Advertisement

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

10:51 PM Apr 23, 2024 | Team Udayavani |

ಚೆನ್ನೈ: ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಬ್ಯಾಟಿಂಗ್‌ ಅಬ್ಬರ ನಡೆಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ನ ನಾಯಕ ಋತುರಾಜ್‌ ಗಾಯಕ್ವಾಡ್‌, ಈ ಐಪಿಎಲ್‌ನ 8ನೇ ಶತಕ ಶತಕ ಸಿಡಿಸಿದ್ದಾರೆ. ಇದಲ್ಲದೆ ಗಾಯಕ್ವಾಡ್‌, ಶತಕ ಬಾರಿಸಿದ ಚೆನ್ನೈ ಕಿಂಗ್ಸ್‌ ತಂಡದ ಮೊದಲ ನಾಯಕನೆಂಬ ವಿಶಿಷ್ಟ ದಾಖಲೆಯನ್ನೂ ನಿರ್ಮಿಸಿದ್ದಾರೆ.

Advertisement

ಇದು ಒಟ್ಟಾರೆ ಐಪಿಎಲ್‌ನಲ್ಲಿ ಗಾಯಕ್ವಾಡ್‌ ಬಾರಿಸಿರುವ 2ನೇ ಶತಕ. ಮಂಗಳವಾರದ ಪಂದ್ಯದಲ್ಲಿ ಗಾಯಕ್ವಾಡ್‌, 60 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್‌ ಸಹಿತ ಅಜೇಯ 108 ರನ್‌ ಚಚ್ಚಿದರು.

ಋತುರಾಜ್‌ ಗಾಯಕ್ವಾಡ್‌ ಶತಕವೂ ಸೇರಿ ಈ ಐಪಿಎಲ್‌ ಸೀಸನ್‌ನಲ್ಲಿ ಈಗಾಗಲೇ ಗಣನೀಯ ಸಂಖ್ಯೆಯ ಶತಕಗಳು ದಾಖಲಾಗಿವೆ. ಇದಕ್ಕೂ ಮುನ್ನ ವಿರಾಟ್‌ ಕೊಹ್ಲಿ, ಟ್ರಾವಿಸ್‌ ಹೆಡ್‌, ರೋಹಿತ್‌ ಶರ್ಮ, ಸುನೀಲ್‌ ನಾರಾಯಣ್‌, ಜೋಸ್‌ ಬಟ್ಲರ್‌ (2 ಬಾರಿ), ಯಶಸ್ವಿ ಜೈಸ್ವಾಲ್‌ ಶತಕ ಬಾರಿಸಿದ್ದರು.

ಟಾಸ್‌ ಸೊತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಅಜಿಂಕ್ಯ ರಹಾನೆ ಬೇಗನೆ ಔಟಾದರಾದರೂ, ಋತುರಾಜ್‌ ಮತ್ತು ಶಿವಂ ದುಬೆ ಆಟ ತಂಡದ ಮೊತ್ತ ಉಬ್ಬಿಸಿತು. ಋತುರಾಜ್‌ ನಾಯಕನ ಆಟದ ಜೊತೆಗೆ ಶಿವಂ ದುಬೆ ಸ್ಫೋಟಕ ಅರ್ಧಶತಕ (66) ನೆರವಿನೊಂದಿಗೆ ಚೆನ್ನೈ, 20 ಓವರ್‌ಗಳಲ್ಲಿ 210 ರನ್‌ ಕಲೆ ಹಾಕಿತು.

Advertisement

Udayavani is now on Telegram. Click here to join our channel and stay updated with the latest news.

Next