Advertisement

CSK; ಉಳಿಕೆ ಆಟಗಾರರ ಪಟ್ಟಿಯಲ್ಲಿ ಧೋನಿ ಹೆಸರು?

12:03 AM Sep 23, 2024 | Team Udayavani |

ಚೆನ್ನೈ: ಮುಂದಿನ ವರ್ಷದ ಐಪಿಎಲ್‌ ಆಟಗಾರರ ಹರಾಜಿಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಉಳಿಕೆ ಆಟಗಾರರ (ರಿಟೇನ್ಡ್ ) ಪಟ್ಟಿ ಪ್ರಕಟಿಸಲು ಮುಂದಾಗಿದ್ದು, ಇದರಲ್ಲಿ ಮಾಜಿ ನಾಯಕ ಎಂ.ಎಸ್‌. ಧೋನಿ ಅವರ ಹೆಸರು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

Advertisement

ಮುಂದಿನ ಐಪಿಎಲ್‌ಗೆ ಚೆನ್ನೈ ತಂಡ ಧೋನಿಯನ್ನು ಉಳಿಸಿಕೊಳ್ಳುವುದು ಅನುಮಾನ ಎನ್ನಲಾಗಿತ್ತು. ಕಾರಣ, ಫ್ರಾಂಚೈಸಿ 12 ಕೋಟಿ ರೂ.ಗೆ ಧೋನಿಯನ್ನು ತನ್ನಲ್ಲೇ ಉಳಿಸಿಕೊಳ್ಳುತ್ತ ಬಂದಿತ್ತು. ಇದು ಸಿಎಸ್‌ಕೆಗೆ ದುಬಾರಿ ಆಗಿ ಪರಿಣಮಿಸಿತ್ತು. ಆದರೀಗ, ಈ ಬಾರಿಯೂ ಸಿಎಸ್‌ಕೆಯ ಉಳಿಕೆ ಪಟ್ಟಿಯಲ್ಲಿ ಧೋನಿ ಇರಲಿದ್ದಾರೆ ಎನ್ನಲಾಗಿದೆ. ಧೋನಿ ಜತೆಗೆ ನಾಯಕ ಋತುರಾಜ್‌ ಗಾಯಕ್ವಾಡ್‌, ರವೀಂದ್ರ ಜಡೇಜ, ಶಿವಂ ದುಬೆ, ಮತೀಶ ಪತಿರಣ ಹೆಸರೂ ಪಟ್ಟಿಯಲ್ಲಿವೆ ಎಂದು ಮೂಲವೊಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next