Advertisement

Mangaluru ಬ್ಯಾರಿ ಭವನ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ: ಖಾದರ್‌

11:10 PM Sep 06, 2024 | Team Udayavani |

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಶುಕ್ರವಾರ ನೆರವೇರಿತು.

Advertisement

2022ನೇ ಸಾಲಿನ ಗೌರವ ಪ್ರಶಸ್ತಿಯನ್ನು ಹಂಝತುಲ್ಲಾ ವೈ. ಕುವೇಂಡ ಬೆಂಗಳೂರು, ಮರಿಯಮ್ ಇಸ್ಮಾಯಿಲ್ ಉಳ್ಳಾಲ, ಎಂ.ಜಿ. ಶಾಹುಲ್ ಹಮೀದ್‌ ಗುರುಪುರ ಹಾಗೂ 2023ನೇ ಸಾಲಿನ ಗೌರವ ಪ್ರಶಸ್ತಿಯನ್ನು ಹಾಜಿ ಟಿ.ಎ. ಅಲಿಯಬ್ಬ ಜೋಕಟ್ಟೆ, ಮುಹಮ್ಮದ್‌ ಶರೀಫ್ ನಿರ್ಮುಂಜೆ, ಅಶ್ರಫ್ ಅಪೋಲೊ ಕಲ್ಲಡ್ಕ ಅವರಿಗೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಪ್ರದಾನ ಮಾಡಿದರು.

ಕಾರಣಾಂತರದಿಂದ ಪಾಲ್ಗೊಳ್ಳಲಾಗದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಕಳುಹಿಸಿಕೊಟ್ಟ ಸಂದೇಶವನ್ನು ಕಾರ್ಯಕ್ರಮದಲ್ಲಿ ವಾಚಿಸಲಾಯಿತು.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಟೆಕಲ್‌-ಅಸೈಗೋಳಿ ಮಧ್ಯದ ಪ್ರಮುಖ ರಸ್ತೆಯ ಪಕ್ಕದಲ್ಲೇ ಬ್ಯಾರಿ ಭವನ ನಿರ್ಮಾಣಕ್ಕೆ ಜಮೀನು ಗುರುತಿಸಲಾಗಿದ್ದು, 6 ಕೋ.ರೂ. ಅನುದಾನವೂ ಬಿಡುಗಡೆಗೊಂಡಿದೆ. ಹಾಗಾಗಿ ಬ್ಯಾರಿ ಭವನ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಂದೇಶದಲ್ಲಿ ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ| ಅಬೂಬಕ್ಕರ್‌ ಸಿದ್ದೀಕ್‌ ಬೆಲ್ಕಿರಿ ದ್ವೆ„ಮಾಸಿಕ ಸಂಚಿಕೆ ಬಿಡುಗಡೆ ಮಾಡಿದರು. ಉಪನ್ಯಾಸಕ ಅಬ್ದುಲ್ ರಝಾಕ್‌ ಅನಂತಾಡಿ ಅಭಿನಂದನಾ ಭಾಷಣ ಮಾಡಿದರು. ಅಕಾಡೆಮಿ ಅಧ್ಯಕ್ಷ ಉಮರ್‌ ಯು.ಎಚ್‌. ಅಧ್ಯಕ್ಷತೆ ವಹಿಸಿªರು.

Advertisement

ಮುಖ್ಯ ಅತಿಥಿಗಳಾಗಿ ತುಳು ಅಕಾಡಮಿ ಅಧ್ಯಕ್ಷ ತಾರನಾಥ್‌ ಗಟ್ಟಿ ಕಾಪಿಕಾಡ್‌, ಕೊಂಕಣಿ ಅಕಾಡಮಿ ಅಧ್ಯಕ್ಷ ಸ್ಟಾನಿ ಜೋಕಿಂ ಅಲ್ವಾರಿಸ್‌, ಯಕ್ಷಗಾನ ಅಕಾಡಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷರಾದ ರಹೀಂ ಉಚ್ಚಿಲ್‌, ಬಿ.ಎ. ಮುಹಮ್ಮದ್‌ ಹನೀಫ್, ಕರಂಬಾರ್‌ ಮುಹಮ್ಮದ್‌ ಭಾಗವಹಿಸಿದ್ದರು.

ಬ್ಯಾರೀಸ್‌ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಹಾಜಿ ಎಸ್‌. ಎಂ. ರಶೀದ್‌, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್‌ ಬೈಕಂಪಾಡಿ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಎಂ. ಅಸ್ಲಾಂ, ಪ್ರಮುಖರಾದ ಮುಹಮ್ಮದ್‌ ಮೂಡಿಗೆರೆ, ಯು.ಕೆ. ಹಮೀದ್‌ ಹಾಜಿ, ಅಬ್ದುಲ್‌ ಅಝೀಝ್ ಬೈಕಂಪಾಡಿ, ಯೂಸುಫ್ ವಖಾ¤ರ್‌, ಆಲಿಕುಂಞಿ ಪಾರೆ, ಹುಸೈನ್‌ ಕಾಟಿಪಳ್ಳ, ಅಕಾಡೆಮಿ ರಿಜಿಸ್ಟ್ರಾರ್‌ ರಾಜೇಶ್‌ ಜಿ., ಸದಸ್ಯರಾದ ಹಫ್ಸಾ ಬಾನು ಬೆಂಗಳೂರು ಪಾಲ್ಗೊಂಡಿದ್ದರು.

ಸದಸ್ಯರಾದ ಅಬ್ದುಲ್‌ ಶರೀಫ್ ಸ್ವಾಗತಿಸಿದರು. ಬಿ.ಎಸ್‌. ಮುಹಮ್ಮದ್‌ ವಂದಿಸಿದರು. ಯು.ಎಚ್‌. ಖಾಲಿದ್‌ಉಜಿರೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.