ಚಿಕ್ಕಮಗಳೂರು: ಮರಾಠ ಎನ್ನುವು ಒಂದು ಸಮುದಾಯ. ಮರಾಠ ಸಮುದಾಯದವರು ದೊಡ್ಡ ಪ್ರಮಾಣದಲ್ಲಿ ರಾಜ್ಯದಲ್ಲಿದ್ದಾರೆ. ನೇಕಾರ ಹೇಗೆ ಸಮುದಾಯವೋ ಹಾಗೆಯೇ ಮರಾಠ ಎನ್ನುವುದು ಕೂಡಾ ಒಂದು ಸಮುದಾಯ. ಇದರ ಅಭಿವೃದ್ಧಿ ದೃಷ್ಟಿಯಿಂದ ಯೋಜನೆ ಮಾಡಿದರೆ ಯಾಕೆ ಬಂದ್ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮರಾಠ ಪ್ರಾಧಿಕಾರ ವಿರೋಧಿಸಿ ಮಾಡುತ್ತಿರುವ ಕರ್ನಾಟಕ ಬಂದ್ ರಾಜಕೀಯ ಪ್ರೇರಿತವಾಗಿದೆ ಎಂದರು.
ಈಗ ವಿರೋಧ ಮಾಡುವವರು ಎಲ್ಲಾ ರೀತಿಯ ವಿಚಾರಕ್ಕೂ ವಿರೋಧ ಮಾಡಲಿ. ಬೇರೆ ಜಾತಿಯ ನಿಗಮ ಬೇಡ ಎಂದು ಹೇಳಲಿ ನೋಡುವ, ಒಂದು ಬೇಕು, ಮತ್ತೊಂದು ಬೇಡ ಅಂದ್ರೆ ಹೇಗೆ? ಬೇರೆ ಜಾತಿ ನಿಗಮ ಮಾಡಿದ್ದಾಗ ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ ಅವರು ಇದನ್ನು ಅಭಿವೃದ್ಧಿ ದೃಷ್ಟಿಯಿಂದ ಮಾಡಿದ್ದೇವೆ, ಇದರಲ್ಲಿ ತಪ್ಪೇನು ಎಂದರು.
ಇದನ್ನೂ ಓದಿ:ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ: ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆ
ಕರ್ನಾಟಕ ರಾಜ್ಯದ ಹಿತಾಸಕ್ತಿಯೇ ಮುಖ್ಯ ಎನ್ನುವುದಾದರೆ ಅಲ್ಪಸಂಖ್ಯಾತರ ಅಭಿವೃದ್ಧಿ ಪ್ರಾಧಿಕಾರ ಯಾಕೆ ಬೇಕು? ಅಲ್ಪ ಅಸಂಖ್ಯಾತರ ಕಲ್ಯಾಣ ಇಲಾಖೆ ಯಾಕೆ ಬೇಕು? ಭೋವಿ, ಅಂಬೇಡ್ಕರ್, ಕಾಡುಗೊಲ್ಲ, ಉಪ್ಪಾರ ಹತ್ತಾರು ಅಭಿವೃದ್ಧಿ ನಿಗಮ ಇದೆ. ಅದೇ ರೀತಿ ಮರಾಠ ಅಭಿವೃದ್ಧಿ ನಿಗಮ ಮಾಡಲಾಗಿದೆ ಎಂದರು.
ಈಗ ತಪ್ಪು ಹುಡುಕುವರು ಟಿಪ್ಪು ಜಯಂತಿ ವೇಳೆ ಯಾಕೆ ಸುಮ್ಮನಿದ್ದರು? ಟಿಪ್ಪು ಕನ್ನಡ ಪ್ರೇಮಿಯೋ, ಅವನ ಕಾಲದಲ್ಲೇ ಊರು ಹೆಸರು ಬದಲಾಗಿದ್ದು ಎಂದು ಟೀಕಿಸಿದರು.