ಚಿಕ್ಕಮಗಳೂರು: ಆರ್‌ಎಸ್‌ಎಸ್ ಸಾಧನೆ ಬಗ್ಗೆ ಚರ್ಚೆ ಮಾಡೋದಾದರೆ ವೇದಿಕೆ ರೂಪಿಸಲಿ, ಚರ್ಚೆ ಮಾಡೋಣ ಸಂಘ ಏನು ಬರೋದಿಲ್ಲ, ನಾವೇ ಬರುತ್ತೇವೆ. ತನ್ನ ಕೆಲಸವನ್ನು ಹೇಳಿಕೊಳ್ಳುವ ಸ್ವಭಾವ ಸಂಘಕ್ಕೆ ಇಲ್ಲ .ಅವರಿಗೆ ಒಂದು ಪುಸ್ತಕ ಕಳಿಸುತ್ತೇನೆ, ಓದಿಕೊಳ್ಳಲಿ. ಏನಾದರೂ ಸಂಶಯ ಬಂದರೆ ಚರ್ಚೆಗೆ ಬರಲಿಯೆಂದು ವಿ.ಎಸ್. ಉಗ್ರಪ್ಪ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.
ನಗರದಲ್ಲಿ ಮಾತಾನಾಡಿದ ಅವರು, ರಾಜ್ಯದ ಹಲವೆಡೆ ಕೈ ನಾಯಕರು ಆರ್‌ಎಸ್‌ಎಸ್ ಚಡ್ಡಿ ಸುಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರು ಇಂತಹ ಕೆಲಸವನ್ನೇ ಮಾಡಿಕೊಂಡು ಇರಲಿ ರಾಜ್ಯದ ಎಲ್ಲಾ ಕಾರ್ಯಕರ್ತರಿಗೂ ಕರೆ ಕೊಡುತ್ತೇನೆ. ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಿ. ಎಲ್ಲರೂ ಹಳೆಯ ಚಡ್ಡಿಗಳನ್ನು ಕಳುಹಿಸಿಕೊಡಿಯೆಂದು ಕರೆ ಕೊಡುತ್ತೇನೆ ಎಂದರು.
ಇದನ್ನೂ ಓದಿ:ಯಡಿಯೂರಪ್ಪ ಭೇಟಿಯಾದ ಸಿದ್ದರಾಮಯ್ಯ ; ಕೆಲ ಹೊತ್ತು ಮಾತುಕತೆ
ಇದೇ ವೇಳೆ ನಗರದಲ್ಲಿ ಮಾತಾನಾಡಿದ ಶಾಸಕ ಪಿ.ರಾಜೀವ್, ಕಾಂಗ್ರೆಸ್ ಈ ನೆಲದ ವಿಚಾರಧಾರೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿದೆ. ಚಡ್ಡಿ ಸುಡೋದ್ರಿಂದ ನಮ್ಮ ವಿಚಾರಧಾರೆಯನ್ನು ಸುಡಲು ಆಗಲ್ಲ ಕಾಂಗ್ರೆಸ್ ಚೆಡ್ಡಿ ಸುಡುತ್ತಿಲ್ಲ, ಅವರ ನೈತಿಕತೆ, ಚಿಂತನೆ ಏನೆಂದು ತೋರಿಸುತ್ತಿದೆ ಅವರು ಚಡ್ಡಿಗೆ ಬೆಂಕಿ ಹಾಕ್ತಿಲ್ಲ, ಜನರ ಮನಸ್ಸು, ಹೃದಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮನಸ್ಥಿತಿ ಎಷ್ಟು ವಿಕೃತ ಎಂದು ತೋರಿಸುತ್ತದೆ. ಆರ್.ಎಸ್.ಎಸ್. ದೇಶಾಭಿಮಾನ, ರಾಷ್ಟ್ರೀಯತೆ ಭಾವನೆಯ ಹೃದಯ ಕಟ್ಟುವ ಮಾಡಿದೆ. ದೂರದಲ್ಲಿ ನಿಂತು ಏನೋ ಮಾತನಾಡೋದಲ್ಲ, ಹತ್ತಿರದಿಂದ ಬಂದು ನೋಡಿ 1963ರಲ್ಲಿ ನೆಹರೂ ರಾಜ್ ಪಥ್ ನಲ್ಲಿ ಆರ್.ಎಸ್.ಎಸ್.ಇರಬೇಕು ಎಂದಿದ್ದರು. ಇಂಡಿಯಾ-ಪಾಕಿಸ್ತಾನ ವಿಭಜನೆಯಾದಾಗ ನಿಂತವರು ಸ್ವಯಂ ಸೇವಕರು,ಭಾರತ-ಚೀನಾ ಯುದ್ಧವಾದಾಗ ಯುದ್ಧಭೂಮಿಯಲ್ಲಿ ಸೇವೆ ಮಾಡಿದವರು ಸ್ವಯಂ ಸೇವಕರ ಎಂದು ಹೇಳಿದರು.