ಚಿಕ್ಕಮಗಳೂರು: ಪಾರ್ಲಿಮೆಂಟ್ ನೋಡ್ತಿವಿ ಪಾಸ್ ಕೊಡಿ ಅಂದ್ರೆ ಕೊಡ್ತಾರೆ. ಅವರ ಜಾಗದಲ್ಲಿ ನಾನೇ ಇದ್ದರೂ ಕೊಡಿಸುತ್ತಿದ್ದೇ, ಶಿಫಾರಸ್ಸು ಮಾಡುವಾಗ ಒಳ್ಳೇಯವನೋ ಕೆಟ್ಟವನೋ ಅಂತ ಗುರುತಿಸೋ ಐಸ್ಕ್ಯಾನರ್ ಯಾರ ಬಳಿಯೂ ಇರಲ್ಲ. ಭದ್ರತಾ ಲೋಪ ಆಗಿರುವುದನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಘೋಷಿತ ಅಪರಾಧಿಗೆ ಶಿಫಾರಸ್ಸು ಮಾಡಿದರೇ ಅಪರಾಧವಾಗುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಸಂಸತ್ ಘಟನೆ ಸಂಬಂಧ ನಗರದಲ್ಲಿ ಪ್ರತಿಕ್ರಿಯಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಊರಿನವರು ಪಾರ್ಲಿಮೆಂಟ್ ನೋಡಬೇಕು, ವಿಧಾನಸಭೆ ನೋಡಬೇಕು ಅಂದ್ರೇ ನಾನು, ನೀವು, ಸಿದ್ದರಾಮಯ್ಯ ನವರು ಪಾಸ್ ಕೊಡಿಸ್ತಾರೆ. ಒಳ್ಳೇಯವನೋ, ಕೆಟ್ಟವನೋ ಎಂದು ಮುಂಚಿತವಾಗಿ ತಿಳಿದಿರುವುದಿಲ್ಲ, ಪಾರ್ಲಿಮೆಂಟ್ ಘಟನೆಯಲ್ಲಿ ಭದ್ರತಾ ಲೋಪವಾಗಿರುವುದು ನಿಜ ಎಂದರು.
ಘಟನೆ ಸಂಬಂಧ ಕಾಂಗ್ರೆಸ್ ನ ಸಕ್ರೀಯತೆ ನೋಡಿದರೇ ಟೂಲ್ ಕಿಟ್ ರಾಜಕೀಯದ ಅನುಮಾನ ಇದೆ. ಕಾಂಗ್ರೆಸ್ ಸಂಸದನ ಮನೆಯಲ್ಲಿನ ನೋಟಿನ ಘಟನೆ ಮರೆತು ಹೋಯ್ತು,
ಇದರ ಬಗ್ಗೆ ಒಂದೇ ಒಂದು ಶಬ್ದ ರಾಹುಲ್ ಗಾಂಧಿ ಚಕಾರ ಎತ್ತಲಿಲ್ಲ. ಇದಕ್ಕೆ ಐಟಿ, ಇಡಿ, ಸಿಬಿಐ ದಾಳಿ ಅಂದ್ರೇ ಕಾಂಗ್ರೆಸ್ ಭಯಗೊಳ್ಳೊದು. ಧೀರಜ್ ಸಾಹು ಅಂತವರು ನೂರಾರು ಜನ ಕಾಂಗ್ರೆಸ್ಸಿಗರ ಬಳಿ ಇದ್ದಾರೆ. ಇದೆಲ್ಲ ಲೋಕಸಭೆ ಚುನಾವಣೆಗೆ ಸಂಗ್ರಹಿಸಿಟ್ಟಿರುವ ಹಣ, ಮೋದಿ ಪ್ರಧಾನಿ ಆಗೋದನ್ನು ತಪ್ಪಿಸಬೇಕು ಎಂದು ಇದೆಲ್ಲಾ ಷಡ್ಯಂತರ ನಡೆಸಲಾಗುತ್ತಿದೆ ಎಂದು ದೂರಿದರು.
ಅಪಪ್ರಚಾರ, ಕಳ್ಳಹಣದ ಜೊತೆ ವಿದೇಶಿ ಶಕ್ತಿಗಳ ಜೊತೆ ಶಾಮೀಲಾಗಿರುವ ಸಂಶಯ ಇದೆ. ಎಲ್ಲದರ ಪಾರ್ಟ್ ಅಂಡ್ ಪಾರ್ಸಲ್ ಆಗಿ ಇದೆಲ್ಲಾ ನಡೆದಿರುವ ಸಂಶಯವಿದೆ. ಇದರ ಹಿಂದಿನ ಶಕ್ತಿ ಯಾರು, ಯಾರ ಜೊತೆ ಸಂಬಂಧವಿದೆ ಅನ್ನೋ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Raghav Chadha: ರಾಜ್ಯಸಭಾ ನಾಯಕನಾಗಿ ಆಪ್ ಸಂಸದ ರಾಘವ್ ಚಡ್ಡಾ ನೇಮಕ