Advertisement

ಅಧುನಿಕ ತಂತ್ರಜ್ಞಾನದೊಂದಿಗೆ ಮೀನುಗಾರರ ರಕ್ಷಣೆಗೆ ಸಿಎಸ್‌ಪಿ ಸಜ್ಜು

02:26 AM Jan 26, 2021 | Team Udayavani |

ಮಲ್ಪೆ: ಮಲ್ಪೆ ಕೇಂದ್ರವಾಗಿ ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಕರಾವಳಿ ಕಾವಲು ಪೊಲೀಸ್‌ (ಸಿಎಸ್‌ಪಿ) ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕರ್ನಾಟಕ ಕರಾವಳಿಯ ರಕ್ಷಣೆಗೆ ಸಿದ್ಧ ವಾಗಿದ್ದು, ಸಿಎಸ್‌ಪಿ ಜತೆ ಸ್ಥಳೀಯ ಮೀನುಗಾರರು ಪೂರ್ಣ ಪ್ರಮಾಣದಲ್ಲಿ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಸಿಎಸ್‌ಪಿ ಎಸ್ಪಿ ಆರ್‌. ಚೇತನ್‌ ಹೇಳಿದ್ದಾರೆ.

Advertisement

ಸೋಮವಾರ ಕರಾವಳಿ ಕಾವಲು ಪೊಲೀಸರ ಬೋಟು ಗಸ್ತು, ಕಾರ್ಯಾಚರಣೆ, ಮೀನುಗಾರಿಕಾ ಬೋಟುಗಳ ಪರಿಶೀಲನೆ ಪ್ರಾತ್ಯಕ್ಷಿಕೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೂರು ಜಿಲ್ಲೆಗಳ 173 ಮೀನುಗಾರ ಮುಖಂಡರ ವಾಟ್ಸಾಪ್‌ ಗ್ರೂಪ್‌ನ್ನು ರಚಿಸಿ, ಸಮಸ್ಯೆಗಳ ಬಗ್ಗೆ ಚರ್ಚೆಸಲಾಗುತ್ತದೆ. ಮೀನುಗಾರಿಕೆ ತೆರಳುವ ವೇಳೆ ಗುರುತಿನ ಚೀಟಿ ಇಟ್ಟುಕೊಳ್ಳುವ ಬಗ್ಗೆ ಮತ್ತು ಸಂಶಯಾಸ್ಪದ ಬೋಟುಗಳ ಬಗ್ಗೆ ಮಾಹಿತಿ ನೀಡುವ ಕುರಿತು ಅವರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಹೆಚ್ಚುವರಿ ಜೆಟ್‌ಸ್ಕೀಗೆ ಪ್ರಸ್ತಾವ :

ಕರಾವಳಿ ಕವಾಲು ಪೊಲೀಸ್‌ ಠಾಣೆಯ ಉಡುಪಿ, ಮಂಗಳೂರು ಹಾಗೂ ಕಾರವಾರಕ್ಕೆ ತಲಾ ಒಂದರಂತೆ ಮೂರು ಜೆಟ್‌ಸ್ಕೀಯನ್ನು ಒದಗಿಸಲಾಗಿದೆ. ಮತ್ತೆ ಆರು ಜೆಟ್‌ ಸ್ಕೀ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು ಎರಡು ಸೀ ಆ್ಯಂಬುಲೆನ್ಸ್‌ಗೆ ಮೀನುಗಾರಿಕೆ ಇಲಾಖೆಯಿಂದ ಪ್ರಸ್ತಾವ ಹೋಗಿದೆ ಎಂದು ತಿಳಿಸಿದರು.

Advertisement

3 ಜಿಲ್ಲೆಯಲ್ಲಿ 417 ಪ್ರಕರಣಗಳು ದಾಖಲು :

ಬೋಟುಗಳಲ್ಲಿ ಅಕ್ರಮ  ಮದ್ಯ ಸಾಗಾಟ, ಕಡಲ ತೀರದಲ್ಲಿ ಮಾದಕದ್ರವ್ಯ ಸೇವನೆ ಮತ್ತು ಮಾರಾಟ, ಮಾನವ ಕಳ್ಳ ಸಾಗಾಟ, ವಿದೇಶಿಯರಿಂದ ಅಕ್ರಮ ಮೀನುಗಾರಿಕೆ ಸೇರಿದಂತೆ 25 ಕಾಯಿದೆಯಡಿ ಕೇಸು ದಾಖಲಿಸಲು ಕರಾವಳಿ ಕಾವಲು ಪೊಲೀಸರಿಗೆ ಅವಕಾಶ ಇದೆ. ಅದರಂತೆ ಈವರೆಗೆ ಮೂರು ಜಿಲ್ಲೆ ಗಳಲ್ಲಿ 417 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ 225 ಅಕ್ರಮ ಮದ್ಯ ಸಾಗಾಟ, 77 ಮಾದಕ ದ್ರವ್ಯ, ಅರಣ್ಯ ಕಾಯಿದೆಯಡಿ 10, ಪೊಲೀಸ್‌ ಕಾಯಿದೆಯಡಿ 48 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಈವರೆಗೆ ಒಟ್ಟು 82 ಪ್ರಕರಣಗಳಿಗೆ ಸಂಬಂಧಿಸಿ 61 ಬೋಟುಗಳಲ್ಲಿದ್ದ 461 ಮಂದಿಯನ್ನು ರಕ್ಷಿಸಲಾಗಿದೆ. 2020ರಲ್ಲಿ 12 ಪ್ರಕರಣಕ್ಕೆ ಸಂಬಂಧಿಸಿ 9 ಬೋಟುಗಳಲ್ಲಿ ಇದ್ದ 35 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಎಸ್ಪಿ ಆರ್‌.ಚೇತನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next