಲಿದ್ದರು. ಎಲ್ಲೆಡೆ ಜೆಡಿಎಸ್‌ನವರನ್ನೂ ಜೋಡಿಸಿಕೊಳ್ಳುವ ಕೆಲಸ ಆಗುತ್ತಿದೆ. ಎಲ್ಲಿಯೂ ಅಸಮಾಧಾನಗಳಿಲ್ಲ.ನಮ್ಮ ಪಕ್ಷವೀಗ ಸಂಘಟನಾತ್ಮಕವಾಗಿಯಷ್ಟೇ ಉಳಿದಿಲ್ಲ. ಸಮೂಹದ ಪಕ್ಷವಾಗಿ ಬೆಳೆದಿದೆ ಎಂದರು. ನಾನು ಬೆಂಗಳೂರು ಉತ್ತರ ಅಥವಾ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಟಿಕೆಟ್ ಕೇಳಿರಲಿಲ್ಲ. ಬೇಡ ಎಂದೂ ಹೇಳಿರಲಿಲ್ಲ ಎಂದರು.