ಚಿಕ್ಕಮಗಳೂರು: ‘ಲಿಂಗಾಯತರ ಮತ ಬೇಡ’ ಎಂಬ ರೀತಿಯ ಹೇಳಿಕೆಯನ್ನು ಯಾರೂ ಕೊಡಬಾರದು. ಅದು ತಪ್ಪು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ಸಿ.ಟಿ.ರವಿ ಹೇಳಿದ್ದಾರೆಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಮೂಡಿಗೆರೆಯಲ್ಲಿಂದು ಮಾಜಿ ಸಿಎಂ ಬಿ.ಎಸ್.ವೈ ಪ್ರತಿಕ್ರಿಯೆ ನೀಡಿದರು.
ಆ ರೀತಿ ಯಾರೂ ಹೇಳಿಕೆ ಕೊಡಬಾರದು, ಅದು ತಪ್ಪು. ಅವರನ್ನ ಕರೆಸಿ ಮಾತನಾಡುತ್ತೇನೆ, ಆ ರೀತಿ ಯಾರೂ ಮಾತನಾಡಬಾರದು. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಮುಖ್ಯ ಎಂದರು.
ಮೂಡಿಗೆರೆ ಬಿಜೆಪಿಯಲ್ಲಿ ಭಿನ್ನಮತದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಗೆಲ್ಲುವ ಪಕ್ಷದಲ್ಲಿ ಅವೆಲ್ಲಾ ಮಾಮೂಲಿ, ಎಲ್ಲಾ ಸರಿ ಮಾಡುತ್ತೇವೆ. ಟಿಕೆಟ್ ಕೊಡುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ವಿಜಯ ಸಂಕಲ್ಪ ಯಾತ್ರೆಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. 140ಕ್ಕೂ ಹೆಚ್ಚು ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ ಎಂದರು.