Advertisement

CSK: ಸಿಡ್ನಿಯಲ್ಲಿ ಸಿಎಸ್‌ಕೆ ಕ್ರಿಕೆಟ್‌ ಅಕಾಡೆಮಿ

11:23 PM Jul 16, 2024 | Team Udayavani |

ಸಿಡ್ನಿ: ಐಪಿಎಲ್‌ನ ಪ್ರಮುಖ ಫ್ರಾಂಚೈಸಿ ಆಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಆಸ್ಟ್ರೇಲಿಯದ ಸಿಡ್ನಿಯಲ್ಲಿ ಶೀಘ್ರದಲ್ಲೇ ನೂತನ ಕ್ರಿಕೆಟ್‌ ಅಕಾಡೆಮಿ ತೆರೆಯಲಿದೆ.

Advertisement

ಸಿಡ್ನಿಯ ಸಿಲ್ವರ್‌ವಾಟರ್‌ ರೋಡ್‌ನ‌, ಸಿಡ್ನಿ ಒಲಿಂಪಿಕ್‌ ಪಾರ್ಕ್‌ನಲ್ಲಿ ಇದು ತಲೆಯೆತ್ತಿದ್ದು, ಸೆಪ್ಟಂಬರ್‌ನಲ್ಲಿ ಚಟುವಟಿಕೆಯನ್ನು ಆರಂಭಿಸಲಿದೆ. ಹೊರಾಂಗಣ ಮತ್ತು ಒಳಾಂಗಣ ತರಬೇತಿ ವ್ಯವಸ್ಥೆಯನ್ನು ಹೊಂದಿರುವ ಇಲ್ಲಿ ಬಾಲಕ, ಬಾಲಕಿಯರಿಗೆ ವರ್ಷದ ಎಲ್ಲ ದಿನವೂ ವಿಶೇಷ ಕೋಚಿಂಗ್‌ ನೀಡಲಾಗುವುದು.

ಇದು ಸಿಎಸ್‌ಕೆಯ 3ನೇ ಕ್ರಿಕೆಟ್‌ ಅಕಾಡೆಮಿ. ಯುಎಸ್‌ಎ (ಡಲ್ಲಾಸ್‌) ಮತ್ತು ಯುಕೆಯಲ್ಲಿ (ರೀಡಿಂಗ್‌) ಉಳಿದೆರಡು ಅಕಾಡೆಮಿಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next