Advertisement

ಸಿಎಸ್‌ಕೆ ಜೊಹಾನ್ಸ್‌ಬರ್ಗ್‌ ತಂಡದಲ್ಲಿ ಡು ಪ್ಲೆಸಿಸ್‌

10:23 PM Aug 21, 2022 | Team Udayavani |

ಜೊಹಾನ್ಸ್‌ಬರ್ಗ್‌: ಕ್ರಿಕೆಟ್‌ ಸೌತ್‌ ಆಫ್ರಿಕಾ ಟಿ20 ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಲಕತ್ವದ ಜೊಹಾನ್ಸ್‌ಬರ್ಗ್‌ ಫ್ರಾಂಚೈಸಿ ಫಾ ಡು ಪ್ಲೆಸಿಸ್‌ ಅವರಿಗೆ ಬಲೆ ಬೀಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಕೆಲವು ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇತ್ತಾದರೂ ರವಿವಾರ ಇದು ದೃಢಪಟ್ಟಿದೆ.

Advertisement

ಮೊಯಿನ್‌ ಅಲಿ, ಮಹೀಶ್‌ ತೀಕ್ಷಣ, ರೊಮಾರಿಯೊ ಶೆಫ‌ರ್ಡ್‌, ಗೆರಾಲ್ಡ್‌ ಕೋಟ್‌ಝಿ ಕೂಡ ಜೊಹಾನ್ಸ್‌ಬರ್ಗ್‌ ತಂಡದ ಪಾಲಾಗಿದ್ದಾರೆ. ಇವರಲ್ಲಿ ಅಲಿ ಮತ್ತು ತೀಕ್ಷಣ ಪ್ರಸ್ತುತ ಸಿಎಸ್‌ಕೆ ತಂಡದ ಸದಸ್ಯರಾಗಿದ್ದಾರೆ. ಸತತವಾಗಿ ಸಿಎಸ್‌ಕೆ ಪರ ಆಡುತ್ತಲೇ ಬಂದ ಡು ಪ್ಲೆಸಿಸ್‌ ಅವರನ್ನು ಮೆಗಾ ಹರಾಜಿನ ಸಮಯದಲ್ಲಿ ಉಳಿಸಿಕೊಂಡಿರಲಿಲ್ಲ. ಅವರು ಆರ್‌ಸಿಬಿ ತಂಡಕ್ಕೆ ಸೇರ್ಪಡೆ ಗೊಂಡು ನಾಯಕರೂ ಆದರು. ಇದೀಗ ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಮತ್ತೆ ಸಿಎಸ್‌ಕೆ ಒಡೆತನದ ತಂಡಕ್ಕೆ ಆಪ್ತರಾಗಿದ್ದಾರೆ.

ರೊಮಾರಿಯೊ ಶೆಫ‌ರ್ಡ್‌ ಕೆರಿಬಿಯನ್‌ ಕ್ರಿಕೆಟ್‌ ಲೀಗ್‌ನಲ್ಲಿ ಗಯಾನಾ ಅಮೆಜಾನ್‌ ವಾರಿಯರ್ ಹಾಗೂ ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡದ ಸದಸ್ಯರಾಗಿದ್ದಾರೆ.

ಗೆರಾಲ್ಡ್‌ ಕೋಟ್‌ಝಿ ದಕ್ಷಿಣ ಆಫ್ರಿಕಾದವರೇ ಆಗಿದ್ದು, ಇನ್ನೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿಲ್ಲ. ಡು ಪ್ಲೆಸಿಸ್‌ ಅವರ ಶಿಫಾರಸಿನ ಮೇರೆಗೆ ಇವರನ್ನು ಸೇರಿಸಿಕೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next