Advertisement

ದುಬಾೖನಲ್ಲಿ ಸಿಎಸ್‌ಕೆ ಅಭ್ಯಾಸ ಆರಂಭ : ಐಪಿಎಲ್‌ ಕೂಟಕ್ಕೆ ಇನ್ನೊಂದೇ ತಿಂಗಳು ಬಾಕಿ

11:21 PM Aug 20, 2021 | Team Udayavani |

ದುಬಾೖ : ಅರಬ್‌ ನಾಡಿನಲ್ಲಿ ಮುಂದುವರಿಯಲಿರುವ 14ನೇ ಆವೃತ್ತಿಯ ಐಪಿಎಲ್‌ ಕೂಟಕ್ಕೆ ಇನ್ನೊಂದೇ ತಿಂಗಳು ಬಾಕಿ. ಈಗಾಗಲೇ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹಲವು ಸದಸ್ಯರು ದುಬಾೖ ತಲುಪಿ ಕ್ವಾರಂಟೈನ್‌ ಮುಗಿಸಿದ್ದಾರೆ. ಅಭ್ಯಾಸವನ್ನೂ ಆರಂಭಿಸಿದ್ದಾರೆ.

Advertisement

ಧೋನಿ ಸೇರಿದಂತೆ ಸಿಎಸ್‌ಕೆ ತಂಡದ ಪ್ರಮುಖ ಸದಸ್ಯರಾದ ಸುರೇಶ್‌ ರೈನಾ, ರಾಬಿನ್‌ ಉತ್ತಪ್ಪ, ದೀಪಕ್‌ ಚಹರ್‌, ಋತುರಾಜ್‌ ಗಾಯಕ್ವಾಡ್‌ ಮೊದಲಾದವರು ದುಬಾೖನ “ಐಸಿಸಿ ಕ್ರಿಕೆಟ್‌ ಅಕಾಡೆಮಿ ಸ್ಟೇಡಿಯಂ’ನಲ್ಲಿ ಮೊದಲ ಸುತ್ತಿನ ಅಭ್ಯಾಸದಲ್ಲಿ ತೊಡಗಿದರು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಶ್ರೇಯಸ್‌ ಅಯ್ಯರ್‌ ಕೂಡ ದುಬಾೖಗೆ ಆಗಮಿಸಿದ್ದು, ಕ್ವಾರಂಟೈನ್‌ ಮುಗಿಸಿದ ಬಳಿಕ ಅಭ್ಯಾಸಕ್ಕೆ ಇಳಿಯಲಿದ್ದಾರೆ.

ಇದನ್ನೂ ಓದಿ :ಆಸೀಸ್‌ ಹ್ಯಾಟ್ರಿಕ್‌ ಹೀರೋ ನಥನ್‌ ಎಲ್ಲಿಸ್‌ ಐಪಿಎಲ್‌ಗೆ

Advertisement

Udayavani is now on Telegram. Click here to join our channel and stay updated with the latest news.

Next