Advertisement

ಮುಂಬೈನಲ್ಲಿಂದು ಚೆನ್ನೈಸೂಪರ್‌ ಕಿಂಗ್ಸ್‌ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕಾದಾಟ

05:23 PM Apr 21, 2021 | Team Udayavani |

ಮುಂಬೈ: ಸೋಮವಾರಷ್ಟೇ ರಾಜಸ್ಥಾನ್‌ ವಿರುದ್ಧ 45 ರನ್‌ಗಳಿಂದ ಗೆದ್ದ ಚೆನ್ನೈಸೂಪರ್‌ ಕಿಂಗ್ಸ್‌ ಬುಧವಾರದ ದ್ವಿತೀಯ ಪಂದ್ಯದಲ್ಲಿ ಕೆಕೆಆರ್‌ ಜತೆ ಸೆಣಸಾಟ ನಡೆಸಲಿದೆ.

Advertisement

ರಾಜಸ್ಥಾನ್‌ ವಿರುದ್ಧ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಆಲ್‌ರೌಂಡ್‌ ಪ್ರದರ್ಶನ ತೋರಿದ ಮೊಯಿನ್‌ ಅಲಿ ಮೇಲೆ ಚೆನ್ನೈತಂಡ ಹೆಚ್ಚು ನಂಬಿಕೆ ಇರಿಸಿದೆ.

ಸಿಡಿಯಬೇಕಿದೆ ರಸೆಲ್‌: ಐಪಿಎಲ್‌ನಲ್ಲಿ ಕಳೆದೊಂದು ವರ್ಷದಿಂದ ಬ್ಯಾಟಿಂಗ್‌ ಬರ ಅನುಭವಿಸುತ್ತಿರುವ ವಿಂಡೀಸ್‌ ದೈತ್ಯ ಆ್ಯಂಡ್ರೆ ರೆಸಲ್‌ ಕೆಕೆಆರ್‌ ಸೋಲಿಗೊಂದು ಮೂಲವಾಗಿದ್ದಾರೆ. ಅವರು ಮಿಡ್ಲ್ ಆರ್ಡರ್‌ನಲ್ಲಿ ಸಿಡಿದು ನಿಂತರೆ ಮಾರ್ಗನ್‌ ಪಡೆಯ ದೊಡ್ಡದೊಂದು ಸಮಸ್ಯೆ ಪರಿಹಾರಗೊಳ್ಳಲಿದೆ. ಆರ್‌ ಸಿಬಿ ವಿರುದ್ಧ ರಸೆಲ್‌ ಸ್ಫೋಟಿಸಿದರೂ ತಂಡವನ್ನು ದಡ ಮುಟ್ಟಿಸುವಲ್ಲಿ ಎಡವಿದ್ದರು.

ಕೆಕೆಆರ್‌ ಅಗ್ರ ಕ್ರಮಾಂಕ ಬಲಿಷ್ಠ. ಗಿಲ್‌, ತ್ರಿಪಾಠಿ, ರಾಣಾ ಉತ್ತಮ ಲಯದಲ್ಲಿದ್ದಾರೆ. ಆದರೆ ಇಯಾನ್‌ ಮಾರ್ಗನ್‌, ದಿನೇಶ್‌ ಕಾರ್ತಿಕ್‌ ಬ್ಯಾಟ್‌ ಸದ್ದು ಮಾಡುತ್ತಿಲ್ಲ. ಕೆಕೆಆರ್ ತಂಡವು ಹೈದರಾಬಾದ್ ವಿರುದ್ಧ ಮೊದಲ ಪಂದ್ಯ ಗೆದ್ದರೂ ನಂತರದ ಎರಡು ಸತತ ಪಂದ್ಯಗಳಲ್ಲಿ ಸೋಲನುಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next