Advertisement
ಸಾರ್ವಜನಿಕರು ಇದಕ್ಕಾಗಿ ಸರಕಾರಿ ಇಲಾಖೆಗಳಿಗೆ ಎಡತಾಕುವ ಅಗತ್ಯವಿಲ್ಲ. ಸಿಆರ್‌ಝಡ್ ನಕ್ಷೆಯ ಸಂಪೂರ್ಣ ಮಾಹಿತಿಯುಳ್ಳ ಮೊಬೈಲ್ ಆ್ಯಪ್ ಶೀಘ್ರವೇ ಬಿಡು ಗಡೆ ಯಾಗಲಿದೆ. ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಇದನ್ನು ರೂಪಿಸುತ್ತಿದೆ.ಸಮುದ್ರದಿಂದ 500 ಮೀಟರ್‌ನ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ನಡೆಸಲು ಅಗತ್ಯವಿರುವ ಕಾನೂನು ಮಾಹಿತಿಯೂ ಆ್ಯಪ್‌ನಲ್ಲಿ ಲಭ್ಯವಿರಲಿದೆ. ಈ ಸಂಬಂಧ ಬೆಂಗಳೂರಿನ “ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್’ ನಿಂದ ಮಾಹಿತಿ ಪಡೆದು ಆ್ಯಪ್ ಸಿದ್ಧಪಡಿಸಲು ಚಿಂತಿಸಲಾಗಿದೆ.
ಪ್ರಸ್ತುತ ಕರಾವಳಿ ಕರ್ನಾಟಕದಲ್ಲಿ 1996ರ ಸಿಆರ್‌ಝಡ್ ಅಧಿಸೂಚನೆಯ ನಕ್ಷೆ ಜಾರಿಯಲ್ಲಿದ್ದು, 2011ರ ಹೊಸ ನಕ್ಷೆ ತಯಾ ರಿಸು ವಂತೆ ದೇಶದ ಕರಾವಳಿ ತೀರದ ರಾಜ್ಯ ಗಳಿಗೆ ಸೂಚಿಸಲಾಗಿತ್ತು. ಕೇಂದ್ರ ಸಚಿ ವಾಲಯವು 2014ರ ಮಾ. 14ರಂದು ಚೆನ್ನೈಯ ನ್ಯಾಶನಲ್ ಸೆಂಟರ್ ಫಾರ್ ಸಸ್ಟನೇಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ (ಎನ್‌ಸಿಎಸ್‌ಸಿಎಂ) ಎಂಬ ಸಂಸ್ಥೆಯನ್ನು ಭರತ ರೇಖೆ (ಹೈಟೈಡ್ ಲೈನ್) ಹಾಗೂ ಇಳಿತ ರೇಖೆ (ಲೋ ಟೈಡ್ ಲೈನ್)ಗಳನ್ನು ಗುರುತಿಸಲು ಅಧಿಕೃತ ಸಂಸ್ಥೆಯನ್ನಾಗಿ ಆಯ್ಕೆ ಮಾಡಿತ್ತು. ರಾಜ್ಯದ ಕಡಲ ತೀರ ವಲಯ ನಿರ್ವಹಣಾ ಯೋಜನೆಗಳನ್ನು ತಯಾರಿಸಲು ರಾಜ್ಯ ಸರಕಾರವು ಎನ್‌ಸಿಎಸ್‌ಸಿಎಂಗೆ ಸೂಚಿಸಿತ್ತು. ಈ ಸಂಸ್ಥೆಯು, ರಾಜ್ಯದ ಕರಾವಳಿ ತೀರ ಅಧ್ಯಯನ, ಸ್ಥಳ ಪರಿಶೀಲನೆ ನಡೆಸಿ, ಕೆಲವು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಯೋಜನೆಯ ಕರಡು ಸಿದ್ಧಪಡಿಸಿತ್ತು. ಇದಕ್ಕೆ ಅನುಮೋದನೆ ದೊರಕಿದೆ. ಕರ್ನಾಟಕ ಹಾಗೂ ಒಡಿಶಾ ಮಾತ್ರ ಹೊಸ ನಕ್ಷೆ ಸಿದ್ಧಗೊಳಿಸಿ ಕೇಂದ್ರ ಸಚಿವಾಲಯಕ್ಕೆ ನೀಡಿವೆ.
Related Articles
ಸಿಆರ್‌ಝಡ್ ನಕ್ಷೆ ಸಿದ್ಧವಾಗುವವರೆಗೆ “ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರ’ ನೀಡಲು ರಾಷ್ಟ್ರೀಯ ಹಸಿರು ನ್ಯಾಯಪೀಠವು ಕಳೆದ ನ. 22ರಂದು ನಿರ್ಬಂಧ ಹೇರಿತ್ತು. ಇದರಿಂದಾಗಿ ದ.ಕ. ಜಿಲ್ಲೆಯ ಸುಮಾರು 85 ಮತ್ತು ಉಡುಪಿಯ ಸುಮಾರು 120ರಷ್ಟು ಅರ್ಜಿಗಳು ಬಾಕಿ ಉಳಿದಿದ್ದವು. ಗೃಹ ನಿರ್ಮಾಣ ಚಟುವಟಿಕೆಗಳೂ ಸ್ಥಗಿತಗೊಂಡಿತ್ತು. ಆದರೆ ರಾಜ್ಯದಿಂದ ಸಲ್ಲಿಕೆಯಾದ ನಕ್ಷೆಯನ್ನು ಮೇ 24ರಂದು ಕೇಂದ್ರ ಸರಕಾರ ಮೂಲ ರೂಪದಲ್ಲಿ ಅನುಮೋದಿಸಿ ಜು. 18ರಂದು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಆದರೆ ಆದೇಶ ಪ್ರತಿ ಇನ್ನಷ್ಟೇ ದೊರೆಯಬೇಕಿದೆ. ದ.ಕ. ಜಿಲ್ಲೆಯಲ್ಲಿ ಎನ್‌ಒಸಿ ಸಿಗದೆ ಸಮಸ್ಯೆ ಎದುರಾದ ಕಾರಣ ಬುಧವಾರದಿಂದ ತಾತ್ಕಾಲಿಕವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಪರಿಸರ ಇಲಾಖೆಯ ದ.ಕ. ಜಿಲ್ಲಾ ಪ್ರಾದೇಶಿಕ ನಿರ್ದೇಶಕರಾದ ಡಾ| ದಿನೇಶ್ ಕುಮಾರ್ ತಿಳಿಸಿದ್ದಾರೆ.
Advertisement