Advertisement
ಉತ್ತಮ ಫಾರ್ಮ್ ನಲ್ಲಿರುವ ಫಾಫ್ ಡು ಪ್ಲೆಸಿಸ್ ಮತ್ತು ಇಮ್ರಾನ್ ತಾಹಿರ್ ರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಡೆ ಅಚ್ಚರಿಗೆ ಕಾರಣವಾಗಿತ್ತು. ಟಿ20 ವಿಶ್ವಕಪ್ ಆಡಬೇಕೆಂಬ ಕಾರಣಕ್ಕೆ ಪ್ಲೆಸಿಸ್ ಇತರ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಸಿಪಿಎಲ್ ಮತ್ತು ಐಪಿಎಲ್ ನಲ್ಲಿ ಮಿಂಚಿದ್ದ ಪ್ಲೆಸಿಸ್ ರನ್ನು ಕಡೆಗಣಿಸಲಾಗಿತ್ತು. ಇಮ್ರಾನ್ ತಾಹಿರ್ ಗೂ ಹೀಗೆ ಮಾಡಲಾಗಿತ್ತು.
Related Articles
Advertisement
ದಕ್ಷಿಣ ಆಫ್ರಿಕಾ ಕ್ರಿಕೆಟ್ ನ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಆಟಗಾರ ಡೇಲ್ ಸ್ಟೇನ್, “ ಈ ಟ್ವಿಟ್ಟರ್ ಖಾತೆಯನ್ನು ಯಾರು ನಿರ್ವಹಿಸುತ್ತಿದ್ದಾರೆ? ಫಾಪ್ ಮತ್ತು ತಾಹಿರ್ ಇದುವರೆಗೆ ನಿವೃತ್ತಿ ಹೊಂದಿಲ್ಲ. ಇವರಿಬ್ಬರು ಇಷ್ಟು ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ಕ್ರಿಕೆಟ್ ಗೆ ಸೇವೆ ಸಲ್ಲಿಸಿದ್ದಾರೆ. ಆದರೆ ಅವರನ್ನು ಉಲ್ಲೇಖಿಸುವಷ್ಟೂ ಯೋಗ್ಯರಲ್ಲವೇ? ಇದು ಅಸಹ್ಯಕರ” ಎಂದು ಕಿಡಿಕಾರಿದ್ದಾರೆ.
ತಮ್ಮ ಟ್ವೀಟ್ ಗೆ ವಿರೋಧ ಎದುರಾಗುತ್ತಿದ್ದಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಟ್ವೀಟ್ ನ್ನು ಡಿಲೀಟ್ ಮಾಡಿದೆ.