Advertisement

ಸಿ.ಟಿ.ರವಿ ಪೊಲಿಟಿಕಲ್‌ ಫೀಡ್‌ಬ್ಯಾಕ್‌ ಉಸ್ತುವಾರಿ

12:41 PM Oct 02, 2018 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಪ್ರಮುಖ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಬಿಜೆಪಿ ಮುಂದಾಗಿದ್ದು ದಕ್ಷಿಣ ಭಾರತದ ಐದು ರಾಜ್ಯಗಳ ರಾಜಕೀಯ ಬೆಳವಣಿಗೆ ಸಂಬಂಧ ಮಾಹಿತಿ ಸಂಗ್ರಹಣೆ ಹೊಣೆ ಶಾಸಕ ಸಿ.ಟಿ.ರವಿ ಅವರಿಗೆ ವಹಿಸಿದೆ.

Advertisement

ದಕ್ಷಿಣ ಭಾರತದ ಪೊಲಿಟಿಕಲ್‌ ಫೀಡ್‌ಬ್ಯಾಕ್‌ ಉಸ್ತುವಾರಿಯಾಗಿ ಸಿ.ಟಿ.ರವಿ ನೇಮಕವಾಗಿದ್ದು ಜತೆಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರನ್ನು ಸಹ ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿನ ರಾಜಕೀಯ ವಿದ್ಯಮಾನಗಳು, ಬೆಳವಣಿಗೆಗಳು, ರಾಜಕೀಯವಾಗಿ ಮಹತ್ವ ಪಡೆಯುತ್ತಿರುವ ವಿಚಾರಗಳ ಬಗ್ಗೆ ಮಾಹಿತಿ ನೀಡುವುದು. ನಾಲ್ಕೈದು ಲೋಕಸಭಾ ಕ್ಷೇತ್ರಗಳನ್ನು ಒಂದು ಕ್ಲಸ್ಟರ್‌ ಆಗಿ ರಚಿಸಿಕೊಂಡು ಅಲ್ಲಿನ ಬೆಳವಣಿಗಳ ಬಗ್ಗೆ ನಿಗಾ ವಹಿಸುವುದು ಈ ತಂಡ ಜವಾಬ್ದಾರಿ ಎನ್ನಲಾಗಿದೆ.

ಪ್ರಾದೇಶಿಕವಾಗಿ ಗಣನೀಯ ಸಂಖ್ಯೆಯಲ್ಲಿರುವ ಸಮುದಾಯಗಳು, ನಿರ್ಣಾಯಕ ಪಾತ್ರ ಸೇರಿದಂತೆ ಎಲ್ಲ ರಾಜಕೀಯ ಮಾಹಿತಿಗಳನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವ ರಿಗೆ ನೀಡುವುದು  ಈ ತಂಡದ ಕಾರ್ಯ. ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್‌ ಇತರರು ಈ ತಂಡದಲ್ಲಿದ್ದಾರೆ. ಈ ತಂಡ ಆಂತರಿಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next